ಮಾಗಡಿ: ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ವತಿಯಿಂದ ಪಟ್ಟಣದ ಕೋಟೆ ಮೈದಾನದಲ್ಲಿ ಶುಕ್ರವಾರದಿಂದ ಮೂರು ದಿನಗಳ ಕಾಲ ನಡೆಯಲಿರುವ ಮಾಗಡಿ ಸಂಭ್ರಮ - 2026 ಕಾರ್ಯಕ್ರಮಕ್ಕೆ ಅದ್ಧೂರಿಯಾಗಿ ಚಾಲನೆ ಸಿಕ್ಕಿತು
ಮಾಗಡಿ: ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ವತಿಯಿಂದ ಪಟ್ಟಣದ ಕೋಟೆ ಮೈದಾನದಲ್ಲಿ ಶುಕ್ರವಾರದಿಂದ ಮೂರು ದಿನಗಳ ಕಾಲ ನಡೆಯಲಿರುವ ಮಾಗಡಿ ಸಂಭ್ರಮ - 2026 ಕಾರ್ಯಕ್ರಮಕ್ಕೆ ಅದ್ಧೂರಿಯಾಗಿ ಚಾಲನೆ ಸಿಕ್ಕಿತು.
ದೀಪ ಬೆಳಗುವ ಮೂಲಕ ಮಾಗಡಿ ಸಂಭ್ರಮಕ್ಕೆ ಮುನ್ನುಡಿ ಬರೆದ ಪೌರಾಡಳಿತ ಸಚಿವರು ಆದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಬಾಲಕೃಷ್ಣರವರು, ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ನವರು ತಮ್ಮ ಕರ್ತವ್ಯದ ನಡುವೆಯೂ ಮಾಗಡಿ ಸಂಭ್ರಮದಂತಹ ಕಾರ್ಯಕ್ರಮಗಳ ಮೂಲಕ ಗುಡಿ ಕೈಗಾರಿಕೆಗಳು ಹಾಗೂ ವಿವಿಧ ಸ್ಪರ್ಧೆಗಳ ಮೂಲಕ ಮಹಿಳೆಯರನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಪ್ರತಿನಿತ್ಯ ಕೆಲಸ ಕಾರ್ಯಗಳಲ್ಲಿಯೇ ಮಗ್ನರಾಗಿರುವ ಜನರಿಗೂ ಬದಲಾವಣೆ ಬೇಕಿದೆ. ಹಾಗಾಗಿ ಇಂತಹ ಕಾರ್ಯಕ್ರಮಗಳು ಆಗಿಂದಾಗೆ ನಡೆಯುತ್ತಿರಬೇಕು. ಜನರು ಮಾಗಡಿ ಸಂಭ್ರಮದಲ್ಲಿ ಭಾಗಿಯಾಗಿ ಆಸ್ವಾದಿಸುವ ಮೂಲಕ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಮಾಗಡಿ ಸಂಭ್ರಮ ವಿಶಿಷ್ಟವಾದ ಕಾರ್ಯಕ್ರಮ. ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮದಲ್ಲಿ ತಿಂಡಿ ತಿನಿಸುಗಳನ್ನು ಸವಿಯುವ ಜೊತೆಗೆ ವಿವಿಧ ಸ್ಪರ್ಧೆಗಳಲ್ಲಿ ಮಹಿಳೆಯರು, ಪುಟ್ಟ ಮಕ್ಕಳು ಭಾಗವಹಿಸಲು ವೇದಿಕೆ ಕಲ್ಪಿಸಲಾಗಿದೆ. ಮಾಗಡಿ ಪಟ್ಟಣ ಮತ್ತು ತಾಲೂಕಿನ ಜನರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂದು ತಿಳಿಸಿದರು.ಕಾಮನ್ ಮ್ಯಾನ್ - ನಾನೆ ಸಿಎಂ ಚಿತ್ರ ತಂಡದ ನಿರ್ದೇಶಕರು, ನಾಯಕ ನಟ ಎಲ್ಲರು ಚಿರಪರಿಚಿತರು. ಈ ಸಿನಿಮಾವನ್ನು ರಾಜಕಾರಣಿಗಳನ್ನು ಕುರಿತು ಚಿತ್ರೀಕರಿಸಲಾಗಿದೆ. ಹೀಗಾಗಿ ಸಿನಿಮಾ ಬಗ್ಗೆ ಎಲ್ಲರಲ್ಲು ಕುತೂಹಲ ಇರುತ್ತದೆ. ಜನರು ಸಿನಿಮಾ ವೀಕ್ಷಿಸಿ, ಯಶಸ್ವಿಗೊಳಿಸಲಿ ಎಂದು ಬಾಲಕೃಷ್ಣ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಚಿವ ಬಾಲಕೃಷ್ಣ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಕಾಂಗ್ರೆಸ್ ಮುಖಂಡರಾದ ಜೆ.ಪಿ.ಚಂದ್ರೇಗೌಡ, ರಾಜಣ್ಣ, ಪುರುಷೋತಮ್, ಜಯಮ್ಮ, ವೃತ್ತ ನಿರೀಕ್ಷಕ ಶ್ರೀನಿವಾಸ್, ಕರ್ನಾಟಕ ನವ ನಿರ್ಮಾಣ ವೇದಿಕೆ ರಾಜ್ಯ ಮಹಿಳಾಧ್ಯಕ್ಷೆ ರಮಾಮಣಿ,ಏಷ್ಯಾನೆಟ್ ಸುವರ್ಣ ನ್ಯೂಸ್ ನ ಸೀನಿಯರ್ ವೈಸ್ ಪ್ರೆಸಿಡೆಂಟ್ ಅನಿಲ್ ಸುರೇಂದ್ರ, ಇವೆಂಟ್ ವೈಸ್ ಪ್ರೆಸಿಡೆಂಟ್ ವಿಜಯ್ ಕುಮಾರ್, ಅಸೋಸಿಯೆಟ್ ವೈಸ್ ಪ್ರೆಸಿಡೆಂಟ್ ಎಂ.ಬಿ.ಶ್ರೀನಿವಾಸ್ , ವೈಸ್ ಪ್ರೆಸಿಡೆಂಟ್ ಪ್ರದೀಪ್, ಸ್ಪೆಷಲ್ ಪ್ರಾಜೆಕ್ಟ್ ಎಡಿಟರ್ ವಿನೋದ್ ಬಿ.ನಾಯ್ಕ, ಸುವರ್ಣ ನ್ಯೂಸ್ ಡಿಜಿಎಂ ರಾಕೇಶ್ , ಕನ್ನಡಪ್ರಭ ಮಾಗಡಿ ವರದಿಗಾರ ಮಾದೇಶ್, ಜಾಹೀರಾತು ವಿಭಾಗದ ಮಹೇಶ್, ನರಸೇಗೌಡ ಮತ್ತಿತರರು ಉಪಸ್ಥಿತರಿದ್ದರು.
---------------------------...ಬಾಕ್ಸ್ ...
ಮಾಗಡಿ ಸಂಭ್ರಮ ಕಣ್ತುಂಬಿಕೊಂಡು ಸಂಭ್ರಮಿಸಿದ ಜನರುಮಾಗಡಿ ಪಟ್ಟಣ ಮಾತ್ರವಲ್ಲದೆ ಹಲವು ಭಾಗಗಳಿಂದ ಕಲಾ ಪ್ರೇಮಿಗಳು ತುಂತುರು ಮಳೆಯನ್ನು ಲೆಕ್ಕಿಸದೆ ಕೋಟೆ ಮೈದಾನಕ್ಕೆ ಆಗಮಿಸಿ ಮಾಗಡಿ ಸಂಭ್ರಮವನ್ನು
ಕಣ್ತುಂಬಿಕೊಂಡರು.ಮೈದಾನದಲ್ಲಿ ಅಳವಡಿಸಿದ್ದ ಸ್ಟಾಲ್ ಗಳಲ್ಲಿ ಬಗೆ ಬಗೆಯ ತಿಂಡಿ ತಿನಿಸುಗಳನ್ನು ಜನರು ಸವಿದರು. ಮಹಿಳೆಯರು ಗೃಹೋಪಯೋಗಿ, ಕರಕುಶಲ ವಸ್ತುಗಳು, ಮಸಾಲೆ
ಪದಾರ್ಥಗಳು ಮಾತ್ರವಲ್ಲದೆ ಲೈಫ್ ಸ್ಟೈಲ್ ಮಳಿಗೆಗಳಿಗೂ ತೆರಳಿ ಖರೀದಿಯಲ್ಲಿ ತೊಡಗಿದ್ದರು.ಶುಕ್ರವಾರ ಸಂಜೆ ಮಾಗಡಿ ಸಂಭ್ರಮ ಗಾಯನ ಕಾರ್ಯಕ್ರಮದ ಮೂಲಕ ಆರಂಭಗೊಂಡಿತು. ರಾತ್ರಿ 7 ಗಂಟೆ ವೇಳೆಗೆ ಕಾಮನ್ ಮ್ಯಾನ್ - ನಾನೆ ಸಿಎಂ ಚಿತ್ರತಂಡ ಮತ್ತು
ಬಿಗ್ ಬ್ಯಾಸ್ ಖ್ಯಾತಿಯ ರಾಶಿಕಾ ಶೆಟ್ಟಿ ಭೇಟಿ ನೀಡಿದ್ದರು. ಮಿಮಿಕ್ರಿ ಗೋಪಿರವರ ಹಾಸ್ಯ ಸಂಜೆ ನೋಡುಗರನ್ನು ನಗೆ ಗಡಲಲ್ಲಿ ತೇಲಿಸಿದರೆ, ವೈಷ್ಣವಿ ಮೆಲೋಡಿಸ್ ತಂಡದಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಚಿತ್ರ ಗೀತೆಗಳು ಸಭಿಕರನ್ನು ರಂಜಿಸಿತು. ಮಾಗಡಿ ಪ್ರತಿಭೆಗಳು ಮನರಂಜನಾ ಕಾರ್ಯಕ್ರಮ ಪ್ರದರ್ಶಿಸಿದರು.
--------------------------ಇಂದಿನ ವಿಶೇಷ ಕಾರ್ಯಕ್ರಮಗಳ
ಸೆ.5ರಂದು ಬಳಗ್ಗೆ 11 ರಿಂದ 12 ಗಂಟೆವರೆಗೆ ಮಕ್ಕಳಿಗಾಗಿ ಮುದ್ದು ಮಗು ಮತ್ತು ವೇಷ ಭೂಷಣ , ಮಧ್ಯಾಹ್ನ 12 ರಿಂದ 2 ಗಂಟೆವರೆಗೆ ಮಹಿಳೆಯರಿಗೆ ಅಡುಗೆ ಮಹಾರಾಣಿ(1ನೇ ಸುತ್ತು), ಮಧ್ಯಾಹ್ನ 2ರಿಂದ 5ಗಂಟೆವರೆಗೆ ಓಪನ್ ಸ್ಟೇಜ್ ಮತ್ತು ಗಾಯನ, ಸಂಜೆ 5 ರಿಂದ 6ಗಂಟೆವರೆಗೆ ಮಿನಿಟ್ ಟು ವಿನ್ ಇಟ್ ಗೇಮ್ಸ್ , ಸಂಜೆ 6 ರಿಂದ 7
ಗಂಟೆವರೆಗೆ ಬೊಂಬಾಟ್ ಜೋಡಿ, ಕಿಡ್ಸ್ ಮತ್ತು ಫ್ಯಾಮಿಲಿ ಫ್ಯಾಷನ್ ಶೋ, ಸಂಜೆ 7 ರಿಂದ 8 ಗಂಟೆವರೆಗೆ ತಪಸ್ವಿನಿ ಪೂಣಚ್ಚ ಹಾಗೂ ಸ್ಟಾರ್ ಸುವರ್ಣ ವಾಹಿನಿಯ ಆನಂದನಿಲಯ ಸಿರಿಯಲ್ ತಂಡದೊಂದಿಗೆ ಸಂವಾದ ಹಾಗೂ ರಾತ್ರಿ 8 ರಿಂದ 10ಗಂಟೆವರೆಗೆ ನೃತ್ಯ ಹಾಗೂ ಮಾಗಡಿ ಪ್ರತಿಭೆಗಳಿಂದ ಮನರಂಜನಾ ಕಾರ್ಯಕ್ರಮಗಳು
ನಡೆಯಲಿವೆ.4ಕೆಆರ್ ಎಂಎನ್ 8,9,10.ಜೆಪಿಜಿ
8.ಮಾಗಡಿ ಸಂಭ್ರಮ ಸಮಾರಂಭದಲ್ಲಿ ಸಚಿವ ಬಾಲಕೃಷ್ಣ ಅವರನ್ನು ಸನ್ಮಾನಿಸಲಾಯಿತು.9.ಮಾಗಡಿ ಸಂಭ್ರಮ ಸಮಾರಂಭವನ್ನು ಸಚಿವ ಬಾಲಕೃಷ್ಣ ಉದ್ಘಾಟಿಸಿದರು.
10.ಮಾಗಡಿ ಸಂಭ್ರಮ ಕಾರ್ಯಕ್ರಮದಲ್ಲಿ ಮಳಿಗೆಗಳನ್ನು ಸಚಿವ ಬಾಲಕೃಷ್ಣ ವೀಕ್ಷಣೆ ಮಾಡಿದರು.