ಗ್ರಾಹಕರ ಸ್ನೇಹಿಯಾಗಿ ಕಾರ್ಯ ನಿರ್ವಹಿಸಲು ಶಾಸಕ ಜಿ.ಎಚ್.ಶ್ರೀನಿವಾಸ್ ಕರೆ

| Published : Aug 13 2024, 12:45 AM IST

ಗ್ರಾಹಕರ ಸ್ನೇಹಿಯಾಗಿ ಕಾರ್ಯ ನಿರ್ವಹಿಸಲು ಶಾಸಕ ಜಿ.ಎಚ್.ಶ್ರೀನಿವಾಸ್ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ಮೆಸ್ಕಾಂ ಸಿಬ್ಬಂದಿ ಗ್ರಾಹಕರ ಸ್ನೇಹಿಯಾಗಿ ಕಾರ್ಯ ನಿರ್ವಹಿಸಬೇಕೆಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ, ತರೀಕೆರೆ

ಮೆಸ್ಕಾಂ ಸಿಬ್ಬಂದಿ ಗ್ರಾಹಕರ ಸ್ನೇಹಿಯಾಗಿ ಕಾರ್ಯ ನಿರ್ವಹಿಸಬೇಕೆಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.

ಸೋಮವಾರ ಮೆಸ್ಕಾಂ ಉಪ ವಿಭಾಗ ತರೀಕೆರೆಯಿಂದ ಮೆಸ್ಕಾಂ ಕಚೇರಿ ಆವರಣದಲ್ಲಿ ವಿದ್ಯುತ್ ಕಂಬ ಇತ್ಯಾದಿ ಸರಕು ಸಾಗಿಸುವ ಲಾರಿಗೆ ಚಾಲನೆ ನೀಡಿ ಮಾತನಾಡಿದರು. ಇಂದನ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಬೆಂಗಳೂರಿನಲ್ಲಿ ಸಭೆ ನಡೆಸಿ ಈ ಭಾಗದ ನಮ್ಮ ಮನವಿಗೆ ಸ್ಪಂದಿಸಿದ್ದಾರೆ, ವಿದ್ಯುತ್ ಸರಕು ಸಾಗಿಸುವ ಲಾರಿ ಮಂಜೂರು ಮಾಡಿದ್ದಾರೆ.

ವಿದ್ಯುತ್ ಉತ್ತಮ ಸರಬರಾಜಿಗೆ ತಾಲೂಕಿನಲ್ಲಿ ಮೂರು ಕಡೆ ನಂದಿ ಹೊಸಹಳ್ಳಿ, ಎರೆಹಳ್ಳಿ ಎಂಯುಎಸ್ಎಸ್ ಸ್ಥಾಪಿಸಲಾಗುವುದು ಮತ್ತು ಇನ್ನೊಂದಕ್ಕೆ ಸ್ಥಳ ಹುಡುಕಲಾಗುತ್ತಿದೆ. ಬಾವಿಕೆರೆಯಲ್ಲೂ ಎಂಯುಎಸ್ಎಸ್. ಸ್ತಾಪಿಸಲಾಗುವುದು. ಕೆಮ್ಮಣಗುಂಡಿ ಕಲ್ಲತ್ತಿಗಿರಿಗೆ ಹೊಸ ವಿದ್ಯುತ್ ಲೈನ್ ಅಗತ್ಯವಿದೆ. ತರೀಕರೆ ತಾಲೂಕಿನಲ್ಲಿ 220 ಕೆವಿ ವಿದ್ಯುತ್ ಸ್ವೀಕರಣ ಕೇಂದ್ರದ ಅವಶ್ಯಕತೆ ಇದ್ದು ಮಂಜೂರಾತಿ ಪಡೆದು ಕಚೇರಿ ಸ್ಥಾಪನೆಗೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಪಟ್ಟಣದ ಬಿ.ಎಚ್.ರಸ್ತೆ ಅಭಿವೃದ್ಧಿ ಹಿನ್ನಲೆಯಲ್ಲಿ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಕಾರ್ಯ ಈ ತಿಂಗಳ ಕೊನೆಯಿಂದ ಪ್ರಾರಂಭಿಸಲಾಗುವುದು. ಸಿಬ್ಬಂದಿ ರೈತರ ಪರವಾಗಿ ಕೆಲಸ ನಿರ್ವಹಿಸಬೇಕು ಎಂದು ಹೇಳಿದರು.

ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಿಯಾವುಲ್ಲಾ ಮಾತನಾಡಿ ಉಪ ವಿಭಾಗದಿಂದ ವಿದ್ಯುತ್ ಕಂಬ ಇತ್ಯಾದಿ ವಿದ್ಯುತ್ ಸರಕುಗಳನ್ನು ಸಾಗಿಸಲು ಮೆಸ್ಕಾಂ ಕಚೇರಿಗೆ ಲಾರಿ ಅವಶ್ಯಕೆ ಇತ್ತು ವಿದ್ಯುತ್ ಸರಕು ಸಾಗಿಸಲು ಲಾರಿ ಮಂಜೂರಾಗಿದೆ. ಎರೆಹಳ್ಳಿಯಲ್ಲಿ ವಿದ್ಯುತ್ ಉಪ ಕೇಂದ್ರ ಮಂಜೂರಾಗಿದ್ದು ಕಾಮಗಾರಿಯನ್ನು ಶೀಘ್ರದಲ್ಲೇ ನಿರ್ವಹಿಸಬೇಕು ಎಂದು ಕೋರಿದರು.

ಪುರಸಭಾ ಮಾಜಿ ಅಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ ಮಾತನಾಡಿ ಪಟ್ಟಣದಲ್ಲಿ ಗುಣಮಟ್ಟದ ವಿದ್ಯುತ್ತನ್ನು ಸರಬರಾಜು ಮಾಡಬೇಕು. ಗೃಹಜ್ಯೋತಿ ಯೋಜನೆಯಲ್ಲಿ ಮೆಸ್ಕಾಂ ಸಿಬ್ಬಂದಿ ಹೆಚ್ಚುಶ್ರಮಿಸಿದ್ದಾರೆ. ಪಟ್ಟಣದಲ್ಲಿ 23 ವಾರ್ಡುಗಳು ಇದೆ, ಹೊಸ ಬಡಾವಣೆಗಳಾಗಿವೆ. ತಾಲೂಕು ಕಚೇರಿಗೆ, ಸಾರ್ವಜನಿಕ ಆಸ್ಪತ್ರೆ ಎಕ್ಸ್ ಪ್ರೆಸ್ ಲೈನ್ ಮೂಲಕ ನಿರಂತರ ವಿದ್ಯುತ್‌ ಪೂರೈಸಬೇಕು ಎಂದು ಮನವಿ ಮಾಡಿದರು.

ಸಹಾಯಕ ಕಾರ್ಯಪಾಲಕ ಅಭಿಯಂತರ ಮಂಜುನಾಥ್ ಮಾತನಾಡಿ ತರೀಕೆರೆ ಮೆಸ್ಕಾಂ ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಇದೆ. ತರೀಕೆರೆ ಮೆಸ್ಕಾಂ ಉಪ ವಿಭಾಗ ಬಹಳ ದೊಡ್ಡ ವಿಭಾಗವಾಗಿದೆ. ತರೀಕೆರೆ ಮೆಸ್ಕಾಂನ್ನು 220 ಕೆ.ವಿ.ವಿದ್ಯುತ್ ಸ್ವೀಕರಣ ಕೇಂದ್ರ ಅವಶ್ಯಕತೆ ಇದೆ ಎಂದುಶಾಸಕ ಜಿ.ಎಚ್.ಶ್ರೀನಿವಾಸ್ ಅವರಲ್ಲಿ ಮನವಿ ಮಾಡಿದರು.

ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಎಚ್.ಯು.ಫಾರೂಕ್, ಪುರಸಭೆ ಸದಸ್ಯರಾದ ಪರಮೇಶ್, ಚೇತನ್, ಚಂದ್ರಶೇಖರ್, ವಸಂತ ಕುಮಾರ್, ಅನಿಲ್ ಕುಮಾರ್, ರಂಗನಾಥ್, ಪುರಸಭೆ ನಾಮ ನಿರ್ದೇಶಿತ ಸದಸ್ಯರಾದ ಆದಿಲ್ ಪಾಷ, ಟಿ.ಜಿ. ಮಂಜುನಾಥ್, ಟಿ.ಡಿ.ಮಂಜುನಾಥ್, ಮಹಮದ್ ಅಬ್ಬಾಸ್, ಪುರಸಭೆ ಮಾಜಿ ಅದ್ಯಕ್ಷ ಟಿ.ಎಸ್.ಧರ್ಮರಾಜ್, ರಾಘವೇಂದ್ರ, ಮಹಮದ್ ಇರ್ಷಾದ್, ಸಹಾಯಕ ಅಭಿಯಂತರ ಅಜಯ್, ಮೆಸ್ಕಾಂ ಕಿರಿಯ ಇಂಜಿನಿಯರ್ ರಾಮು, ಗುರುಪಾದಪ್ಪ, ರಘುನಂದನ್, ತಿಪ್ಪೇಶಪ್ಪ ಮತ್ತಿತರರು ಭಾಗವಹಿಸಿದ್ದರು.

12ಕೆಟಿಆರ್.ಕೆ.1ಃ

ತರೀಕೆರೆಯಲ್ಲಿ ಮೆಸ್ಕಾಂ ಉಪ ವಿಭಾಗ ತರೀಕೆರೆಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಜಿ.ಎಚ್.ಶ್ರೀನಿವಾಸ್ ವಿದ್ಯುತ್ ಸರಕು ಸಾಗಿಸುವ ಲಾರಿಗೆ ಚಾಲನೆ ನೀಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಯು.ಫಾರೂಕ್, ಪುರಸಭಾ ಮಾಜಿ ಅಧ್ಯಕ್ಷ ಟಿ.ಎಸ್ .ಪ್ರಕಾಶ್ ವರ್ಮ, ಟಿ.ಎಸ್. ಧರ್ಮರಾಜ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಮಂಜುನಾಥ್ ಮತ್ತಿತರರು ಇದ್ದರು.