ವಾಟೇಹೊಳೆ ಜಲಾಶಯಕ್ಕೆ ಶಾಸಕ ಸಿಮೆಂಟ್‌ ಮಂಜು ಬಾಗಿನ

| Published : Jul 29 2024, 12:45 AM IST

ವಾಟೇಹೊಳೆ ಜಲಾಶಯಕ್ಕೆ ಶಾಸಕ ಸಿಮೆಂಟ್‌ ಮಂಜು ಬಾಗಿನ
Share this Article
  • FB
  • TW
  • Linkdin
  • Email

ಸಾರಾಂಶ

ಆಲೂರು ತಾಲೂಕಿನ ತಾಲೂಕಿನ ಪಾಳ್ಯ ಹೋಬಳಿ ಸಮುದ್ರವಳ್ಳಿ ಗ್ರಾಮದ ಸಮೀಪ ಹಾಗೂ ಬೇಲೂರು ತಾಲೂಕಿನ ಚಿನ್ನಹಳ್ಳಿ ಗ್ರಾಮದ ಸಮೀಪದಲ್ಲಿರುವ ವಾಟೇಹೊಳೆ ಜಲಾಶಯವು ತುಂಬಿದ ಹಿನ್ನೆಲೆಯಲ್ಲಿ ಶಾಸಕ ಸಿಮೆಂಟ್ ಮಂಜು ಅವರು ಭಾನುವಾರ ಮೊದಲ ಬಾರಿಗೆ ಬಾಗಿನ ಅರ್ಪಿಸಿ ಗಂಗಾ ಮಾತೆಗೆ ಪೂಜೆ ಸಲ್ಲಿಸಿದರು. ವಾಟೇಹೊಳೆ ಜಲಾಶಯವು ಆಲೂರು ತಾಲೂಕಿನ 18 ಸಾವಿರ ಎಕರೆಯ ರೈತರ ಹಾಗೂ ಬೇಲೂರು ತಾಲೂಕಿನ 500 ಎಕರೆಯ ರೈತರ ಹಾಗೂ ಜನಸಾಮಾನ್ಯರ ಜೀವನಾಡಿ ಆಗಿರುವ ವಾಟೇಹೊಳೆ ಡ್ಯಾಂ ತುಂಬಿರುವುದು ನಿಜಕ್ಕೂ ಹರ್ಷ ತಂದಿದೆ ಎಂದರು.

ಕನ್ನಡಪ್ರಭ ವಾರ್ತೆ ಆಲೂರು

ತಾಲೂಕಿನ ವಾಟೇಹೊಳೆ ಜಲಾಶಯ ತುಂಬಿದ ಹಿನ್ನೆಲೆಯಲ್ಲಿ ಶಾಸಕ ಸಿಮೆಂಟ್ ಮಂಜು ಅವರು ಭಾನುವಾರ ಮೊದಲ ಬಾರಿಗೆ ಬಾಗಿನ ಅರ್ಪಿಸಿ ಗಂಗಾ ಮಾತೆಗೆ ಪೂಜೆ ಸಲ್ಲಿಸಿದರು.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಾಲೂಕಿನ ಪಾಳ್ಯ ಹೋಬಳಿ ಸಮುದ್ರವಳ್ಳಿ ಗ್ರಾಮದ ಸಮೀಪ ಹಾಗೂ ಬೇಲೂರು ತಾಲೂಕಿನ ಚಿನ್ನಹಳ್ಳಿ ಗ್ರಾಮದ ಸಮೀಪದಲ್ಲಿರುವ ಈ ವಾಟೇಹೊಳೆ ಜಲಾಶಯವು ಎರಡು ತಾಲೂಕಿಗೆ ಸೇರಿದ್ದಾಗಿದೆ. ಜೊತೆಗೆ ಇದೆ ಮೊದಲ ಬಾರಿಗೆ ಬಂದು ನಾನು ಬಾಗಿನ ನೀಡಿದ್ದು, ಇದು ನನ್ನ ಸೌಭಾಗ್ಯವಾಗಿದೆ. ಪ್ರತಿ ವರ್ಷವೂ ಇದೇ ರೀತಿ ವಾಟೇಹೊಳೆ ಜಲಾಶಯ ತುಂಬಿ ಹರಿಯಲಿ. ಈ ಭಾಗದ ರೈತರಿಗೆ ಅನುಕೂಲವಾಗಲೆಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದರು.

ವಾಟೇಹೊಳೆ ಜಲಾಶಯವು ಆಲೂರು ತಾಲೂಕಿನ 18 ಸಾವಿರ ಎಕರೆಯ ರೈತರ ಹಾಗೂ ಬೇಲೂರು ತಾಲೂಕಿನ 500 ಎಕರೆಯ ರೈತರ ಹಾಗೂ ಜನಸಾಮಾನ್ಯರ ಜೀವನಾಡಿ ಆಗಿರುವ ವಾಟೇಹೊಳೆ ಡ್ಯಾಂ ತುಂಬಿರುವುದು ನಿಜಕ್ಕೂ ಹರ್ಷ ತಂದಿದೆ. ಡ್ಯಾಂ‌ನಿಂದ ಸಾವಿರಾರು ರೈತ ಕುಟುಂಬದವರಿಗೆ ಅನುಕೂಲ ಆಗಲಿದೆ ಎಂದರು.

ಈ ಸಂದರ್ಭದಲ್ಲಿ ತಾಳೂರು ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಿವಾಸ್, ರತ್ನಮ್ಮ, ಆಲೂರು ತಾಲೂಕು ಬಿಜೆಪಿ ಅಧ್ಯಕ್ಷ ಉಮಾ ರವಿಪ್ರಕಾಶ್, ಖಜಾಂಚಿ ಹೇಮಂತ್, ಮುಖಂಡರಾದ ಹನುಮಂತೇಗೌಡ, ಕಿರಣ್, ನವೀನ್, ಮೋಹನ್, ಹರೀಶ್, ಮಂಜೇಗೌಡ, ವಾಟೇಹೊಳೆ ಜಲಾಶಯದ ಸಹಾಯಕ ನಿರ್ದೇಶಕ ಧರ್ಮರಾಜು, ಎಂಜಿನಿಯರ್ ಸಂದೀಪ್ ಸೇರಿದಂತೆ ಕಚೇರಿಯ ಸಿಬ್ಬಂದಿ ಹಾಗೂ ಬೇಲೂರು ತಾಲೂಕಿನ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.