ಸಾರಾಂಶ
ಕಾರವಾರ: ಸುದೀರ್ಘ ೩೬ ವರ್ಷಗಳ ಬಳಿಕ ಕಾಣೆಯಾದ ವ್ಯಕ್ತಿಯನ್ನು ಪತ್ತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.ಕುಮಟಾ ತಾಲೂಕಿನ ಗೋಕರ್ಣದ ಸುಬ್ರಾಯ (ಸುಬ್ರಹ್ಮಣ್ಯ) ಮೈಯರ್ ಪತ್ತೆಯಾಗಿದ್ದು, 1987ರಲ್ಲಿ ಕೌಟುಂಬಿಕ ಕಾರಣದಿಂದ ಮನೆಬಿಟ್ಟು ತೆರಳಿದ್ದರು. ಈ ಬಗ್ಗೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಖಚಿತ ಮಾಹಿತಿ ಮೇರೆಗೆ ಮಹಾರಾಷ್ಟ್ರಕ್ಕೆ ತೆರಳಿ ಕಾಣೆಯಾದವರನ್ನು ಪತ್ತೆಹಚ್ಚಲು ೩೬ ವರ್ಷಗಳ ಬಳಿಕ ಪೊಲೀಸರು ಯಶಸ್ವಿಯಾಗಿದ್ದಾರೆ. ಪಿಐ ವಸಂತ ಆಚಾರ, ಪಿಎಸ್‌ಐ ಖಾದರ ಬಾಷಾ ಮಾರ್ಗದಲ್ಲಿ ಎಎಸ್ಐ ಅರವಿಂದ ಶೆಟ್ಟಿ, ಸಿಪಿಸಿ ಮಣಿಕಂಠ ಗೌಡ ಪತ್ತೆ ಮಾಡಿದ್ದಾರೆ. ಎಸ್‌ಪಿ ನಾರಾಯಣ ಎಂ. ತಂಡವನ್ನು ಅಭಿನಂದಿಸಿದ್ದಾರೆ.ಬಿಸಿಎಂ ವಸತಿನಿಲಯದಲ್ಲಿ ವಿದ್ಯಾರ್ಥಿ ಸಾವು
ದಾಂಡೇಲಿ: ನಗರದ ಅಂಬೇವಾಡಿಯ ಬಿಸಿಎಂ ವಸತಿನಿಲಯದಲ್ಲಿ ಜಿಟಿಟಿಸಿ ಕಾಲೇಜಿನ ವಿದ್ಯಾರ್ಥಿ ಅನಾರೋಗ್ಯದಿಂದ ಸಾವಿಗೀಡಾದ ಘಟನೆ ಮಂಗಳವಾರ ನಡೆದಿದೆ.ಹುಬ್ಬಳ್ಳಿಯ ಅನೀಶ ವಿ. ಗಾಣಿಗೇರ (18) ಎಂಬಾತನೇ ಮೃತಪಟ್ಟ ವಿದ್ಯಾರ್ಥಿ.ಈತ ಅಂಬೇವಾಡಿಯ ಜಿಟಿಟಿಸಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿ. ಅನಾರೋಗ್ಯದಿಂದ ಬಳಲುತ್ತಿದ್ದ ಎಂದು ಸಹಪಾಠಿಗಳಿಂದ ಮಾಹಿತಿ ತಿಳಿದುಬಂದಿದೆ. ಮಂಗಳವಾರ ಆರೋಗ್ಯದಲ್ಲಿ ಸ್ವಲ್ಪ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಾಲೇಜಿಗೆ ಹೋಗದೆ ವಸತಿನಿಲಯದಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದ. ತೀವ್ರ ಅನಾರೋಗ್ಯಗೊಂಡಿದ್ದ ಈತನನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತರಲಾಗಿತ್ತು. ಆದರೆ ಅಷ್ಟರೊಳಗೆ ಅನೀಶ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಕೂಲಿ ಕೆಲಸಕ್ಕೆಂದು ಹೋಗಿದ್ದ ವ್ಯಕ್ತಿ ನಾಪತ್ತೆ
ಮುಂಡಗೋಡ: ತಾಲೂಕಿನ ಪಾಳಾ ಗ್ರಾಮದ ವ್ಯಕ್ತಿ ಕಾಣೆಯಾಗಿದ್ದು, ಈ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸಂತೋಷ ಶೇಕಪ್ಪ ಮಲ್ಲೂರ(೩೬) ಕಾಣೆಯಾದ ವ್ಯಕ್ತಿ. ಕಳೆದ ಸೆ. ೧೦ರಂದು ಕೂಲಿ ಕೆಲಸಕ್ಕೆಂದು ಬೆಂಗಳೂರಿಗೆ ಹೋಗಿ ಬರುವುದಾಗಿ ಹೇಳಿ ಹೋದವನು ಈವರೆಗೂ ಮನೆಗೆ ಮರಳಿ ಬಂದಿಲ್ಲ. ಪತ್ತೆ ಹಚ್ಚಿ ಹುಡುಕಿ ಕೊಡುವಂತೆ ಈತನ ಪತ್ನಿ ಆಶಾ ಸಂತೋಷ ಮಲ್ಲೂರ ದೂರು ನೀಡಿದ್ದು, ಮುಂಡಗೋಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಪೋಟೊ: ೧೨ಎಮ್.ಎನ್.ಡಿ೩