ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸಂಪುಟದಲ್ಲಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗಿರುವ ಜೇವರ್ಗಿ ಶಾಸಕರಾದ ಡಾ. ಅಜಯ್ ಸಿಂಗ್ ಸಚಿವರಾದ ನಂತರ ಇದೇ ಮೊದಲ ಬಾರಿಗೆ ತವರು ಜಿಲ್ಲೆ ಕಲುರಗಿಗೆ ಆ. 22ರಂದು ಹಾಗೂ ತವರು ಕ್ಷೇತ್ರ ಜೇವರ್ಗಿಗೆ ಆ.23ರಂದು ಭೇಟಿ ನೀಡುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ, ಕಲಬುರಗಿ.ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸಂಪುಟದಲ್ಲಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗಿರುವ ಜೇವರ್ಗಿ ಶಾಸಕರಾದ ಡಾ. ಅಜಯ್ ಸಿಂಗ್ ಸಚಿವರಾದ ನಂತರ ಇದೇ ಮೊದಲ ಬಾರಿಗೆ ತವರು ಜಿಲ್ಲೆ ಕಲುರಗಿಗೆ ಆ. 22ರಂದು ಹಾಗೂ ತವರು ಕ್ಷೇತ್ರ ಜೇವರ್ಗಿಗೆ ಆ.23ರಂದು ಭೇಟಿ ನೀಡುತ್ತಿದ್ದಾರೆ.ಸಚಿವರ ಚೊಚ್ಚಿಲ ಭೇಟಿ ಹಿನ್ನೆಲೆಯಲ್ಲಿ ಅಭಿಮಾನಿಗಳು ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲು ಸಜ್ಜಾಗಿದ್ದಾರೆ. ತಮ್ಮ ನಾಯಕನಿಗೆ ಸಚಿವ ಸ್ಥಾನ ದೊರಕಿರುವುದು ಅಭಿಮಾನಿಗಳಲ್ಲಿ ಸಂತಸ ಹುಟ್ಟು ಹಾಕಿದ್ದು, ಎಲ್ಲರೂ ಸಚಿವರನ್ನು ಆ. 22ರಂದು ನಗರೇಶ್ವ ಶಾಲೆಯಿಂದ 3 ಗಂಟೆ ಕಾಲ ತೆರೆದ ಜೀಪಲ್ಲಿ ಮೆರವಣಿಗೆ ಮಾಡುತ್ತ ಪಂಡಿತ ರಂಗ ಮಂದಿರವರೆಗೂ ಸ್ವಾಗತಿಸಲು ಮುಂದಾಗಿದ್ದಾರೆ.ಡಾ. ಅಜಯ್ ಅಭಿಮಾನಿಗಳ ಬಳಗದವರು ಇದಕ್ಕಾಗಿ ನಾಸಿಕ್ ಢೋಲ್, ಡೊಳ್ಳು ಸೇರಿದಂತೆ ಹಲವು ವಾದ್ಯ ಪರಿಕರಗಳನ್ನು ತಂದು ಸ್ವಾಗತಕ್ಕೆ ಸಜ್ಜಾದರೆ ಇತ್ತ ಜೇವರ್ಗಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಪದಾಧಿಕಾರಿಗಳು ಎಲ್ಲರೂ ಭಾನುವಾರ ಅಜಯ್ ಸಿಂಗ್ ಸ್ವಾಗತಕ್ಕೆ ಸಜ್ಜಾಗಿದ್ದಾರೆ.ಕಳೆದ 9 ವರ್ಷಗಳಿಂದ ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದ ಅಜಯ್ ಸಿಂಗ್ ಅವರಿಗೆ ಡಿಕೆಶಿ ಸಂಪುಟದಲ್ಲಿ ಸಚಿವ ಸ್ಥಾನ ದೊರಕಿದೆ. ಇದು ನಮಗೆ ಸಂತಸ ತಂದಿದೆ ಎಂದು ಹೇಳುತ್ತಿರುವ ಅಭಿಮಾನಿಗಳು ಜೇವರ್ಗಿ ಪ್ರಗತಿಗೆ, ಕಲಬುರಗಿ ಸರ್ವತೋಮುಖ ಬೆಳವಮಿಗೆಗೆ ಈ ಸಚಿವಗಿಿ ಅನುಕೂಲವಾಗಲಿ ಎಂಬ ನಿರೀಕ್ಷೆಯಲ್ಲಿದ್ದಾರೆ.ಡಾ. ಅಜಯ್ ಸಿಂಗ್ ಅವರ ಚೊಚ್ಚಿಲ ಭೇಟಿಯ ವೇದಿಕೆ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ, ಸಚಿವರಾದ ಡಾ. ಶರಣಪ್ರಕಾಶ ಪಾಟೀಲ್, ಬೀದರ್‌ನ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ , ಕಲಬುರಗಿ, ಬೀದರ್, ರಾಯಚೂರು ಶಾಸಕರು, ಸಂಸದರು, ಕಾಂಗ್ರೆಸ್ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.