ಕನ್ನಡಪ್ರಭ ವಾರ್ತೆ ಸವದತ್ತಿ ಪಟ್ಟಣದಲ್ಲಿ ನಡೆಯುತ್ತಿರುವ ಗ್ರಾಮದೇವಿಯ ಜಾತ್ರಾ ಉತ್ಸವದ ಐದನೇ ದಿನ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ನಗರದ ಕೋಟೆಯಿಂದ ದೇವಸ್ಥಾನದ ಕಟ್ಟೆಯವರೆಗೆ ಶಾಸಕ ವಿಶ್ವಾಸ ವೈದ್ಯ ಸೇರಿದಂತೆ ಅಭಿಮಾನಿಗಳೊಂದಿಗೆ ಕಾಲ್ನಡಿಗೆ ಮೂಲಕ ಆಗಮಿಸಿ ಗ್ರಾಮದೇವಿಯ ದರ್ಶನ ಪಡೆದರು.

ಕನ್ನಡಪ್ರಭ ವಾರ್ತೆ ಸವದತ್ತಿ

ಪಟ್ಟಣದಲ್ಲಿ ನಡೆಯುತ್ತಿರುವ ಗ್ರಾಮದೇವಿಯ ಜಾತ್ರಾ ಉತ್ಸವದ ಐದನೇ ದಿನ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ನಗರದ ಕೋಟೆಯಿಂದ ದೇವಸ್ಥಾನದ ಕಟ್ಟೆಯವರೆಗೆ ಶಾಸಕ ವಿಶ್ವಾಸ ವೈದ್ಯ ಸೇರಿದಂತೆ ಅಭಿಮಾನಿಗಳೊಂದಿಗೆ ಕಾಲ್ನಡಿಗೆ ಮೂಲಕ ಆಗಮಿಸಿ ಗ್ರಾಮದೇವಿಯ ದರ್ಶನ ಪಡೆದರು.

ಕೋಟೆಯಿಂದ ವಿವಿಧ ವಾದ್ಯ ಮೇಳದೊಂದಿಗೆ ಶಾಸಕ ವಿಶ್ವಾಸ ವೈದ್ಯ ಅವರ ಕುಟುಂಬ ಸೇರಿದಂತೆ ಸಚಿವರು ಮತ್ತು ಸಾರ್ವಜನಿಕರೊಂದಿಗೆ ಪೋಸ್ಟ್ ಆಫೀಸ್, ಗಾಂಧಿಚೌಕ್‌ ಮಾರ್ಗವಾಗಿ ಸಾಂಪ್ರದಾಯಕ ವಾದ್ಯಗಳೊಂದಿಗೆ ಕಾಲ್ನಡಿಗೆ ಮೂಲಕ ಆಗಮಿಸಿ ಗ್ರಾಮದೇವಿಯರಿಗೆ ವೈದ್ಯ ಮನೆತನದಿಂದ ಉಡಿ ತುಂಬಿ ದೇವಿಯ ಕೃಪೆಗೆ ಪಾತ್ರರಾದರು.

ಗ್ರಾಮದೇವಿ ಕಟ್ಟಿಯ ಮಂಟಪದಲ್ಲಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಗ್ರಾಮದೇವಿ ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ವಿರುಪಾಕ್ಷ ಮಾಮನಿ, ಗೌರವಾಧ್ಯಕ್ಷ ವಿಶ್ವಾಸ ವೈದ್ಯ ಸನ್ಮಾನಿಸಿ ಗೌರವಿಸಿದರು.

ಈ ವೇಳೆ ಫಕೀರಪ್ಪ ಹದ್ದನ್ನವರ, ಶಾಸಕರ ತಾಯಿ ಅಲ್ಕಾ, ಪತ್ನಿ ಶೃತಿ ವೈದ್ಯ, ಅಶ್ವತ ವೈದ್ಯ, ಶ್ರೀದೇವಿ ವೈದ್ಯ, ಡಿ.ಡಿ.ಟೋಪೋಜಿ, ಪ್ರವೀಣ ರಾಮಪ್ಪನವರ, ವಿಜಯ ಸಂಗಪ್ಪಗೋಳ, ಮಲ್ಲು ಜಕಾತಿ, ಗಿರೀಶ ಮುನವಳ್ಳಿ, ಸಂತೋಷ ನೊರೆಯವರ ಇತರರು ಉಪಸ್ಥಿತರಿದ್ದರು.