ರಾಮನಗರ : ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ನೀಡುತ್ತಿರುವ ಬ್ಯಾರಿಕೇಡ್‌ಗಳನ್ನು ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ರವರು ಸೋಮವಾರ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್‌ಗೌಡ ಅವರಿಗೆ ಹಸ್ತಾಂತರಿಸಿದರು

ರಾಮನಗರ : ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ನೀಡುತ್ತಿರುವ ಬ್ಯಾರಿಕೇಡ್‌ಗಳನ್ನು ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ರವರು ಸೋಮವಾರ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್‌ಗೌಡ ಅವರಿಗೆ ಹಸ್ತಾಂತರಿಸಿದರು.

ನಗರದ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಮುಂಭಾಗ ಬ್ಯಾರಿಕೇಡ್‌ಗಳನ್ನು ಹಸ್ತಾಂತರಿಸಿದ ಶಾಸಕ ಇಕ್ಬಾಲ್‌ಹುಸೇನ್, ನಗರದೆಲ್ಲೆಡೆ ಸಂಚಾರಿ ದಟ್ಟಣೆ ಹೆಚ್ಚಾಗಿದ್ದು, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಪೋಲೀಸ್ ಇಲಾಖೆಗೆ ಬ್ಯಾರಿಕೇಡ್‌ಗಳನ್ನು ವಿತರಿಸುತ್ತಿರುವ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್‌ಕುಮಾರ್ ಅವರ ಚಿಂತನೆ ಸಮಾಜಮುಖಿಯಾಗಿದೆ ಎಂದು ಶ್ಲಾಘಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್‌ಕುಮಾರ್ ಮಾತನಾಡಿ, ಶಾಸಕರ ಮಾರ್ಗದರ್ಶನದಲ್ಲಿ ಬಡಾವಣೆಗಳ ಅಭಿವೃದ್ದಿ, ಕೆಂಗಲ್‌ಹನುಮಂತಯ್ಯ ಸುಮಾರು 15 ಲಕ್ಷ ರು. ವೆಚ್ಚದಲ್ಲಿ ಪೋಲೀಸ್ ಇಲಾಖೆಗೆ 100 ಬ್ಯಾರಿಕೇಡ್‌ಗಳು, ಪಟ್ಟಣದ ಪ್ರಮುಖ ದೇವಾಲಯಗಳಿಗೆ 20 ಹಾಗೂ ರೇಷ್ಮೆ ಮಾರುಕಟ್ಟೆಗೆ 30 ಸೇರಿದಂತೆ ಒಟ್ಟು 150 ಬ್ಯಾರಿಕೇಡ್‌ಗಳನ್ನು ವಿತರಣೆ ಮಾಡಲಾಗಿದೆ ಎಂದರು.

ಬ್ಯಾರಿಕೇಡ್‌ಗಳಲ್ಲಿ ವಿಶೇಷವಾಗಿ ಸಂಚಾರಿ ನಿಯಮ ಪಾಲಿಸಿ, ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿ ಎಂಬ ಘೋಷವಾಕ್ಯವನ್ನು ಒಳಗೊಂಡಿದೆ. ಇದರಿಂದ ವಾಹನ ಸವಾರರಲ್ಲಿ ಸಂಚಾರಿ ನಿಯಮಗಳ ಜಾಗೃತಿ ಮೂಡಿಸುವ ಮೂಲಕ ವಾಹನಗಳ ವೇಗ ನಿಯಂತ್ರಣ ಮಾಡಲು ಹಾಗೂ ಸಾರ್ವಜನಿಕರು, ವಾಹನ ಸವಾರರ ಸುಗಮ ಸಂಚಾರಕ್ಕೆ ನೆರವಾಗಲಿವೆ ಎಂದು ಹೇಳಿದರು.

ಈ ವೇಳೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ.ರಾಜು, ವೃತ್ತ ಆರಕ್ಷಕ ನಿರೀಕ್ಷಕ ಕೃಷ್ಣ, ಇನ್ಸ್ ಪೆಕ್ಟರ್ ತನ್ವೀರ್, ಎಎಸ್‌ಐ ದೇವುಕುಮಾರ್, ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿಎನ್‌ಆರ್ ವೆಂಕಟೇಶ್, ನಗರಸಭೆ ಪೌರಾಯುಕ್ತ ಡಾ.ಜಯಣ್ಣ, ಸದಸ್ಯ ಬೈರೇಗೌಡ, ಮುಖಂಡ ಷಡಕ್ಷರಿದೇವ, ಬಗರ್‌ ಹುಕುಂ ಸಾಗುವಳಿ ಸದಸ್ಯ ರವಿ ಮತ್ತಿತರರು ಹಾಜರಿದ್ದರು.

12ಕೆಆರ್ ಎಂಎನ್ 10.ಜೆಪಿಜಿ

ಶಾಸಕ ಇಕ್ಬಾಲ್ ಹುಸೇನ್ ರವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಅವರಿಗೆ ಬ್ಯಾರಿಕೇಡ್ ಹಸ್ತಾಂತರಿಸಿದರು.

-------------------------