ಸೋಂಪುರ ಗ್ರಾಮದಲ್ಲಿ ಗಣೇಶಮೂರ್ತಿ ಕದ್ದೊಯ್ದ ಕಿಡಿಗೇಡಿಗಳು

| Published : Sep 15 2024, 01:58 AM IST

ಸೋಂಪುರ ಗ್ರಾಮದಲ್ಲಿ ಗಣೇಶಮೂರ್ತಿ ಕದ್ದೊಯ್ದ ಕಿಡಿಗೇಡಿಗಳು
Share this Article
  • FB
  • TW
  • Linkdin
  • Email

ಸಾರಾಂಶ

ಭಾನುವಾರ ಗಣೇಶನ ಮೂರ್ತಿ ವಿಸರ್ಜನೆ ಮಾಡಲು ವ್ಯವಸ್ಥೆ ಮಾಡಿಕೊಂಡಿದ್ದರು. ಈ ಮಧ್ಯೆ ಶುಕ್ರವಾರ ರಾತ್ರಿ ಕಿಡಿಗೇಡಿಗಳು ಪೆಂಡಾಲ್ ಬಳಿ ಮದ್ಯಪಾನ ಮಾಡಿ ಮದ್ಯದ ಬಾಟಲ್ ಗಳನ್ನು ಅಲ್ಲೇ ಎಸೆದು ಪೆಂಡಾಲ್ ಪಕ್ಕದ ಮನೆ ನಲ್ಲಿ ಕಿತ್ತಿ ಹಾಕಿದ್ದಾರೆ.

ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕಿನ ಸೋಂಪುರ ಗ್ರಾಮದಲ್ಲಿ ಸ್ಥಳೀಯ ಯುವಕರು ಪ್ರತಿಷ್ಠಾಪಿಸಿದ್ದ ಗಣೇಶನ ಮೂರ್ತಿಯನ್ನು ಕಿಡಿಗೇಡಿಗಳು ಕದ್ದೊಯ್ದಿದಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಗಣೇಶನ ಹಬ್ಬದ ಅಂಗವಾಗಿ ವಿಜೃಂಭಣೆಯಿಂದ ಪೆಂಡಾಲ್ ಹಾಕಿ ಗ್ರಾಮದ ಸಂತೋಷ್, ಲಿಂಗೇಗೌಡ, ಉಮೇಶ್, ರಕ್ಷಿತ್ ಸೇರಿದಂತೆ ಹಲವು ಯುವಕರು ಗಣೇಶ ಮೂರ್ತಿಯನ್ನು ಅದ್ಧೂರಿಯಾಗಿ ಪ್ರತಿಷ್ಠಾಪಿಸಿದ್ದರು.

ಭಾನುವಾರ ಗಣೇಶನ ಮೂರ್ತಿ ವಿಸರ್ಜನೆ ಮಾಡಲು ವ್ಯವಸ್ಥೆ ಮಾಡಿಕೊಂಡಿದ್ದರು. ಈ ಮಧ್ಯೆ ಶುಕ್ರವಾರ ರಾತ್ರಿ ಕಿಡಿಗೇಡಿಗಳು ಪೆಂಡಾಲ್ ಬಳಿ ಮದ್ಯಪಾನ ಮಾಡಿ ಮದ್ಯದ ಬಾಟಲ್ ಗಳನ್ನು ಅಲ್ಲೇ ಎಸೆದು ಪೆಂಡಾಲ್ ಪಕ್ಕದ ಮನೆ ನಲ್ಲಿ ಕಿತ್ತಿ ಹಾಕಿದ್ದಾರೆ.

ಶಿವನ ಲಿಂಗದ ಕೆಳಗೆ ಇಟ್ಟಿದ್ದ ಗಣೇಶಮೂರ್ತಿಯನ್ನು ಅಕ್ಕಪಕ್ಕದ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಮಾಡಿಸುತ್ತಿದ್ದರು. ಜತೆಗೆ ಸುಂದರವಾಗಿ ಕಾಣಿಸುತ್ತಿದ್ದ ಗಣೇಶ ಮೂರ್ತಿಯನ್ನು ಸಾರ್ವಜನಿಕರು ಮೊಬೈಲ್ ನಲ್ಲಿ ವಾಟ್ಸಪ್, ಸ್ಟೇಟಸ್, ಪೇಸ್ಬುಕ್ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಂಡಿದ್ದರು.

ಗೌರಿ ಮೂರ್ತಿ ಬಿಟ್ಟು ಬರೀ ಗಣೇಶಮೂರ್ತಿ ಕದ್ದಿದ್ದಾರೆ. ಶನಿವಾರ ಹೊಸದಾದ ಗಣೇಶನ ಮೂರ್ತಿಯನ್ನು ತಂದು ಭಾನುವಾರ ಗೌರಿಯೊಂದಿಗೆ ವಿಸರ್ಜನೆ ಮಾಡಲು ಯವಕರು ತೀರ್ಮಾನ ಮಾಡಿದ್ದಾರೆ.

ಗ್ರಾಮದ ಯುವ ಮುಖಂಡ ಉಮೇಶ್ ಮಾತನಾಡಿ, ಸೋಂಪುರ ಸೇರಿದಂತೆ ಈ ಭಾಗದ ಗ್ರಾಮಗಳಲ್ಲಿ ಕಳ್ಳರ ಉಪಟಳ ಹೆಚ್ಚಾಗಿದೆ. ಬೈಕ್ ಗಳಲ್ಲಿ ಪೆಟ್ರೋಲ್ ಕದ್ದೊಯ್ಯುವುದು, ಮನೆಗಳ್ಳತನ, ಸರಗಳ್ಳತನ, ನಲ್ಲಿಗಳನ್ನು ಮುರಿದು ಹಾಕುವುದು ಸೇರಿದಂತೆ ಹಲವು ಅಪರಾಧ ಪ್ರಕರಣಗಳು ನಡೆಯುತ್ತಿವೆ.

ಇದು ಗ್ರಾಮಸ್ಥರ ನಿದ್ದೆಗೆಡಿಸಿದೆ. ಘಟನೆ ಸಂಬಂಧ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಈ ಕೃತ್ಯ ಮಾಡಿರುವ ಕಿಡಿಗೇಡಿಗಳನ್ನು ಬಂಧಿಸಬೇಕು. ಮುಂದೆ ಇಂತಹ ಪ್ರಕರಣಗಳು ನಡೆಯದಂತೆ , ಗಲಾಟೆಯಾಗದಂತೆ ಮುಂಜಾಗ್ರತಾ ಕ್ರಮ ವಹಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.