ಸಾರಾಂಶ
ದೇಶದ ರಕ್ಷಣೆಯ ಸೇವೆಯಿಂದ ನಿವೃತ್ತರಾದ ವಾಯು ಸೇನಾಧಿಕಾರಿ ಟಿ. ದಿನಕರ್ ಶಾನುಭೋಗ್ ಹಾಗೂ ನಿವೃತ್ತ ಭೂಸೇನಾಧಿಕಾರಿ ರತ್ನಾಕರ ಬೈಂದೂರು ಅವರನ್ನು ಭೇಟಿ ಮಾಡಿ ಶಾಸಕ ಗುರುರಾಜ ಗಂಟಿಹೊಳಿ ಸನ್ಮಾನಿಸಿದರು ಮತ್ತು ಈ ಮೂಲಕ ಪಾಕಿಸ್ಥಾನ ವಿರುದ್ಧ ಯುದ್ಧ ಸನ್ನದ್ಧರಾಗಿರುವ ಭಾರತದ ಸೇನೆಗೆ ಗೌರವ ಸಲ್ಲಿಸಿದರು.
ತನ್ನಡಪ್ರಭ ವಾರ್ತೆ ಬೈಂದೂರು
ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಸೋಮವಾರ ತಮ್ಮ ಜನ್ಮದಿನವನ್ನು ಸೈನಿಕರೊಂದಿಗೆ ಆಚರಿಸಿಕೊಳ್ಳುವ ಮೂಲಕ ಸ್ಮರಣೀಯವಾಗಿಸಿಕೊಂಡಿದ್ದಾರೆ.ದೇಶದ ರಕ್ಷಣೆಯ ಸೇವೆಯಿಂದ ನಿವೃತ್ತರಾದ ವಾಯು ಸೇನಾಧಿಕಾರಿ ಟಿ. ದಿನಕರ್ ಶಾನುಭೋಗ್ ಹಾಗೂ ನಿವೃತ್ತ ಭೂಸೇನಾಧಿಕಾರಿ ರತ್ನಾಕರ ಬೈಂದೂರು ಅವರನ್ನು ಭೇಟಿ ಮಾಡಿ ಸನ್ಮಾನಿಸಿದರು ಮತ್ತು ಈ ಮೂಲಕ ಪಾಕಿಸ್ಥಾನ ವಿರುದ್ಧ ಯುದ್ಧ ಸನ್ನದ್ಧರಾಗಿರುವ ಭಾರತದ ಸೇನೆಗೆ ಗೌರವ ಸಲ್ಲಿಸಿದರು.ಈ ವೇಳೆ ಮಾತನಾಡಿದ ಶಾಸಕರು, ಎಲ್ಲರಿಗೂ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುವ ಯೋಗ ಮತ್ತು ಅವಕಾಶ ಲಭಿಸುವುದಿಲ್ಲ, ನಾವು ಸೈನಿಕರನ್ನು ಮತ್ತು ಅವರ ಕುಟುಂಬವನ್ನು ಗೌರವಿಸುವ ಮೂಲಕವೂ ದೇಶಪ್ರೇಮ ಮೆರೆಯಬಹುದು, ಹೀಗಾಗಿ ಮುಂದಿನ ದಿನಗಳಲ್ಲಿ ಪ್ರತೀ ಗ್ರಾಮದಲ್ಲೂ ಸೈನಿಕರನ್ನು ಗೌರವಿಸುವ ಕಾರ್ಯಕ್ರಮ ರೂಪಿಸಲಾಗುವುದು ಎಂದು ಹೇಳಿದರು.ಪಕ್ಷದ ಕಾರ್ಯಕರ್ತರು ಕೂಡ ಬೈಂದೂರು ಕ್ಷೇತ್ರದಾದ್ಯಂತ ದೇಶದ ಸೇವೆಯಲ್ಲಿರುವ ಸೈನಿಕರನ್ನು, ಸೈನಿಕ ಕುಟುಂಬವನ್ನು ಗೌರವಿಸುವ ಮೂಲಕ ಶಾಸಕ ಗಂಟಿಹೊಳೆ ಅವರ ಜನ್ಮದಿನವನ್ನು ಆಚರಿಸಿದ್ದು ವಿಶೇಷವಾಗಿತ್ತು.