ಲಕ್ಷ್ಮೇಶ್ವರ: ಶಾಸಕ ಡಾ. ಚಂದ್ರು ಲಮಾಣಿ ಅವರ ಏಳ್ಗೆ ಸಹಿಸದೆ ಕಾಂಗ್ರೆಸ್ಸಿನ ಕುತಂತ್ರಿಗಳು ಹೆಣೆದ ಮೋಸದ ಬಲೆಯಲ್ಲಿ ಸಿಲುಕಿಸಿದ್ದಾರೆ ಎಂದು ಡಾ. ಚಂದ್ರು ಲಮಾಣಿ ಅಭಿಮಾನಿ ಬಳಗದ ಮುಖಂಡ ಸುನೀಲ ಮಹಾಂತೆಶೆಟ್ಟರ ಆರೋಪಿಸಿದರು.ಪಟ್ಟಣದಲ್ಲಿ ಡಾ. ಚಂದ್ರು ಲಮಾಣಿ ಅಭಿಮಾನಿಗಳು ಬುಧವಾರ ಬೆಳಗ್ಗೆ ಹಮ್ಮಿಕೊಂಡ ಪ್ರತಿಭಟನಾ ಮೆರವಣಿಗೆಯ ನೇತೃತ್ವ ವಹಿಸಿ ಮಾತನಾಡಿ, ದಲಿತ ಸಮುದಾಯದ ಯುವಕನ (ಡಾ. ಚಂದ್ರು ಲಮಾಣಿ) ಸಾಧನೆ ಸಹಿಸದೆ ಕುತಂತ್ರ ಮಾಡಿ ಲೋಕಾಯುಕ್ತ ದಾಳಿಗೆ ಸಿಲುಕಿಸಿದ್ದು ಖಂಡನೀಯ ಎಂದರು.ಡಾ. ಚಂದ್ರು ಅಭಿಮಾನಿ ಬಳಗದ ಕುಮಾರಸ್ವಾಮಿ ಹಿರೇಮಠ ಮಾತನಾಡಿ, ಡಾ. ಚಂದ್ರು ಲಮಾಣಿ ಅವರು ಬಡತನದಲ್ಲಿ ಹುಟ್ಟಿ ಬೆಳೆದು ಯುವ ಮುಖಂಡರಾಗಿ ಹೊರಹೊಮ್ಮಿದರೆ ಮುಂದೆ ನಮ್ಮ ಆಟ ನಡೆಯುವುದಿಲ್ಲ ಎಂಬುದನ್ನು ಅರಿತು ಲೋಕಾಯುಕ್ತ ಬಲೆಗೆ ಸಿಲುಕಿಸುವ ಯತ್ನ ಮಾಡಿದ್ದಾರೆ ಎಂದರು.
ಪಟ್ಟಣದ ಸೋಮೇಶ್ವರ ತೇರಿನ ಮನೆ ಆವರಣದಿಂದ ಆರಂಭಗೊಂಡ ಡಾ. ಚಂದ್ರು ಲಮಾಣಿ ಅಭಿಮಾನಿಗಳ ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಭಾಗವಹಿಸಿದ್ದರು. ಮೆರವಣಿಗೆಯು ಸೊಪ್ಪಿನ ಕೇರಿ ಓಣಿಯ ಮೂಲಕ ಸಾಗಿ ಹಾವಳಿ ಹನುಮಪ್ಪನ ದೇವಸ್ಥಾನ, ಬಜಾರ ರಸ್ತೆ, ಸೋಮೇಶ್ವರ ಪಾದಗಟ್ಟಿ, ಪುರಸಭೆ ಹಾಗೂ ಶಿಗ್ಲಿ ಕ್ರಾಸ್ ಮೂಲಕ ಸಾಗಿ ಹೊಸ ಬಸ್ ನಿಲ್ದಾಣದ ಎದುರು ಬೃಹತ್ ಪ್ರತಿಭಟನೆಯಾಗಿ ಮಾರ್ಪಟ್ಟಿತು.ಶಂಕರ ಮರಾಠೆ, ನವೀನ ಹಿರೇಮಠ, ಲಿಂಗರಾಜ ಪಾಟೀಲ, ನಾಗರಾಜ ಲಕ್ಕುಂಡಿ, ತಿಮ್ಮರೆಡ್ಡಿ ಅಳವಂಡಿ, ಆನಂದಗೌಡ ಪಾಟೀಲ, ಶಿವಣ್ಣ ಲಮಾಣಿ ಅವರು ಮಾತನಾಡಿದರು. ಶಾಸಕ ಡಾ.ಚಂದ್ರು ಲಮಾಣಿ ಅಭಿಮಾನಿ ಬಳಗದ ಜಾನು ಲಮಾಣಿ, ಕೆ.ವಿ. ಹಂಚಿನಾಳ, ಎಂ.ಎಸ್. ದೊಡ್ಡಗೌಡರ, ಶಿವಪ್ರಕಾಶ ಮಹಾಜನಶೆಟ್ಟರ, ಆನಂದಗೌಡ ಪಾಟೀಲ, ಮಲ್ಲಣ್ಣ ಅಣಜಿ, ನಾಗರಾಜ ಹೊಸೂರ, ರಮೇಶ ದನದಮನಿ, ಲಿಂಗರಾಜ ಪಾಟೀಲ್, ನಿಂಗಪ್ಪ ಬನ್ನಿ, ಪುಂಡಲೀಕ ಲಮಾಣಿ, ಶಿವಣ್ಣ ಲಮಾಣಿ, ನಾಗರಾಜ ಬಟಗುರ್ಕಿ, ಮಲ್ಲೇಶಪ್ಪ ಲಮಾಣಿ, ರಾಜು ಅಂದಲಗಿ, ಸೋಮಣ್ಣ ಉಪನಾಳ, ಥಾವರಪ್ಪ ಲಮಾಣಿ, ಎಂ.ಆರ್. ಪಾಟೀಲ, ಪೂರ್ಣಾಜಿ ಕರಾಟೆ, ಗಂಗಾಧರ ಮೆಣಸಿನಕಾಯಿ, ನೀಲಪ್ಪ ಹತ್ತಿ, ನಾಗರಾಜ ಲಕ್ಕುಂಡಿ, ಫಕ್ಕೀರೇಶ ರಟ್ಟೀಹಳ್ಳಿ, ಶಂಕರ ಬಾವಿಮನಿ, ಬಸವರಾಜ ಇಟಗಿ, ಡಿ.ವೈ. ಹುನಗುಂದ, ಟೊಪಣ್ಣ ಲಮಾಣಿ, ಅಶೋಕ ಬಟಗುರ್ಕಿ, ತಿಪ್ಪಣ್ಣ ಕೊಂಚಿಗೇರಿ, ಡಾ. ಭೀಮಸಿಂಗ್ ರಾಠೋಡ, ಭೀಮಣ್ಣ ಯಂಗಾಡಿ, ಪ್ರವೀಣ ಬೋಮಲೆ, ಬಸವರಾಜ ಚಕ್ರಸಾಲಿ, ಶಿವಯೋಗಿ ಅಂಕಲಕೋಟಿ, ಶಕ್ತಿ ಕತ್ತಿ, ಅಶೋಕ ಶಿರಹಟ್ಟಿ, ಅನೀಲ ಮುಳುಗುಂದ, ವಿಜಯ ಕುಂಬಾರ, ನಂದಾ ಪಲ್ಲೆದ, ಜ್ಯೋತಿ ಹಾನಗಲ್, ಅಶ್ವಿನಿ ಅಂಕಲಕೋಟಿ, ವಾಣಿ ಹತ್ತಿ, ಮಂಜುಳಾ ಗುಂಜಳ ಸೇರಿದಂತೆ ಸಾವಿರಾರು ಅಭಿಮಾನಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.