ಮಿಶ್ರಿಕೋಟಿ ಗ್ರಾಮದ ಹೊರವಲಯದಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನವು ಹಲವು ವರ್ಷಗಳಿಂದ ನಿರ್ವಹಣೆ ಇಲ್ಲದೇ ಸುತ್ತಮುತ್ತಲೂ ಗಿಡ, ಕಂಟಿ ಬೆಳೆದು ಸಂಪೂರ್ಣ ಹಾಳಾಗಿತ್ತು. ಇದನ್ನು ಗಮನಿಸಿದ ರಾಯಲ್ ಫಿಟ್ನೆಸ್ ಜಿಮ್‌ನ ಯುವ ಪಡೆ ಬುಧವಾರ ದೇವಸ್ಥಾನದ ಸುತ್ತಲೂ ಬೆಳೆದ ಗಿಡ-ಗಂಟಿ ತೆರವುಗೊಳಿಸಿದರು.

ಕಲಘಟಗಿ:

ನಿರ್ವಹಣೆಯಿಲ್ಲದೇ ಹಾಳು ಕೊಂಪೆಯಂತಾಗಿದ್ದ ಶತಮಾನಗಳ ಹಳೆಯದಾದ ಆಂಜನೇಯ ದೇವಸ್ಥಾನವನ್ನು ಯುವಪಡೆ ಹನುಮ ಜಯಂತಿ ಅಂಗವಾಗಿ ಸ್ವಚ್ಛಗೊಳಿಸಿತು.

ತಾಲೂಕಿನ ಮಿಶ್ರಿಕೋಟಿ ಗ್ರಾಮದ ಹೊರವಲಯದಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನವು ಹಲವು ವರ್ಷಗಳಿಂದ ನಿರ್ವಹಣೆ ಇಲ್ಲದೇ ಸುತ್ತಮುತ್ತಲೂ ಗಿಡ, ಕಂಟಿ ಬೆಳೆದು ಸಂಪೂರ್ಣ ಹಾಳಾಗಿತ್ತು. ಇದನ್ನು ಗಮನಿಸಿದ ರಾಯಲ್ ಫಿಟ್ನೆಸ್ ಜಿಮ್‌ನ ಯುವ ಪಡೆ ಬುಧವಾರ ದೇವಸ್ಥಾನದ ಸುತ್ತಲೂ ಬೆಳೆದ ಗಿಡ-ಗಂಟಿ ತೆರವುಗೊಳಿಸಿದರು. ಬಳಿಕ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಮೂಲಕ ದೇವಸ್ಥಾನಕ್ಕೆ ಮೊದಲಿನ ರೂಪ ತಂದರು. ಇವರ ಈ ಸ್ವಚ್ಛತಾ ಕಾರ್ಯವು ಗ್ರಾಮಸ್ಥರ ಮೆಚ್ಚುಗೆಗೆ ಕಾರಣವಾಯಿತು.

ಈ ವೇಳೆ ರಾಮಚಂದ್ರ ಕುಳೆನವರ, ಶಿವು ಅಗಸಿಮನಿ, ವಿನಾಯಕ ಜಾಧವ, ರವಿ ನಾಯ್ಕರ್, ಮಾಲತೇಶ ವಾಸ್ಕರ್, ಈರಣ್ಣ, ಶಿವು ತಾಳಿಕೋಟಿ, ಸಿದ್ದು ಮೂಲಿಮನಿ, ಸಮರ್ಥ ಹುನಗುಂಡಿ ಹಾಗೂ ಪರಿಶ್ರಮ ಫೌಂಡೇಶನ್ ಅಧ್ಯಕ್ಷ ಅಶೋಕ ಹೊಸಮನಿ ಸೇರಿದಂತೆ ಹಲವರಿದ್ದರು.