ಗರ್ಭಪಾತ: ಎಸಿ, ಡಿಎಚ್‌ಒ ಸೇರಿ ಐವರಿಗೆ ಶೋಕಾಸ್‌ ನೋಟಿಸ್‌

| Published : May 31 2024, 02:18 AM IST / Updated: May 31 2024, 01:17 PM IST

 fetus grape size heart in mother womb
ಗರ್ಭಪಾತ: ಎಸಿ, ಡಿಎಚ್‌ಒ ಸೇರಿ ಐವರಿಗೆ ಶೋಕಾಸ್‌ ನೋಟಿಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಮಹಾಲಿಂಗಪುರದಲ್ಲಿ ಗರ್ಭಪಾತಕ್ಕೆ ಮಹಿಳೆ ಬಲಿಯಾದ ಪ್ರಕರಣದಲ್ಲಿ ಐವರು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.

 ಬಾಗಲಕೋಟೆ ; ಮಹಾಲಿಂಗಪುರದಲ್ಲಿ ಗರ್ಭಪಾತಕ್ಕೆ ಮಹಿಳೆ ಬಲಿಯಾದ ಪ್ರಕರಣದಲ್ಲಿ ಐವರು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.

ಜಮಖಂಡಿ ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ, ಡಿಎಚ್ಒ ಡಾ. ರಾಜಕುಮಾರ ಯರಗಲ್, ಕುಟುಂಬ ಕಲ್ಯಾಣ ಅಧಿಕಾರಿ ಡಾ. ಡಿ.ಬಿ. ಪಟ್ಟಣಶೆಟ್ಟಿ, ರಬಕವಿ-ಬನಹಟ್ಟಿಯ ತಾಲೂಕು ಆರೋಗ್ಯಾಧಿಕಾರಿ ಡಾ.ಗೈಬುಸಾಬ್ ಗಲಗಲಿ, ಜಿಲ್ಲಾ ಆಸ್ಪತ್ರೆಯ ರೆಡಿರೋಲಾಜಿಸ್ಟ್ ಡಾ.ಅನಿಲ ಕಾನಡೆ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ.

ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಸರ್ಕಾರದ ಕಾಯ್ದೆಗಳನ್ನು ಜಿಲ್ಲಾಮಟ್ಟದಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸುವುದು ನಿಮ್ಮ ಕರ್ತವ್ಯವಾಗಿದೆ. ಸೂಕ್ತ ಉಸ್ತುವಾರಿ, ನಿಯಂತ್ರಣ ನಿರ್ವಹಿಸುವಲ್ಲಿ ವಿಫಲವಾಗಿರುವುದರು ಕಂಡು ಬಂದಿದೆ. ಕವಿತಾ ಬಾಡನವರ ವಿರುದ್ಧ 2019ರಲ್ಲಿ ಸಹ ಇಂತಹದೇ ಪ್ರಕರಣ ದಾಖಲಾಗಿತ್ತು.

 ಈ ಕುರಿತು ಇಲಾಖೆ ಸೂಕ್ಷ್ಮವಾಗಿ ಗಮನಹರಿಸಬೇಕಿತ್ತು. ಕರ್ತವ್ಯದಲ್ಲಿ ಬೇಜವಾಬ್ದಾರಿ, ನಿರ್ಲಕ್ಷ್ಯ ತೋರಿರುವುದು ಕಂಡು ಬಂದಿದ್ದು, ನಿಮ್ಮ ವಿರುದ್ಧ ಏಕೆ ಕ್ರಮ ಜರುಗಿಸಬಾರದು? ಎಂದು ಕೇಳಿದ್ದು, 24 ಗಂಟೆಯೊಳಗೆ ಉತ್ತರಿಸಬೇಕು. ಇಲ್ಲದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ನೋಟಿಸ್‌ನಲ್ಲಿ ತಿಳಿಸಿದ್ದಾರೆ.