ಸಾರಾಂಶ
ನೂರಾರು ವಾಹನಗಳು ಸಂಚಾರ ಮಾಡುವ ಹೈಸ್ಕೂಲ್ ಫೀಲ್ಡ್ ರಸ್ತೆಯನ್ನು ದಾಟಿ ಹೋಟೆಲ್‌ನ ಪೋರ್ಟಿಕೊದಲ್ಲಿ ನಿಲ್ಲಿಸಿದ್ದ ಕಾರಿಗೆ ಬಾಲಕರಿದ್ದ ಕಾರು ಡಿಕ್ಕಿ ಹೊಡೆದಿದೆ. ಸಂಚಾರಿ ಪೊಲೀಸರು ಕಾರನ್ನು ವಶಕ್ಕೆ ಪಡೆದರು. ಅಪಘಾತ ಮಾಡಿದ ಬಾಲಕನ ಪೋಷಕರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಈ ಅಪಘಾತದ ದೃಶ್ಯವು ಇಲ್ಲಿನ ಸುತ್ತಮುತ್ತಲ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಜನರ ಮೊಬೈಲ್‌ಗಳಲ್ಲಿ ಹರಿದಾಡುತ್ತಿದೆ.
ಕನ್ನಡಪ್ರಭ ವಾರ್ತೆ ಹಾಸನ
ಅಪ್ರಾಪ್ತ ಬಾಲಕರು ಜಾಲಿ ರೈಡ್ ಮಾಡುವಾಗ ಮನಬಂದಂತೆ ಕಾರು ಚಾಲನೆ ಮಾಡಿದ ಪರಿಣಾಮ ನಿಯಂತ್ರಣ ತಪ್ಪಿದ ಕಾರು ರಸ್ತೆಬದಿ ನಿಲ್ಲಿಸಲಾಗಿದ್ದ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದ ಘಟನೆ ನಗರದ ಹೈಸ್ಕೂಲ್ ಫೀಲ್ಡ್ ರಸ್ತೆಯ ಮಲ್ಲಿಗೆ ಹೋಟೆಲ್ ಮುಂದೆ ಬುಧವಾರ ನಡೆದಿದೆ.ನೂರಾರು ವಾಹನಗಳು ಸಂಚಾರ ಮಾಡುವ ಹೈಸ್ಕೂಲ್ ಫೀಲ್ಡ್ ರಸ್ತೆಯನ್ನು ದಾಟಿ ಹೋಟೆಲ್‌ನ ಪೋರ್ಟಿಕೊದಲ್ಲಿ ನಿಲ್ಲಿಸಿದ್ದ ಕಾರಿಗೆ ಬಾಲಕರಿದ್ದ ಕಾರು ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ವಿಷಯ ತಿಳಿದ ಹಾಸನ ನಗರದ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಅಪಘಾತ ನಡೆದ ತೀವ್ರತೆ ಬಗ್ಗೆ ಪರಿಶೀಲಿಸಿದರು. ನಂತರ ಸಂಚಾರಿ ಪೊಲೀಸರು ಕಾರನ್ನು ವಶಕ್ಕೆ ಪಡೆದರು. ಅಪಘಾತ ಮಾಡಿದ ಬಾಲಕನ ಪೋಷಕರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಈ ಅಪಘಾತದ ದೃಶ್ಯವು ಇಲ್ಲಿನ ಸುತ್ತಮುತ್ತಲ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಜನರ ಮೊಬೈಲ್‌ಗಳಲ್ಲಿ ಹರಿದಾಡುತ್ತಿದೆ.
ಓದುವ ಮಕ್ಕಳ ಕೈಲಿ ಕಾರು, ಬೈಕು ಕೊಟ್ಟು ರಸ್ತೆಗಳಲ್ಲಿ ನಡೆದುಕೊಂಡು ಓಡಾಡುವ ಅಮಾಯಕರ ಜೀವದ ಜತೆ ಆಟವಾಡುವ ಕಾರಿನ ಮಾಲೀಕರ ಮೇಲೆ ಪೊಲೀಸರು ಶಿಸ್ತಿನ ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.