ನೂತನ ಸಭಾಂಗಣ ಮತ್ತು ಕಾಲೇಜಿನ ಕೊಠಡಿಗಳ ನಿರ್ಮಾಣಕ್ಕೆ ಶಾಸಕ ಹಾಗೂ ತುಮುಲ್‌ ಅಧ್ಯಕ್ಷ ಎಚ್‌. ವಿ.ವೆಂಕಟೇಶ್ ಗುದ್ದಲಿಪೂಜೆ ನೆರವೇರಿಸಿದರು

ಕನ್ನಡಪ್ರಭ ವಾರ್ತೆ ಪಾವಗಡ ಪಟ್ಟಣದ ಶ್ರೀಮತಿ ಮತ್ತು ಶ್ರೀ ವೈ.ಈ.ರಂಗಯ್ಯ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ 5.78 ಕೋಟಿ ಅನುದಾನದಲ್ಲಿ ನೂತನ ಸಭಾಂಗಣ ಮತ್ತು ಕಾಲೇಜಿನ ಕೊಠಡಿಗಳ ನಿರ್ಮಾಣಕ್ಕೆ ಶಾಸಕ ಹಾಗೂ ತುಮುಲ್‌ ಅಧ್ಯಕ್ಷ ಎಚ್‌. ವಿ.ವೆಂಕಟೇಶ್ ಗುದ್ದಲಿಪೂಜೆ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು, ಶಿಕ್ಷಣದಿಂದ ಮಾತ್ರ ಪ್ರಗತಿ ಸಾಧ್ಯ. ನಗರ ಹಾಗೂ ಗ್ರಾಮೀಣ ವಿದ್ಯಾರ್ಥಿಗಳ ವಿದ್ಯಾಬ್ಸಾಸಕ್ಕೆ ಹೆಚ್ಚು ಒತ್ತು ನೀಡಿದ್ದು, ಹೊಸ ಶಾಲೆಗಳ ಮಂಜೂರಾತಿ ಸೇರಿದಂತೆ ಶಾಲೆಯ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಹೆಚ್ಚು ಅನುದಾನ ನೀಡಲಾಗುತ್ತಿದೆ ಎಂದರು.

ಇದೇ ವೇಳೆ ಪ್ರಾಂಶುಪಾಲ ಮುರುಳಿಧರ,ಪುರಸಭೆ ಮಾಜಿ ಅಧ್ಯಕ್ಷರಾದ ಸುದೇಶ್ ಬಾಬು,ಮುಖಂಡರಾದ ಎ.ಶಂಕರರೆಡ್ಡಿ, ಸದಸ್ಯರಾದ ರವಿ, ಗುತ್ತಿಗೆ ದಾರರಾದ ಆರ್.ಎ.ಹನುಮಂತರಾಯಪ್ಪ,ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಐ.ಜಿ.ನಾಗರಾಜ್,ಅರಸೀಕೆರೆ ಪುಟ್ಟಣ್ಣ,ಕರಿಯಣ್ಣ, ಗುಟ್ಟಹಳ್ಳಿ ಅಂಜಪ್ಪ,ಪರಮೇಶ್ವರ್, ತಿಪ್ಪೇಸ್ವಾಮಿ ಶ್ರೀರಾಮುಲು,ಮಾರಪ್ಪ,ಪ್ರಭಾಕರ್ ಶೆಟ್ಟಿ ಸೇರಿದಂತೆ ಕಾಲೇಜಿನ ಎಲ್ಲಾ ಉಪನ್ಯಾಸಕರು ಹಾಗೂ ಸಿಬ್ಬಂದಿ , ವಿದ್ಯಾರ್ಥಿಗಳು ಇದ್ದರು.