ಸಾರಾಂಶ
ರಾಯಚೂರು ಜಿಲ್ಲೆ ಸಿಂಧನೂರು ನಗರದ ಮಂಡಳಿಯಿಂದ ಅನುಷ್ಠಾನಗೊಳಿಸಲಾದ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಹಂತ-7, 8ರಲ್ಲಿ 250 ಮನೆಗಳ ಕಾಮಗಾರಿಯನ್ನು ರಾಜ್ಯ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರು ಹಾಗೂ ಶಾಸಕ ಪ್ರಸಾದ್ ಅಬ್ಬಯ್ಯ ವೀಕ್ಷಿಸಿದರು.
ಕನ್ನಡಪ್ರಭ ವಾರ್ತೆ ರಾಯಚೂರು
ಜಿಲ್ಲೆಯ ಸಿಂಧನೂರು ನಗರದಲ್ಲಿ ಮಂಡಳಿಯಿಂದ ಅನುಷ್ಠಾನಗೊಳಿಸಲಾದ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಹಂತ-7, 8ರಲ್ಲಿ 250 ಮನೆಗಳ ಕಾಮಗಾರಿಯನ್ನು ರಾಜ್ಯ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರು ಹಾಗೂ ಶಾಸಕ ಅಬ್ಬಯ್ಯ ಪ್ರಸಾದ್ ವೀಕ್ಷಣೆ ಮಾಡಿದರು.ಈ 250 ಮನೆಗಳ ಪೈಕಿ 202 ಮನೆಗಳ ಕಾಮಗಾರಿ ಪ್ರಾರಂಭಿಸಲಾಗಿದ್ದು, ಅವುಗಳಲ್ಲಿ 162 ಮನೆಗಳು ಪೂರ್ಣಗೊಂಡಿರುತ್ತವೆ. ಹಾಗೂ 40 ಮನೆಗಳ ಕಾಮಗಾರಿಯು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿದ್ದು, ಇನ್ನುಳಿದ 48 ಮನೆಗಳ ಕಾಮಗಾರಿ ಶೀಘ್ರವಾಗಿ ಪ್ರಾರಂಭಿಸಲು ಹಾಗೂ ಗುಣಮಟ್ಟ ಕಾಯ್ದುಕೊಂಡು ಮನೆಗಳ ನಿರ್ಮಾಣ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅಧ್ಯಕ್ಷರು ಸೂಚಿಸಿದರು.
ಪ್ರತಿ ಮನೆ ಕಾಮಗಾರಿ ಅಂದಾಜು ವೆಚ್ಚ ₹6.78ಲಕ್ಷ ಇರುತ್ತದೆ. ಈ ಹಿಂದೆ ಮೊತ್ತದಲ್ಲಿ ಕೇಂದ್ರ ಸರ್ಕಾರ ₹1.50 ಲಕ್ಷ ಹಾಗೂ ರಾಜ್ಯ ಸರ್ಕಾರ ಎಸ್‌ಸಿ/ಎಸ್‌ಟಿ ಪಂಗಡದವರಿಗೆ ₹2.ಲಕ್ಷ ಹಾಗೂ ಇತರೆ ವರ್ಗದವರಿಗೆ ₹1.20 ಲಕ್ಷ ಅನುದಾನ ನೀಡುತ್ತಿದ್ದು, ಉಳಿದ ಮೊತ್ತವನ್ನು ಫಲಾನುಭವಿ ವಂತಿಕೆ ಹಣದ ರೂಪದಲ್ಲಿ 10% (ಎಸ್‌ಸಿ/ಎಸ್‌ಟಿ) ಮತ್ತು 15% (ಇತರೆ ವರ್ಗದವರು) ಪಾವತಿಸಿದ ನಂತರ ಉಳಿದ ಮೊತ್ತವನ್ನು ಬ್ಯಾಂಕ್ ಸಾಲ/ಲೇಬರ್ ಸಾಲದ ಮುಖಾಂತರ ಪಾವತಿಸಬೇಕಾಗಿದೆ ಎಂದರು.ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಮುಖ್ಯಮಂತ್ರಿಗಳು ಹಾಗೂ ವಸತಿ ಸಚಿವರು ಸೇರಿ ಚರ್ಚಿಸಿ ಫಲಾನುಭವಿಗಳಿಗೆ ಸಾಲದ ಹೊರೆ ಹೆಚ್ಚಾಗುತ್ತದೆ. ಫಲಾನುಭವಿಗಳಿಗೆ ಹೊರೆ ಆಗಬಾರದು, ಪ್ರತಿ ಫಲಾನುಭವಿಯಿಂದ ಗರಿಷ್ಠ ₹1 ಲಕ್ಷ ವಂತಿಗೆ ರೂಪದಲ್ಲಿ ಪಾವತಿಸಲು ಸರ್ಕಾರದ ವಸತಿ ಇಲಾಖೆ ಅಧೀನ ಕಾರ್ಯದರ್ಶಿ-2ಗೆ ಆದೇಶಿಸಲಾಗಿದ್ದು, ಈ ಮೊತ್ತ ಪಾವತಿಸಿಕೊಂಡು ಉಳಿದ ಮನೆಗಳ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಮಂಡಳಿ ಆಯುಕ್ತರಾದ ಅಶೋಕ ಡಿ.ಆರ್, ತಾಂತ್ರಿಕ ನಿರ್ದೇಶಕರು ಎಂ.ಎ.ಖಯ್ಯುಂ, ಕಲಬುರಗಿ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ದೇವೇಂದ್ರ ಕುಮಾರ ಸೇರಿ ಇತರರು ಇದ್ದರು.