ಸಾರಾಂಶ
ಕ್ಷೇತ್ರದಲ್ಲಿ ಮಿಂಚಿನ ಸಂಚಾರ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು:ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ನೀಡಬಾರದೆಂದು ಸ್ವಪಕ್ಷದವರಿಂದಲೇ ಅಭಿಯಾನ ನಡೆಯತ್ತಿದ್ದರೆ, ಇನ್ನೊಂದೆಡೆ ಸಚಿವೆ ಶೋಭಾ ಕರಂದ್ಲಾಜೆ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸುತ್ತಿದ್ದಾರೆ.ಸೋಮವಾರ ಬೆಳಿಗ್ಗೆ ಚಿಕ್ಕಮಗಳೂರು ನಗರಸಭೆಯ ಬಜೆಟ್ ಸಭೆಯಲ್ಲಿ ಹಾಜರಿದ್ದು, ಬಳಿಕ ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಕಡೂರು- ಚಿಕ್ಕಮಗಳೂರು ರೈಲ್ವೆ ಮೇಲ್ದರ್ಜೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ನಂತರ ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿ, ಅಲ್ಲಿ ಪ್ರಕರಣವೊಂದರಲ್ಲಿ ವಿಚಾರಾಣಾಧೀನ ಖೈದಿಯಾಗಿರುವ ಹಿಂದೂ ಸಂಘಟನೆ ಕಾರ್ಯಕರ್ತರನ್ನು ಭೇಟಿ ಮಾಡಿರುವ ಜತೆಗೆ ಜೈಲಿನೊಳಗೆ ಇರುವ ಮೂಲಭೂತ ಸವಲತ್ತುಗಳನ್ನು ಪರಿಶೀಲಿಸಿದರು. ನಂತರ ಆಲ್ದೂರು ಮಂಡಲದ ಕೂದುವಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಯುವ ಜಾಗೃತಿ ಕುರಿತ ಯುವ ಚೌಪಾಲ್ (ಯುವ ಸಂವಾದ) ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಂಜೆಯ ವೇಳೆಗೆ ತಾಲೂಕಿನ ಆಲ್ದೂರು ಸಮೀಪದ ಹಂಗರ ಹಳ್ಳಿಯಲ್ಲಿ ಗ್ರಾಮ ವಾಸ್ತವ್ಯ (ಗಾವ್ ಚಲೋ ಅಭಿಯಾನ) ಮಾಡಿದರು. ಇದೇ ಸಂದರ್ಭದಲ್ಲಿ ಗ್ರಾಮದಲ್ಲಿ ನಡೆದ ಕಾಳಗದ ಹಬ್ಬದಲ್ಲಿ ಪಾಲ್ಗೊಂಡಿದ್ದರು. ಹಳ್ಳಿಯ ವಾದ್ಯಕ್ಕೆ ಗ್ರಾಮಸ್ಥರು ಹೆಜ್ಜೆ ಹಾಕಿದರು. ನೂರಾರು ಜನರ ನಡುವೆ ಶೋಭಾ ಕರಂದ್ಲಾಜೆಯವರು ಉತ್ಸವದ ಮೆರವಣಿಗೆಯಲ್ಲಿ ಸಾಗಿದರು.
26 ಕೆಸಿಕೆಎಂ 4ಚಿಕ್ಕಮಗಳೂರು ತಾಲೂಕಿನ ಹಂಗರವಳ್ಳಿಯಲ್ಲಿ ಸೋಮವಾರ ಗ್ರಾಮ ವಾಸ್ತವ್ಯ ಮಾಡಿದ್ದ ಸಚಿವೆ ಶೋಭಾ ಕರಂದ್ಲಾಜೆ ಅವರು ಅಲ್ಲಿನ ಕಾಳಗ ಹಬ್ಬದಲ್ಲಿ ಪಾಲ್ಗೊಂಡಿದ್ದರು.