ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಸಚಿವ ಮಲ್ಲಿಕಾರ್ಜುನ್ ಭೂಮಿ ಪೂಜೆ

| Published : Feb 16 2024, 01:46 AM IST

ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಸಚಿವ ಮಲ್ಲಿಕಾರ್ಜುನ್ ಭೂಮಿ ಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

ಅನೇಕ ಖಾಸಗಿ ಶಾಲೆಗಳ ಮಧ್ಯೆ ಈ ಸರ್ಕಾರಿ ಶಾಲೆ 550 ಮಕ್ಕಳಿಗೆ ಶಿಕ್ಷಣ ನೀಡುತ್ತಿರುವುದು ಇಲ್ಲಿಯ ಶಿಕ್ಷಕರ ಅರ್ಪಣಾ ಮನೋಭಾವನೆ ಸೇವೆಗೆ ಸಾಕ್ಷಿಯಾಗಿದೆ. ಮುಂದೆಯೂ ಇದೆ ರೀತಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ವಿಜೇತರಾದ ಸೇವಾದಳ ತಂಡಕ್ಕೆ ಪಾರಿತೋಷಕ ವಿತರಿಸಿ ಮಕ್ಕಳ ಸಾಧನೆಗೆ ಅಭಿನಂದಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ನಗರದ ನಿಟ್ಟುವಳ್ಳಿಯ ಸರ್ಕಾರಿ ಆರ್‌ಎಂಎಸ್‌ಎ ಶಾಲೆಯಲ್ಲಿ ಗುರುವಾರ ₹41.50 ಲಕ್ಷದ ವಿವೇಕ ಯೋಜನೆಯಡಿ ನಿರ್ಮಿಸುತ್ತಿರುವ ನೂತನ ಕೊಠಡಿಗಳ ಭೂಮಿ ಪೂಜೆ ಕಾರ್ಯಕ್ರಮ ನಡೆಯಿತು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಅನೇಕ ಖಾಸಗಿ ಶಾಲೆಗಳ ಮಧ್ಯೆ ಈ ಸರ್ಕಾರಿ ಶಾಲೆ 550 ಮಕ್ಕಳಿಗೆ ಶಿಕ್ಷಣ ನೀಡುತ್ತಿರುವುದು ಇಲ್ಲಿಯ ಶಿಕ್ಷಕರ ಅರ್ಪಣಾ ಮನೋಭಾವನೆ ಸೇವೆಗೆ ಸಾಕ್ಷಿಯಾಗಿದೆ. ಮುಂದೆಯೂ ಇದೆ ರೀತಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ವಿಜೇತರಾದ ಸೇವಾದಳ ತಂಡಕ್ಕೆ ಪಾರಿತೋಷಕ ವಿತರಿಸಿ ಮಕ್ಕಳ ಸಾಧನೆಗೆ ಅಭಿನಂದಿಸಿದರು.

ಈ ವಾರ್ಡಿನ ಪಾಲಿಕೆ ಸದಸ್ಯರಾದ ಸವಿತಾ ಹುಲ್ಮನಿ ಗಣೇಶ್‌ರವರ ಶಿಕ್ಷಣದ ಆಸಕ್ತಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು ಶಾಲೆಗೆ ಬೇಕಾಗುವ ಇನ್ನುಳಿದ ವ್ಯವಸ್ಥೆಗಳ ಮಂಜೂರು ಮಾಡುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಬಿಇಒ ಡಾ.ಪುಷ್ಪಲತಾ, ಪಾಲಿಕೆ ಸದಸ್ಯರು, ಎಸ್‌ಡಿಎಂಸಿ ಅಧ್ಯಕ್ಷರು, ಪದಾಧಿಕಾರಿಗಳು, ಆಯುಕ್ತರು, ಇಂಜಿನಿಯರ್, ಗುತ್ತಿಗೆದಾರರು, ಶಾಲಾ ಸಿಬ್ಬಂದಿ ಹಾಜರಿದ್ದರು. ಮುಖ್ಯ ಶಿಕ್ಷಕ ಎಂ.ಸುರೇಶ್ ಸ್ವಾಗತಿಸಿದರು, ಕೆ.ಟಿ.ಜಯಪ್ಪ ವಂದಿಸಿದರು.