ಅರಣ್ಯ ಪದವೀಧರ ವಿಧ್ಯಾರ್ಥಿಗಳ ಮನವಿಗೆ ಸಚಿವ ಸ್ಪಂದನೆ

| Published : Feb 29 2024, 02:06 AM IST

ಅರಣ್ಯ ಪದವೀಧರ ವಿಧ್ಯಾರ್ಥಿಗಳ ಮನವಿಗೆ ಸಚಿವ ಸ್ಪಂದನೆ
Share this Article
  • FB
  • TW
  • Linkdin
  • Email

ಸಾರಾಂಶ

ವಲಯ ಅರಣ್ಯಾಧಿಕಾರಿ ಸೇರಿದಂತೆ ಉಳಿದ ಬೇಡಿಕೆಗಳಿಗೆ ತಜ್ಞರ ಸಮಿತಿ ರಚಿಸಿ ಬೇರೆ ಬೇರೆ ರಾಜ್ಯಗಳಿಂದ ವರದಿಗಳನ್ನು ತರಿಸಿ. ತಜ್ಞರ ಸಮಿತಿ ವರದಿ ತಯಾರಿಸಿ ನಿಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸಲಾಗುವುದು. ಸರ್ಕಾರ ನಿಮ್ಮ ಪರವಾಗಿದೆ. ನಿಮ್ಮ ಬೇಡಿಕೆ ಈಡೇರಿಸಲು ಸರ್ಕಾರ ಬದ್ಧವಾಗಿದೆ ಎಂದು ಮುಷ್ಕರ ನಿರತ ಅರಣ್ಯ ಮಹಾವಿದ್ಯಾಲಯ ವಿದ್ಯಾರ್ಥಿಗಳಿಗೆ ಬೆಂಗಳೂರಿನಲ್ಲಿ ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ ಅರಣ್ಯ ಪದವೀಧರ ವಿದ್ಯಾರ್ಥಿಗಳು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮುಷ್ಕರ ನಡೆಸುತ್ತಿರುವ ಸ್ಥಳಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ ಬುಧವಾರ ಭೇಟಿ ನೀಡಿದರು. ಮನವಿ ಸ್ವೀಕರಿಸಿ ಮಾತನಾಡಿದ ಅವರು, ಶೀಘ್ರವೇ ತಜ್ಞರ ಸಮಿತಿ ರಚನೆ ಮಾಡುವುದಾಗಿ ಭರವಸೆ ನೀಡಿದ್ದಾರೆ.ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ನಿಮ್ಮ ಬೇಡಿಕೆಗಳ ಬಗ್ಗೆ ದೂರವಾಣಿ ಮುಖಾಂತರ ಮಾತನಾಡಿದ್ದಾರೆ. ನಿಮ್ಮ ಬೇಡಿಕೆಗಳಾದ ಉಪವಲಯ ಅರಣ್ಯಾಧಿಕಾರಿಗಳಲ್ಲಿ ಶೇ.50 ಪ್ರತಿಶತ ಅರಣ್ಯ ಪದವೀಧರರಿಗೆ ಮೀಸಲು ಇರಿಸಲಾಗಿತ್ತು. ಆಡಳಿತ ಸಮಿತಿಯ ವರದಿಯಲ್ಲಿ ಶೇ.100 ಮುಂಬಡ್ತಿ ಮುಖಾಂತರ ತುಂಬಲು ಶಿಫಾರಸ್ಸು ಮಾಡಿರುತ್ತಾರೆ. ಅದೇ ರೀತಿ ಒಪ್ಪಿಕೊಂಡರೆ ಅರಣ್ಯ ಪದವೀಧರರಿಗೆ ನೌಕರಿ ಅವಕಾಶ ಇಲ್ಲದಂತಾಗುತ್ತದೆ. ಆದ್ದರಿಂದ ನಮ್ಮ ಸರ್ಕಾರ ಆಡಳಿತ ಸುಧಾರಣಾ ವರದಿ ಜಾರಿಗೆ ತರುವುದಿಲ್ಲ ಎಂದರು.

ವಲಯ ಅರಣ್ಯಾಧಿಕಾರಿ ಸೇರಿದಂತೆ ಉಳಿದ ಬೇಡಿಕೆಗಳಿಗೆ ತಜ್ಞರ ಸಮಿತಿ ರಚಿಸಿ ಬೇರೆ ಬೇರೆ ರಾಜ್ಯಗಳಿಂದ ವರದಿಗಳನ್ನು ತರಿಸಿ. ತಜ್ಞರ ಸಮಿತಿ ವರದಿ ತಯಾರಿಸಿ ನಿಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸಲಾಗುವುದು. ಸರ್ಕಾರ ನಿಮ್ಮ ಪರವಾಗಿದೆ. ನಿಮ್ಮ ಬೇಡಿಕೆ ಈಡೇರಿಸಲು ಸರ್ಕಾರ ಬದ್ಧವಾಗಿದೆ. ಆದ್ದರಿಂದ ನಿಮ್ಮ ಮುಷ್ಕರ ಕೈಬಿಡಿ ಎಂದು ಮನವಿ ಮಾಡಿದರು.

ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಮಾತನಾಡಿ, ಆಡಳಿತಾತ್ಮಕ ಸುಧಾರಣಾ ಸಮಿತಿ ನೀಡಿದ ವರದಿಯನ್ನು ಖಂಡಿತವಾಗಿ ಪರಿಶೀಲನೆ ಮಾಡಬೇಕಾಗಿದೆ. ಅದನ್ನು ಮಾಡಿಯೇ ಮಾಡುತ್ತೇನೆ. 2022 ರಲ್ಲಿ ಆಗಿರುವ ತಿದ್ದುಪಡಿ ಮತ್ತು ಕಡ್ಡಾಯ ಮೀಸಲಾತಿ ಯಾವತ್ತು ಇರಲಿಲ್ಲ. ಆದರೂ ನೀವು ಕೇಳುತ್ತಿರುವುದು ತಾಂತ್ರಿಕವಾಗಿ ಸರಿ ಇದೆ ಎಂದು ಪರಿಶೀಲನೆ ಮಾಡಬೇಕಾಗಿರುತ್ತದೆ ಎಂದು ಹೇಳಿರುತ್ತಾರೆ. ಅದಕ್ಕೆ ತಜ್ಞರು ಸಮಿತಿ ರಚನೆ ಮಾಡಬೇಕೆಂದು ಮನವಿ ಮಾಡಿದ್ದೇನೆ. ಸರ್ಕಾರ ನಿಮ್ಮ ಬಳಿ ಬಂದಿದೆ. ಇದು ನಿಮಗೆ ಸಂದ ಜಯವಾಗಿದೆ. ನಮ್ಮ ತಜ್ಞರ ವರದಿ ಆಧಾರದ ಮೇಲೆ ನಿಮ್ಮ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಹೇಳಿದರು.

ಶಾಸಕರಾದ ರಂಗನಾಥ, ರಾಜುಗೌಡ, ರವಿಶಂಕರ ಹಾಜರಿದ್ದರು.

ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಕೊಡಗಿನ ಪೊನ್ನಂಪೇಟೆಯ ಅರಣ್ಯ ಮಹಾ ವಿದ್ಯಾಲಯದ ವಿದ್ಯಾರ್ಥಿಗಳು 18 ದಿನಗಳ ಕಾಲ ತರಗತಿ ಬಹಿಷ್ಕರಿಸಿ ಕಾಲೇಜಿನಲ್ಲಿ ಪ್ರತಿಭಟನೆ ನಡೆಸಿದ್ದರು. ಇದೀಗ ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮುಷ್ಕರ ನಡೆಸಿದ್ದಾರೆ.