ಸಾರಾಂಶ
- ಶಾಸಕ ಜಿ.ಡಿ. ಹರೀಶ್ ಗೌಡ ವಿಶ್ವಾಸ
- ಮೈಸೂರಿನಲ್ಲಿ ಯದುವೀರ್ ಗೆಲವು ಗ್ಯಾರಂಟಿಫೋಟೋ- 21ಎಂವೈಎಸ್ 60- ಹುಣಸೂರು ತಾಲೂಕು ಮರೂರು ಕಾವಲ್ ಗ್ರಾಮದಲ್ಲಿ ಶಾಸಕ ಜಿ.ಡಿ. ಹರೀಶ್ ಗೌಡ ಲೋಕಸಭಾ ಚುನಾವಣೆಯಲ್ಲಿ ಹಿನ್ನೆಲೆಯಲ್ಲಿ ಮತದಾನ ಮಾಡಿಸುವಂತೆ ಕಾರ್ಯಕರ್ತರಿಗೆ ಮಾಹಿತಿ ನೀಡಿದರು.
---ಕನ್ನಡಪ್ರಭ ವಾರ್ತೆ ಹುಣಸೂರು
ಮತ್ತೆ ಮೋದಿ ಪ್ರಧಾನಿ, ಎಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರದಲ್ಲಿ ಮಂತ್ರಿ, ಮೈಸೂರಿನ ಕ್ಷೇತ್ರದಲ್ಲಿ ಯದುವೀರ್ ಒಡೆಯರ್ ಗೆಲುವು ಗ್ಯಾರಂಟಿ ಎಂದು ಶಾಸಕ ಜಿ.ಡಿ. ಹರೀಶ್ ಗೌಡ ವಿಶ್ವಾಸ ವ್ಯಕ್ತಪಡಿಸಿದರು.ತಾಲೂಕಿನ ಹರವೆ, ಹಿರೀಕ್ಯಾತನಹಳ್ಳಿ, ಕಟ್ಟೆ ಮಳಲವಾಡಿ, ಮೋದೂರು, ಗ್ರಾಪಂ ವ್ಯಾಪ್ತಿಯ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದ ಜೆಡಿಎಸ್ ಪಕ್ಷದ ಕಾರ್ಯಕರ್ತರು ಯಾವುದೇ ಗೊಂದಲಗಳನ್ನು ಮಾಡಿಕೊಳ್ಳುವ ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ಪ್ರಾಮಾಣಿಕವಾಗಿ ಮೈತ್ರಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು.
ಕೇಂದ್ರದಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ. ಏಕೆಂದರೆ ಇಡೀ ದೇಶದಲ್ಲಿ 200 ಅಭ್ಯರ್ಥಿಗಳನ್ನು ಕೈ ಪಕ್ಷ ನಿಲ್ಲಿಸಿದೆ. ಆದ್ದರಿಂದ ಅಧಿಕಾರಕ್ಕೆ ಎಲ್ಲಿ ಬರುತ್ತದೆ ಎಂದರು.ಇನ್ನು ಕಾಂಗ್ರೆಸ್ ಅಭ್ಯರ್ಥಿಗಳು ಮನೆಮನೆಗೆ ತೆರಳಿ ಗ್ಯಾರಂಟಿ ಕಾರ್ಡ್ ನೀಡಿ ಆಧಾರ್ ಕಾರ್ಡ್ ನಂಬರ್ ಬರೆಸು ನೀಡುತ್ತಿದ್ದಾರೆ. ಇದರ ಬಗ್ಗೆ ತಿಳಿ ಹೇಳಬೇಕು. 1 ಲಕ್ಷ ಕೊಡುವುದಕ್ಕೆ ಆಗುವುದಿಲ್ಲ. ಏಕೆಂದರೆ 40 ಕೋಟಿ ಬಿಪಿಎಲ್ ಕಾರ್ಡ್ ಗಳಿವೆ. ಇದಕ್ಕೆ 40 ಲಕ್ಷ ಕೋಟಿ ಅನುದಾನ ಬೇಕಾಗುತ್ತದೆ. ನಮ್ಮ ಕೇಂದ್ರ ಸರ್ಕಾರದ ಬಜೆಟ್ 47 ಲಕ್ಷ ಕೋಟಿ ಇದೆ. ಇದು ಬರಿ ಸುಳ್ಳು, ಜೊತೆಗೆ ಅಂಬೇಡ್ಕರ್ ಸಂವಿಧಾನ ಬದಲಾವಣೆ ಬಗ್ಗೆ ಅಪಪ್ರಚಾರದ ಬಗ್ಗೆ ಮೋದಿ ಈಗಾಗಲೇ ಮತ್ತೊಮ್ಮೆ ಅಂಬೇಡ್ಕರ್ ಹುಟ್ಟಿಬಂದರೂ ಸಂವಿಧಾನ ತೆಗೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಜೊತೆಗೆ ಮೈತ್ರಿ ಅಭ್ಯರ್ಥಿ ಯಾಗಿರುವುದರಿಂದ ನಮ್ಮ ಜೆಡಿಎಸ್ ಚಿಹ್ನೆ ಹುಡುಕಾಟ ಮಾಡುತ್ತಾರೆ. ಆದ್ದರಿಂದ ಮನೆ ಮನೆಗೆ ತೆರಳಿ ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿರುವುದರಿಂದ ನಮ್ಮ ಜೆಡಿಎಸ್ ಕಾರ್ಯಕರ್ತರು ನಮ್ಮ ಗುರುತು ಕಮಲದ ಗುರುತು ಎಂದು ಹೇಳಿ ಮನೆಮನೆಗೆ ಮಾದರಿ ಪತ್ರದೊಂದಿಗೆ ಪ್ರಾಮಾಣಿಕವಾಗಿ ಮತ ಕೇಳುವಂತೆ ಕಾರ್ಯಕರ್ತರಿಗೆ ಹೇಳಿದರು.ಎಲ್ಲಾ ರಾಜ್ಯದ 28 ಕ್ಷೇತ್ರಗಳು ಎರಡು ಪಕ್ಷದ ಕಾರ್ಯಕರ್ತರಲ್ಲಿ ಹೊಂದಾಣಿಕೆ ಇದೆ. ಯಾವುದೇ ಗೊಂದಲ ಮಾಡಿಕೊಳ್ಳದೆ ಪ್ರಾಮಾಣಿಕವಾಗಿ ಪಕ್ಷದ ಪರವಾಗಿ ಕೆಲಸ ಮಾಡುತ್ತಾರೆ. ಕಾರ್ಯಕರ್ತರು ಯಾವುದೇ ನಿರೀಕ್ಷೆಗಳನ್ನು ಇಟ್ಟುಕೊಳ್ಳದೆ ಕೆಲಸ ಮಾಡಿ ಹುಣಸೂರಿನಲ್ಲಿ 95 ಲಕ್ಷ ಮತಗಳನ್ನು ಪಡೆದು ಜೆಡಿಎಸ್ ಕ್ಷೇತ್ರವಾಗಿದೆ. ಜೆಡಿಎಸ್ ಬಿಜೆಪಿ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಬೇಕು. ಇದರಿಂದ ಕ್ಷೇತ್ರದಲ್ಲಿ ಅನುದಾನ ಹೆಚ್ಚಾಗಿ ತರಲು ಕೇಂದ್ರದ ಅನುದಾನ ತರಲು ಸಹಾಯವಾಗುತ್ತದೆ ಎಂದು ಅವರು ತಿಳಿಸಿದರು.
ಜೊತೆಗೆ ಯದುವೀರ್ ಒಡೆಯರ್ ರಾಜ ವಂಶಸ್ಥರಾದರೂ ಸಾಮಾನ್ಯ ಪ್ರಜೆಗಳ ರೀತಿಯಲ್ಲಿ ಎಲ್ಲರಿಗೂ ಬಹಳ ಹತ್ತಿರದಿಂದ ಸಿಗುವ ಅಭ್ಯರ್ಥಿ. ಇಂಥ ವ್ಯಕ್ತಿ ಗೆಲುವು ಸಾಧಿಸಿದರೆ ಕಾರ್ಯಕರ್ತರಿಗೆ ಶಕ್ತಿ ಬರುತ್ತದೆ ಎಂದರು.ಈ ವೇಳೆ ತಾಲೂಕು ಜೆಡಿಎಸ್ ಮುಖಂಡ ಹರವೆ ಶ್ರೀಧರ್, ಕಟ್ಟೆಮಳಲವಾಡಿ ಗ್ರಾಪಂ ಅಧ್ಯಕ್ಷೆ ಚಿನ್ನು ಮುತ್ತು, ಮಾಜಿ ಅಧ್ಯಕ್ಷೆ ಕೂತೇ ಜಾಬಿ, ಮಾಜಿ ಉಪಾಧ್ಯಕ್ಷ ಅಬ್ದುಲ್ ಸುಭಾನ್, ಸದಸ್ಯರಾದ ಫಾರೂಕ್ ಅಹಮದ್, ಕುಚ್ಚಲೇ ಗೌಡ, ಈರೇಗೌಡ, ಮುಖಂಡರಾದ ಪುಟ್ಟರಾಜು, ನಾಗೇಶ್, ಹರೀಶ್, ಶ್ರೀಧರ್, ಶಿವಕುಮಾರ್, ಹರವೆ ಶಿವಣ್ಣ, ಸ್ವಾಮಿ ನಾಯಕ, ರಾಮೇನಹಳ್ಳಿ ನಟರಾಜ್, ಎಳನೀರು ಚಂದ್ರ ನಾಯಕ ಸೇರಿದಂತೆ 300ಕ್ಕೂ ಹೆಚ್ಚು ಕಾರ್ಯಕರ್ತರು ಇದ್ದರು.