ಸಾರಾಂಶ
ಹನುಮಮಾಲಾ ವಿಸರ್ಜನೆ ಸಂದರ್ಭದಲ್ಲಿ ಕೆಲವರು ದುಷ್ಕ್ಯತ್ಯ ನಡೆಸುತ್ತಿದ್ದು, ಈ ಬಗ್ಗೆ ಎಚ್ಚರಿಕೆ ವಹಿಸಲು ಪೊಲೀಸ್ ಇಲಾಖೆ ಸಿಸಿ ಕ್ಯಾಮೆರಾ ಮತ್ತು ಡ್ರೋಣ್ ಉಪಯೋಗಿಸಬೇಕೆಂದು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕಳೆದ ವರ್ಷ ಕೆಲ ದುಷ್ಕೃತ್ಯ ನಡೆದಿವೆ. ಇದು ಮರುಕಳಿಸಬಾರದು. ನಿಗಾವಹಿಸಲು ಸೂಚನೆ.
ಗಂಗಾವತಿ: ತಾಲೂಕಿನ ಅಂಜನಾದ್ರಿಯಲ್ಲಿ ನಡೆಯುವ ಹನುಮಮಾಲಾ ವಿಸರ್ಜನೆಗೆ ಮೂಲಭೂತ ಸೌಕರ್ಯ ಕಲ್ಪಿಸಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ತಾಪಂ ಮಂಥನದಲ್ಲಿ ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಇದೇ ತಿಂಗಳು 22, 23, 24ರಂದು ಮೂರು ದಿನಗಳ ಕಾಲ ಹನುಮ ಮಾಲಾಧಾರಿಗಳು ಸೇರಿದಂತೆ ಒಂದು ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸುತ್ತಾರೆ. ಅವರಿಗೆ ಸೌಕರ್ಯ ಕಲ್ಪಿಸಬೇಕೆಂದರು.ಊಟದ ವ್ಯವಸ್ಥೆ, ಕುಡಿಯುವ ನೀರು, ಸ್ನಾನ, ವಸತಿ, ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು. ರೈಲು ನಿಲ್ದಾಣ, ಕೃಷ್ಣದೇವರಾಯ ವೃತ್ತ, ಅಂಜನಾದ್ರಿ ಬಳಿ ಸಹಾಯವಾಣಿ ಸ್ಥಾಪಿಸಲಾಗುತ್ತದೆ. ವಿವಿಧ ಸಮಿತಿಯವರು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು ಎಂದರು.ಆರೋಗ್ಯ ಇಲಾಖೆಯವರು ತಾತ್ಕಾಲಿಕವಾಗಿ ಆರೋಗ್ಯ ಕೇಂದ್ರ ಸ್ಥಾಪಿಸಬೇಕೆಂದರು. ಈಶಾನ್ಯ ಸಾರಿಗೆ ಬಸ್ ಗಳು ಬಿಡಬೇಕು. ಪಾರ್ಕಿಂಗ್ ಸ್ಥಳದಿಂದ ಉಚಿತ ಸೇವೆ ಕೈಗೊಳ್ಳಬೇಕು. ಪಾದಯಾತ್ರಿಗಳಿಗೆ ವಿಶ್ರಾಂತಿ ವ್ಯವಸ್ಥೆ ಕೈಗೊಳ್ಳಬೇಕು. 24×7 ವಿದ್ಯುತ್ ನೀಡಬೇಕು. ಅಂಜನಾದ್ರಿಗೆ ವಿದ್ಯುತ್ ದೀಪ ಅಲಂಕಾರವಾಗಬೇಕು. ಯಾವುದೇ ಕಾರಣಕ್ಕೂ ಅವಘಡ ಸಂಭವಿಸಬಾರದು ಎಂದು ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು. ವಿವಿಧ ಸಮಿತಿಯವರು ಕೈಗೊಂಡ ವ್ಯವಸ್ಥ ಬಗ್ಗೆ ವಿವರಿಸಿದರು.ಸಿಸಿ ಕ್ಯಾಮೆರಾ ಅಳವಡಿಸಿ: ಹನುಮಮಾಲಾ ವಿಸರ್ಜನೆ ಸಂದರ್ಭದಲ್ಲಿ ಕೆಲವರು ದುಷ್ಕ್ಯತ್ಯ ನಡೆಸುತ್ತಿದ್ದು, ಈ ಬಗ್ಗೆ ಎಚ್ಚರಿಕೆ ವಹಿಸಲು ಪೊಲೀಸ್ ಇಲಾಖೆ ಸಿಸಿ ಕ್ಯಾಮೆರಾ ಮತ್ತು ಡ್ರೋಣ್ ಉಪಯೋಗಿಸಬೇಕೆಂದು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕಳೆದ ವರ್ಷ ಕೆಲ ದುಷ್ಕೃತ್ಯ ನಡೆದಿವೆ. ಇದು ಮರುಕಳಿಸಬಾರದು. ಈ ಬಗ್ಗೆ ನಿಗಾವಹಿಸಬೇಕೆಂದರು.ಮೂರು ದಿನ ವ್ಯಾಪಾರಸ್ಥರು ವಿವಿಧ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ. ಅವರಿಗೆ ಮುಕ್ತ ಅವಕಾಶ ಕಲ್ಪಿಸಲಾಗುತ್ತದೆ. ಸರ್ವ ಜಾತಿಯವರು ಮುಕ್ತವಾಗಿ ವ್ಯಾಪಾರ ಮಾಡಬೇಕೆಂದರು.ವಿದ್ಯುತ್ ದೀಪಾಲಂಕಾರ: ಅಂಜನಾದ್ರಿ ದೇಶಾದ್ಯಂತ ಪ್ರಸಿದ್ಧಿ ಪಡೆದ ಸ್ಥಳವಾಗಿದೆ. ಗಮನ ಸಳೆಯಲು ಬೆಟ್ಟಕ್ಕೆ ದೀಪಾಲಂಕಾರ, ಹೂವಿನ ಅಲಂಕಾರ ಮಾಡಬೇಕು. ಈ ಮೂಲಕ ದೇಗುಲ ಕಂಗೊಳಿಸುವಂತೆ ಅಲಂಕಾರ ಮಾಡಬೇಕೆಂದು ಸೂಚನೆ ನೀಡಿದರು.ಮದ್ಯ ಮಾರಾಟ ನಿಷೇಧ: ಮೂರು ದಿನಗಳ ಕಾಲ ನಡೆಯುವ ಹನುಮ ಮಾಲಾ ವಿಸರ್ಜನೆ ಸಂದರ್ಭದಲ್ಲಿ ಗಂಗಾವತಿ ಸೇರಿದಂತೆ ಸಣಾಪುರ, ಆನೆಗೊಂದಿ, ಮತ್ತಿ ಮಲ್ಲಾಪುರ ಗ್ರಾಪಂ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಮದ್ಯ ಮಾರಾಟ ಮಾಡಬಾರದು. ಈ ಬಗ್ಗೆ ಅಬಕಾರಿ ಇಲಾಖೆಯವರು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಳಿನ್ ಅತುಲ್, ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆ, ಎಸ್ಪಿ ಯಶೋದಾ ವಂಟಿಗೋಡಿ, ಎಸಿ ಕ್ಯಾ.ಮಹೇಶ ಮಾಲಿಗಿತ್ತಿ, ಎಡಿಸಿ ಸಾವಿತ್ರಿ ಕಡಿ, ಆಡಾಳಿತಾಧಿಕಾರಿ ಅರವಿಂದ ಸುತ್ತಗುಂಡಿ, ತಹಸೀಲ್ದಾರ ವಿಶ್ವನಾಥ ಮುರುಡಿ, ಜಿಪಂ ಎಂಜಿನಿಯರಿಂಗ್ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಯಂತರ ವಿಜಯಕುಮಾರ ಭಾಗವಹಿಸಿದ್ದರು.