ವಿನಯ ಕುಲಕರ್ಣಿ ಮನೆಗೆ ಸಚಿವ ಜಮೀರ್‌ ಭೇಟಿ

| Published : Apr 14 2025, 01:21 AM IST

ಸಾರಾಂಶ

ಅಂಜುಮನ್‌ ವರೆಗೆ ಬೈಕ್‌ನಲ್ಲಿ ಹೆಲ್ಮೆಟ್‌ ಧರಿಸಿಯೇ ಬಂದ ಸಚಿವರಿಗೆ ಪ್ರವೇಶದ್ವಾರದಲ್ಲಿ ಮುಗಿಬಿದ್ದು ಹಾರ ಹಾಕಿ, ಕೈ ಕುಲುಕಿ ಸ್ವಾಗತ ಮಾಡಿಕೊಂಡರು.

ಧಾರವಾಡ: ಇಲ್ಲಿಯ ಬಾರಾಕೊಟ್ರಿಯ ಶಾಸಕ ವಿನಯ ಕುಲಕರ್ಣಿ ನಿವಾಸಕ್ಕೆ ಭಾನುವಾರ ಸಂಜೆ ವಕ್ಫ್‌ ಸಚಿವ ಜಮೀರ್ ಅಹಮದ್‌ ಭೇಟಿ ನೀಡಿ ವಿನಯ ಕುಟುಂಬದ ಸದಸ್ಯರ ಕುಶಲೋಪಚಾರ ವಿಚಾರಿಸಿದರು.

ಸ್ಥಳೀಯ ಕಾರ್ಯಕ್ರಮ ನಿಮಿತ್ತ ನಗರಕ್ಕೆ ಬಂದಿದ್ದ ಅವರು ಶಾಸಕ ಪ್ರಸಾದ ಅಬ್ಬಯ್ಯ ಅವರೊಂದಿಗೆ ವಿನಯ ಕುಲಕರ್ಣಿ ಪತ್ನಿ ಶಿವಲೀಲಾ ಹಾಗೂ ಮಕ್ಕಳನ್ನು ಭೇಟಿ ಮಾಡಿ ಕೆಲ ಹೊತ್ತು ಮಾತನಾಡಿದರು.

ಇದಾದ ನಂತರ ಸಚಿವ ಜಮೀರ್ ಅಹಮದ್‌ ಅವರಿಗೆ ನಗರದಲ್ಲಿ ಅದ್ಧೂರಿ ಸ್ವಾಗತ ದೊರೆಯಿತು. ಅಂಜುಮನ್ ಸಂಸ್ಥೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಕರ್ನಾಟಕ ಕಾಲೇಜು ವೃತ್ತದಿಂದ ಅಂಜುಮನ್‌ ವರೆಗೆ ಬೈಕ್‌ನಲ್ಲಿ ಹೆಲ್ಮೆಟ್‌ ಧರಿಸಿಯೇ ಬಂದ ಸಚಿವರಿಗೆ ಪ್ರವೇಶದ್ವಾರದಲ್ಲಿ ಮುಗಿಬಿದ್ದು ಹಾರ ಹಾಕಿ, ಕೈ ಕುಲುಕಿ ಸ್ವಾಗತ ಮಾಡಿಕೊಂಡರು. ಈ ವೇಳೆ ಅವರ ಅಭಿಮಾನಿಗಳಿಂದ ಕ್ರೇನ್ ಮೂಲಕ ಬೃಹತ್ ಹಾರ ಹಾಕಿ ಸ್ವಾಗತಿಸಲಾಯಿತು.