ನೃತ್ಯಗಾರರನ್ನೂ ನಾಚಿಸಿದ ಶಾಸಕ ಬಾಲಕೃಷ್ಣರ ಡ್ಯಾನ್ಸ್!
KannadaprabhaNewsNetwork | Published : Oct 14 2023, 01:00 AM IST
ನೃತ್ಯಗಾರರನ್ನೂ ನಾಚಿಸಿದ ಶಾಸಕ ಬಾಲಕೃಷ್ಣರ ಡ್ಯಾನ್ಸ್!
ಸಾರಾಂಶ
ರಾಮನಗರ: ಲೋಕಸಭಾ ಚುನಾವಣೆಯಲ್ಲಿ ಲೀಡ್ ನೀಡದ ಬೂತ್ ಗಳಲ್ಲಿ ಅಭಿವೃದ್ಧಿ ಕೆಲಸ ಮಾಡುವುದಿಲ್ಲವೆಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಮಾಗಡಿ ಕ್ಷೇತ್ರ ಶಾಸಕ ಬಾಲಕೃಷ್ಣ ಇದೀಗ ನುರಿತ ಡ್ಯಾನ್ಸರ್ ಗಳು ನಾಚುವಂತೆ ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದಾರೆ.
ರಾಮನಗರ: ಲೋಕಸಭಾ ಚುನಾವಣೆಯಲ್ಲಿ ಲೀಡ್ ನೀಡದ ಬೂತ್ ಗಳಲ್ಲಿ ಅಭಿವೃದ್ಧಿ ಕೆಲಸ ಮಾಡುವುದಿಲ್ಲವೆಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಮಾಗಡಿ ಕ್ಷೇತ್ರ ಶಾಸಕ ಬಾಲಕೃಷ್ಣ ಇದೀಗ ನುರಿತ ಡ್ಯಾನ್ಸರ್ ಗಳು ನಾಚುವಂತೆ ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದಾರೆ. ಬಿಳಿ ಅಂಗಿ, ಬಿಳಿ ಪಂಚೆ ತೊಟ್ಟು, ಕಣ್ಣಿಗೆ ಗಾಗಲ್ ಧರಿಸಿ, ತಲೆಗೆ ಟವಲ್ ಸುತ್ತಿಕೊಂಡಿದ್ದ ಬಾಲಕೃಷ್ಣ ಸಿನಿಮಾ ಸ್ಟಾರ್‌ಗೇನು ಕಡಿಮೆ ಇಲ್ಲದಂತೆ ಮಾಡಿದ ಡ್ಯಾನ್ಸ್ ಗೆ ಪ್ರೇಕ್ಷಕರೆಲ್ಲರು ಮೂಕವಿಸ್ಮಿತರಾದರು. ಅಷ್ಟಕ್ಕೂ ಇಂತಹದೊಂದು ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದು ಪೌರ ಕಾರ್ಮಿಕರ ದಿನಾಚರಣೆ ಸಮಾರಂಭ. ಬಿಡದಿ ಕೈಗಾರಿಕಾ ಪ್ರದೇಶದಲ್ಲಿನ ಈಗಲ್ ಟನ್ ರೆಸಾರ್ಟ್ ನಲ್ಲಿ ಪೌರ ಕಾರ್ಮಿಕರ ದಿನಾಚರಣೆ ಆಯೋಜಿಸಲಾಗಿತ್ತು. ಶಾಸಕ ಬಾಲಕೃಷ್ಣ ಅವರನ್ನು ಮುಖ್ಯ ಅತಿಥಿಗಳನ್ನಾಗಿ ಸಮಾರಂಭಕ್ಕೆ ಆಹ್ವಾನಿಸಲಾಗಿತ್ತು. ಸಾಂಪ್ರದಾಯಿಕ ಉಡುಗೆಯಾದ ಬಿಳಿ ಅಂಗಿ, ಬಿಳಿ ಪಂಚೆ ಧರಿಸಿ ಬಾಲಕೃಷ್ಣ ಆಗಮಿಸಿದ್ದರು. ವೇದಿಕೆ ಸಮಾರಂಭ ಮುಕ್ತಾಯವಾದ ನಂತರ ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ, ಮತದಲ್ಲಿ ಮೇಲ್ಯಾವುದೋ ... ಹಾಡು ಕೇಳುತ್ತಿದ್ದಂತೆಯೇ ಶಾಸಕರು ತಾಳ ಹಾಕಲು ಆರಂಭಿಸಿದರು. ನೋಡ ನೋಡತ್ತಿದ್ದಂತೆ ಬಾಲಕೃಷ್ಣರವರು ಹಾಡಿಗೆ ಹೆಜ್ಜೆ ಹಾಕಿದರು. ಅವರೊಂದಿಗೆ ಪುರಸಭೆ ಸದಸ್ಯ ಸಿ.ಉಮೇಶ್ , ಮುಖ್ಯಾಧಿಕಾರಿ ರಮೇಶ್, ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೌರ ಕಾರ್ಮಿಕರು ಸೇರಿದಂತೆ ಎಲ್ಲರು ಕುಣಿದು ಕುಪ್ಪಳಿಸಿದರು. ರಾಜಕಾರಣದಲ್ಲಿ ಆಕ್ರೋಶ ಭರಿತ ಮಾತುಗಳಿಂದಲೇ ಹೆಸರಾಗಿರುವ ಶಾಸಕ ಬಾಲಕೃಷ್ಣರವರು ತನ್ನೊಳಗೂ ಒಬ್ಬ ನೃತ್ಯಗಾರನಿದ್ದಾನೆ ಎಂದು ತೋರಿಸುವ ಮೂಲಕ ಅಚ್ಚರಿ ಮೂಡಿಸಿದರು. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. 13ಕೆಆರ್ ಎಂಎನ್ 6,7.ಜೆಪಿಜಿ ಮಾಗಡಿ ಕ್ಷೇತ್ರ ಶಾಸಕ ಬಾಲಕೃಷ್ಣ ಡ್ಯಾನ್ಸ್ ಮಾಡುತ್ತಿರುವುದು.