ಕನ್ನಡಪ್ರಭ ವಾರ್ತೆ ಅಥಣಿ ಶಾಸಕ ಲಕ್ಷ್ಮಣ ಸವದಿ ಅವರ ಮನೆಯಲ್ಲಿ ಶನಿವಾರ ನಡೆದ ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಸತ್ಯಾಂಶ ಹೊರಬರಲಿ. ಯಾರೇ ತಪ್ಪು ಮಾಡಿದ್ದರೂ ಅವರ ವಿರುದ್ಧ ಹೋರಾಟ ಮಾಡುತ್ತೇವೆ. ತಮ್ಮ ರಾಜಕೀಯ ಲಾಭಕ್ಕಾಗಿ ಹಾಲುಮತದ ಸಮಾಜದ ಹೆಸರನ್ನು ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಹಾಲುಮತ ಕುರುಬರ ಸಮಾಜದ ಅಧ್ಯಕ್ಷ ರಾವಸಾಬ ಬೇವನೂರ ಹೇಳಿದರು.

ಕನ್ನಡಪ್ರಭ ವಾರ್ತೆ ಅಥಣಿ

ಶಾಸಕ ಲಕ್ಷ್ಮಣ ಸವದಿ ಅವರ ಮನೆಯಲ್ಲಿ ಶನಿವಾರ ನಡೆದ ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಸತ್ಯಾಂಶ ಹೊರಬರಲಿ. ಯಾರೇ ತಪ್ಪು ಮಾಡಿದ್ದರೂ ಅವರ ವಿರುದ್ಧ ಹೋರಾಟ ಮಾಡುತ್ತೇವೆ. ತಮ್ಮ ರಾಜಕೀಯ ಲಾಭಕ್ಕಾಗಿ ಹಾಲುಮತದ ಸಮಾಜದ ಹೆಸರನ್ನು ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಹಾಲುಮತ ಕುರುಬರ ಸಮಾಜದ ಅಧ್ಯಕ್ಷ ರಾವಸಾಬ ಬೇವನೂರ ಹೇಳಿದರು.

ಪಟ್ಟಣದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿ ಶನಿವಾರ ಶಾಸಕ ಲಕ್ಷ್ಮಣ ಸವದಿ ಅವರ ಮನೆಯ ಮುಂದೆ ನಡೆದಿರುವ ನಿಂಗಪ್ಪ ಕರೆನ್ನವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮ ಸಮಾಜದ ಸತ್ಯಪ್ಪ ಬಾಗೆಣ್ಣವರ ವೈಯಕ್ತಿಕ ಹೇಳಿಕೆಗಳನ್ನು ನೀಡಿ ಹಾಲುಮತ ಕುರುಬರ ಸಮಾಜದ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅವರ ಹೇಳಿಕೆ ವೈಯಕ್ತಿಕವಾಗಿದೆ. ಅವರು ಸಮಾಜದ ಯಾವುದೇ ಮುಖಂಡರಿಂದ ಒಪ್ಪಿಗೆ ಪಡೆದುಕೊಳ್ಳದೆ ಹೇಳಿಕೆ ನೀಡಿದ್ದಾರೆ. ಇದನ್ನ ಸಮಾಜ ಒಪ್ಪುವುದಿಲ್ಲ, ಈ ರೀತಿ ಸಮಾಜದ ಮುಖಂಡರು ಯಾವುದೇ ರಾಜಕೀಯ ಪ್ರೇರಿತ ಹೇಳಿಕೆಗಳನ್ನು ನೀಡಬಾರದು ಎಂದು ಹೇಳಿದರು.

ಈ ವೇಳೆ ಶ್ರೀಶೈಲ ಶೇಲ್ಲಪಗೋಳ, ಸುರೇಶ ಮಾಯಣ್ಣವರ, ಸುರೇಶ ಪೂಜಾರಿ, ಕಲ್ಲಪ್ಪ ಮೇತ್ರಿ, ಚಿದಾನಂದ ಮುಕಣಿ, ಶಂಕರ ವಾಘಮೋಡೆ, ಬಾಬುರಾವ ಮೇಂಡಿಗೇರಿ, ಬಾಬುರಾವ ವಾಘಮೋಡೆ, ಸಿದ್ದು ಲೋಕುರು, ಅಪ್ಪು ಪೂಜಾರಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು