ಅಗ್ನಿ ಆಕಸ್ಮಿಕದಲ್ಲಿ ಸುಟ್ಟುಹೋದ ತೋಟಕ್ಕೆ ಶಾಸಕ ಸಿಮೆಂಟ್‌ ಮಂಜು ಭೇಟಿ

| Published : Apr 08 2024, 01:02 AM IST

ಅಗ್ನಿ ಆಕಸ್ಮಿಕದಲ್ಲಿ ಸುಟ್ಟುಹೋದ ತೋಟಕ್ಕೆ ಶಾಸಕ ಸಿಮೆಂಟ್‌ ಮಂಜು ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಇತ್ತೀಚಿಗೆ ಕಾಫಿ ತೋಟಕ್ಕೆ ಬೆಂಕಿ ಬಿದ್ದು ಕೊಯ್ಲಿಗೆ ಬಂದಿದ್ದ ಕಾಫಿಗಿಡ, ಕಾಳುಮೆಣಸು, ಸಿಲ್ವಾರ್, ಸುಟ್ಟು ಕರಕಲಾಗಿದ್ದ ನಿಡುಗರಹಳ್ಳಿ ಗ್ರಾಮದ ರೈತ ಸೋಮಶೇಖರ್ ತೋಟಕ್ಕೆ ಶಾಸಕ ಸಿಮೆಂಟ್ ಮಂಜುನಾಥ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಸೂಕ್ತ ಪರಿಹಾರ ಕಲ್ಪಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಆಲೂರು

ತಾಲೂಕಿನ ಕೆಂಚಮ್ಮನ ಹೊಸಕೋಟೆ ಹೋಬಳಿಯ ನಿಡುಗರಳ್ಳಿ ಗ್ರಾಮದ ಸೋಮಶೇಖರ್‌ಗೆ ಸೇರಿದ ಸುಮಾರು 2 ಎಕರೆ ತೋಟಕ್ಕೆ ಅವರು ಮನೆಯಲ್ಲಿ ಇಲ್ಲದ ವೇಳೆಯಲ್ಲಿ ಇತ್ತೀಚೆಗೆ ಬೆಂಕಿ ಅವಗಢ ಸಂಭವಿಸಿದೆ. ಫಸಲಿಗೆ ಬಂದಿದ್ದ ಸುಮಾರು 2200 ಕಾಫಿಗಿಡ, 800 ಕಾಳು ಮೆಣಸಿನ ಬಳ್ಳಿ, 880 ಸಿಲ್ವಾರ್ ಮರ ಬೆಂದು ಹೋಗಿ ಕೋಟ್ಯಾಂತರ ರು.ಗಳ ನಷ್ಟ ಸಂಭವಿಸಿತ್ತು.ನಮ್ಮ ಕಾಫಿ ತೋಟದ ಪಕ್ಕದಲ್ಲಿ ಒಣಗಿದ್ದ ಕಸಕ್ಕೆ ಪಕ್ಕದ ತೋಟದವರು ಬೆಂಕಿ ಹಚ್ಚಿದ್ದು ನಮ್ಮ ಕಾಫಿ ತೋಟಕ್ಕೂ ಹಬ್ಬಿ. ಸುಮಾರು 17 ವರ್ಷಗಳಿಂದ ಕಷ್ಟಪಟ್ಟು ಬೆಳೆಸಿ ಕೊಯ್ಲಿಗೆ ಬಂದಿದ್ದ ಮೆಣಸಿನ ಬಳ್ಳಿ, ಸಿಲ್ವಾರ್ ಹಾಗೂ ಕಾಫಿ ಎಲ್ಲವೂ ಇದೀಗ ಬೆಂಕಿಗೆ ಆಹುತಿಯಾಗಿರುವುದರಿಂದ ಕೋಟ್ಯಂತರ ರು. ನಷ್ಟ ಸಂಭವಿಸಿದೆ ಎಂದು ಮಾಲೀಕ ರೈತ ಸೋಮಶೇಖರ್ ಶಾಸಕರ ಹಾಗೂ ಮಾಧ್ಯಮದವರ ಮುಂದೆ ಅಳಲು ತೋಡಿಕೊಂಡರು. ಈ ಕುರಿತು ಮಾದ್ಯಮ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಸಿಮೆಂಟ್ ಮಂಜುನಾಥ್, ಬೆಂಕಿ ಅವಘಡ ಸಂಭವಿಸಿರುವ ಸ್ಥಳಕ್ಕೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರ ಕಾರ್ಯಾಚರಣೆ ಮಾಡುವಂತೆ ಸೂಚನೆ ನೀಡಿರುವೆ. ನಮ್ಮ ತಾಲೂಕಿನಲ್ಲಿ ಅಗ್ನಿ ಅವಘಡಗಳು ಸಂಭವಿಸಿದಾಗ ನಂದಿಸಲು ಇರಬೇಕಾದ ಅಗ್ನಿಶಾಮಕ ಠಾಣೆ ಇಲ್ಲದಿರುವುದು ನಿಜಕ್ಕೂ ದುರ್ದೈವ ಸಂಗತಿಯಾಗಿದೆ ರೈತರಿಗೆ ಅನ್ಯಾಯವಾಗದ ರೀತಿಯಲ್ಲಿ ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪೂವಯ್ಯ, ಯುವ ಮೋರ್ಚಾ ಉಪಾಧ್ಯಕ್ಷ ಶಶೀಧರ್, ಬಿಜೆಪಿ ಕಾರ್ಯಕರ್ತವಾಸು, ಲೋಹಿತ್, ದಿನೇಶ್, ಸತೀಶ್, ನಾಗರಾಜ್, ನವೀನ್ ಸೇರಿದಂತೆ ಮುಂತಾದವರು ಹಾಜರಿದ್ದರು.