ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಜಯಪಲ್ ಅವರು ಕಳೆದ 3 ತಿಂಗಳಿಂದ ಚಿನ್ನದ ಗಣಿ ಪ್ರದೇಶದಲ್ಲಿ ಕುಡಿವ ನೀರು ಕೊರತೆ ಉಂಟಾಗಿದ್ದು, ಸಾರ್ವಜನಿಕರು ಹಣ ಕೊಟ್ಟು ನೀರನ್ನು ಖರೀದಿ ಮಾಡುತ್ತಿದ್ದಾರೆ. ಚಿನ್ನದ ಗಣಿಗಳ ಕಾರ್ಮಿಕರ ಕುಟುಂಬಗಳ ಜೀವನ ನಡೆಸುವುದೇ ಕಷ್ಟವಾಗಿದೆ ಎಂದು ಶಾಸಕರನ್ನು ಪ್ರಶ್ನಿಸಿದರು.
ಕನ್ನಡಪ್ರಭ ವಾರ್ತೆ, ಕೆಜಿಎಫ್ ಕುಡಿಯುವ ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ ಸ್ವಪಕ್ಷದವರಿಂದಲೇ ಶಾಸಕಿ ರೂಪಕಲಾ ಶಶಿಧರ್ ಅವರು ಮುಜುಗರಕ್ಕೆ ಒಳಗಾದ ಪ್ರಸಂಗ ನಗರಸಭೆಯಲ್ಲಿ ನಡೆಯಿತು.ಕಜಿಎಫ್ ತಾಲೂಕಿನ ಕುಡಿವ ನೀರಿನ ಕೊರತೆ ಕುರಿತು ಶಾಸಕರು ಆಧಿಕಾರಿಗಳ ಸಭೆ ಹಮ್ಮಿಕೊಂಡಿದ್ದರು.
ಈ ಸಭೆಯಲ್ಲಿ ಭಾಗವಹಿಸಿದ್ದ ೭ ನೇ ವಾರ್ಡ್‌ನ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಜಯಪಲ್ ಅವರು ಕಳೆದ 3 ತಿಂಗಳಿಂದ ಚಿನ್ನದ ಗಣಿ ಪ್ರದೇಶದಲ್ಲಿ ಕುಡಿವ ನೀರು ಕೊರತೆ ಉಂಟಾಗಿದ್ದು, ಸಾರ್ವಜನಿಕರು ಹಣ ಕೊಟ್ಟು ನೀರನ್ನು ಖರೀದಿ ಮಾಡುತ್ತಿದ್ದಾರೆ. ಚಿನ್ನದ ಗಣಿಗಳ ಕಾರ್ಮಿಕರ ಕುಟುಂಬಗಳ ಜೀವನ ನಡೆಸುವುದೇ ಕಷ್ಟವಾಗಿದೆ ಎಂದು ಶಾಸಕರನ್ನು ಪ್ರಶ್ನಿಸಿದರು. ೭ನೇ ವಾರ್ಡ್‌ನಲ್ಲಿ ಮೂರು ಕೊಳವೆಬಾವಿಗಳಲ್ಲಿ ಕೇಬಲ್ ವೈರ್ ಕಳವಾಗಿದ್ದು, ನಗರಸಭೆ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಸಭೆಯಲ್ಲಿ ಜಯಪಾಲ್ ಗಮನಕ್ಕೆ ತಂದರು. ಕುಡಿಯುವ ನೀರಿನ ವಿಚಾರದಲ್ಲಿ ತೊಂದರೆ ಆದರೆ ನಗರಸಭೆ ಮುಂಭಾಗ ಧರಣಿ ಮಾಡುವುದಾಗಿ ಜಯಪಾಲ್ ಮಾತನಾಡಿದ್ದಾರೆ. ಇದಕ್ಕೆ ಶಾಸಕರು ನೀವು ಧರಣಿ ಯಾವಾಗ ಮಾಡುತ್ತೀರಾ ಎಂದು ಜಯಪಾಲ್ ಅವರನ್ನು ಪ್ರಶ್ನಿಸಿದರು. ಆಗ ಸಿಟ್ಟಿಗೆದ್ದ ಜಯಪಾಲ್ ನಾನು ಕಾಂಗ್ರೆಸ್ ಪಕ್ಷದ ಹಿರಿಯ ಸದಸ್ಯ, ೧೯೮೭ ರಿಂದ ಕಾಂಗ್ರೆಸ್ಸನ್ನು ಕಟ್ಟಿ ಬೆಳೆಸಿದ್ದೇನೆ. ಹಿರಿಯರು ಎನ್ನದೇ ಕುಡಿವ ನೀರಿಗೆ ಧರಣಿ ಯಾವಾಗ ಮಾಡುತ್ತೀರಾ ಎಂದು ಹೀಯಾಳಿಸುತ್ತೀರಾ. ಮೊದಲು ಚಿನ್ನದ ಗಣಿಗಳ ಕಾರ್ಮಿಕ ಕುಟುಂಬಗಳಿಗೆ ಕುಡಿವ ನೀರನ್ನು ಕೊಡಲು ಅಧಿಕಾರಿಗಳಿಗೆ ಸೂಚನೆ ನೀಡಿ ಇಲ್ಲದೇ ಹೋದರೆ ನಗರಸಭೆ ಮುಂಭಾಗ ಪ್ರತಿಭಟನೆ ಮಾಡುವುದಾಗಿ ಶಾಸಕಿ ರೂಪಕಲಾ ಶಶಿಧರ್ ಅವರಿಗೆ ತಿರುಗೇಟು ನೀಡಿದರು.