ಸಹಕಾರದ ಕಾನೂನು ಚೌಕಟ್ಟಿಗಾಗಿ ಸಚಿವಾಲಯ

| Published : Nov 15 2024, 12:31 AM IST

ಸಾರಾಂಶ

ಸಹಕಾರ ಕ್ಷೇತ್ರವು ಪ್ರಸ್ತುತ ಉನ್ನತವಾಗಿ ಬೆಳೆಯುತ್ತಿದೆ. ರಾಷ್ಟ್ರದ 8.5 ಲಕ್ಷ ಸಹಕಾರ ಸಂಸ್ಥೆಗಳ ದತ್ತಾಂಶಗಳ ಸಂಗ್ರಹಣೆಗೆ ಹೊಸ ರಾಷ್ಟ್ರೀಯ ಸಹಕಾರ ಡೇಟಾ ಬೇಸ್ ಅನುಷ್ಠಾನಗೊಳಿಸಲಾಗಿದೆ.

ಧಾರವಾಡ:

ಸಹಕಾರ ಚಳವಳಿ ಬಲಪಡಿಸಲು ಪ್ರತ್ಯೇಕ ಆಡಳಿತಾತ್ಮಕ ಕಾನೂನು ಮತ್ತು ನೀತಿಯ ಚೌಕಟ್ಟನ್ನು ಒದಗಿಸಲು ಸಚಿವಾಲಯ ರಚಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಬಾಪೂಗೌಡ ಪಾಟೀಲ ತಿಳಿಸಿದರು.

ಧಾರವಾಡ ಜಿಲ್ಲಾ ಸಹಕಾರ ಯೂನಿಯನ್‌ ಗುರುವಾರ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಅಂಗವಾಗಿ ಸಹಕಾರ ಸಚಿವಾಲಯದ ನೂತನ ಪ್ರಯತ್ನಗಳ ಮೂಲಕ ಸಹಕಾರ ಚಳವಳಿ ಬಲಪಡಿಸುವ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಸಹಕಾರ ಕ್ಷೇತ್ರವು ಪ್ರಸ್ತುತ ಉನ್ನತವಾಗಿ ಬೆಳೆಯುತ್ತಿದೆ. ರಾಷ್ಟ್ರದ 8.5 ಲಕ್ಷ ಸಹಕಾರ ಸಂಸ್ಥೆಗಳ ದತ್ತಾಂಶಗಳ ಸಂಗ್ರಹಣೆಗೆ ಹೊಸ ರಾಷ್ಟ್ರೀಯ ಸಹಕಾರ ಡೇಟಾ ಬೇಸ್ ಅನುಷ್ಠಾನಗೊಳಿಸಲಾಗಿದೆ ಎಂದರು.

ಧಾರವಾಡ ಸಹಕಾರ ಹಾಲು ಒಕ್ಕೂಟದ ಅಧ್ಯಕ್ಷ ಶಂಕರ ಮುಗದ ಮಾತನಾಡಿ, ಕೇಂದ್ರ ಸರ್ಕಾರ ಭಾರತದ ಸಹಕಾರ ಚಳವಳಿಯನ್ನು ಪರಿಣಾಮಕಾರಿಯಾಗಿ ಬಲಪಡಿಸುವ ಉದ್ದೇಶದಿಂದ ಸಹಕಾರ ಸಚಿವಾಲಯವನ್ನು ರಚಿಸಿದೆ. ಸಹಕಾರ ಸಚಿವಾಲಯವು ದೇಶದಾದ್ಯಂತ ಸಹಕಾರ ಸಂಸ್ಥೆಗಳನ್ನು ಬೆಂಬಲಿಸಲು, ನಿಯಂತ್ರಿಸಲು ಮತ್ತು ಉತ್ತೇಜಿಸಲು ಏಕೀಕೃತ ಚೌಕಟ್ಟನ್ನು ಒದಗಿಸಿದೆ. ಸಹಕಾರ ಕ್ಷೇತ್ರಕ್ಕೆ ಅನೇಕ ರೀತಿಯ ಸವಲತ್ತುಗಳು ಮತ್ತು ರಿಯಾಯತಿಗಳನ್ನು ಒದಗಿಸಿದೆ ಎಂದು ಹೇಳಿದರು.

ಜಿಲ್ಲಾ ಸಹಕಾರ ಯೂನಿಯನ್‌ ಅಧ್ಯಕ್ಷ ಶಂಕರಪ್ಪ ಎನ್. ರಾಯನಾಳ, ಉಪನ್ಯಾಸಕಿ ಗೀತಾ ಎಲ್. ಕೋಣನವರ ಮಾತನಾಡಿದರು. ಕೆಸಿಸಿ ಬ್ಯಾಂಕ್ ಉಪಾಧ್ಯಕ್ಷ ನಿಂಗನಗೌಡ ಮರಿಗೌಡ್ರ, ಯೂನಿಯನ್‌ ಉಪಾಧ್ಯಕ್ಷೆ ಗೀತಾ ಕುಂಬಿ, ನಿರ್ದೇಶಕ ಪ್ರತಾಪ ಚವ್ಹಾಣ, ಎಫ್.ಆರ್. ಕಲ್ಲನಗೌಡ್ರ, ಬಿ.ಎ. ಪಾಟೀಲ, ರಾಮಲಿಂಗಪ್ಪ ನವಲಗುಂದ, ಕೆಂಪೇಗೌಡ ಪಾಟೀಲ, ಶರಣಗೌಡ ಬಾಪುಗೌಡ ಪಾಟೀಲ, ರಾಮಪ್ಪ ಕನಾಜಿ, ಕೆಎಂಎಫ್‌ ನಿರ್ದೇಶಕ ಸುರೇಶ ಬಣವಿ, ಗೀತಾ ಮರಲಿಂಗಣ್ಣವರ, ಸಹಕಾರ ಸಂಘಗಳ ಉಪನಿಬಂಧಕರಾದ ರಮೇಶ ಬಗಲಿ, ಸಹಾಯಕ ನಿಬಂಧಕ ನಿಂಗರಾಜು ಎಸ್., ಕೆಐಸಿಎಂ ಪ್ರಾಚಾರ್ಯ ಡಿ.ಆರ್. ವೆಂಕಟರಾಮ, ಉಪನ್ಯಾಸಕರು ಮತ್ತು ಸಿಬ್ಬಂದಿ ಇದ್ದರು.