ಸಾರಾಂಶ
ಕೆಆರ್‌ಐಡಿಎಲ್ ನಿಗಮದ ವಿಶೇಷ ಯೋಜನೆಯಡಿ ಪಾಂಡವಪುರ ತಾಲೂಕಿನ ಚಿಕ್ಕಾಡೆ ಗ್ರಾಮದಲ್ಲಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ. ಗುತ್ತಿಗೆದಾರರು ಕಾಮಗಾರಿ ಗುಣಮಟ್ಟ ಕಾಯ್ದುಕೊಳ್ಳಬೇಕು.
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಚಿಕ್ಕಾಡೆ ಗ್ರಾಮದಲ್ಲಿ ಕೆಆರ್‌ಐಡಿಎಲ್ ನಿಗಮದ ಯೋಜನೆಯಡಿ ಅಂದಾಜು 30 ಲಕ್ಷ ರು. ವೆಚ್ಚದಲ್ಲಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಗುರುವಾರ ಭೂಮಿಪೂಜೆ ನೆರವೇರಿಸಿದರು.ಬಳಿಕ ಮಾತನಾಡಿದ ಅವರು, ನಿಗಮದ ವಿಶೇಷ ಯೋಜನೆಯಡಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ. ಗುತ್ತಿಗೆದಾರರು ಕಾಮಗಾರಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಸೂಚಿಸಿದರು.
ಈ ವೇಳೆ ಗ್ರಾಪಂ ಅಧ್ಯಕ್ಷೆ ಅಕ್ಷತ, ಟಿಎಪಿಸಿಎಂಎಸ್ ನಿರ್ದೇಶಕ ಶ್ರೀಕಾಂತ್, ಯಜಮಾನರಾದ ಲೋಕೇಶ್, ಸ್ವಾಮೀಗೌಡ, ಕೃಷ್ಣೇಗೌಡ, ಮುಖಂಡರಾದ ವಿಜಯೇಂದ್ರ, ಹರೀಶ್, ಸಿ.ಟಿ.ಪ್ರಕಾಶ್, ರಾಜೇಂದ್ರ, ರಘು, ನಾಗರಾಜು, ಸಿ.ಟಿ.ರಮೇಶ್, ಮೋಹನ್, ಆತ್ಮ, ವಕೀಲ ಚನ್ನೇಗೌಡ, ಕೇಬಲ್ ಹರೀಶ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆ
ಮಂಡ್ಯ: ಶ್ರೀಮಹಾಲಿಂಗೇಗೌಡ ಮದ್ದನಘಟ್ಟ ಫೌಂಡೇಶನ್ (ರಿ) ವತಿಯಿಂದ ನಗರದ ಗೀತಾ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು. ಇದೇ ವೇಳೆ ಎಂ.ಎಂ.ಫೌಂಡೇಶನ್ ಕಾರ್ಯಕ್ಕೆ ಶ್ರೀಗೀತಾ ಪ್ರೌಢಶಾಲೆ ಆಡಳಿತ ಮಂಡಳಿ, ಶಾಲಾ ಶಿಕ್ಷಕ ಮತ್ತು ವಿದ್ಯಾರ್ಥಿಗಳು ಶ್ಲಾಘನೆ ವ್ಯಕ್ತಪಡಿಸಿದರು.ಈ ವೇಳೆ ಫೌಂಡೇಶನ್ ಖಜಾಂಚಿ ಶಶಿಕುಮಾರ್, ಸದಸ್ಯರಾದ ಕೃಷ್ಣೇಗೌಡ, ಮಹೇಶ್, ನಾಗೇಂದ್ರ ಹಾಗೂ ಶಾಲೆ ಕಾರ್ಯದರ್ಶಿಗಳಾದ ಬಸವರಾಜ್ ಮತ್ತು ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಸಿಬ್ಬಂದಿ ವರ್ಗ ಇದ್ದರು.