ರೈತರ ಪಪ್ ಸೆಟ್‌ಗಳಿಗೆ ವಿದ್ಯುತ್ ಪೂರೈಕೆ ಮಾರ್ಗಗಳಿಗೆ ಶಾಸಕ ಎಚ್.ಟಿ.ಮಂಜು ಚಾಲನೆ

| Published : Mar 02 2025, 01:18 AM IST

ರೈತರ ಪಪ್ ಸೆಟ್‌ಗಳಿಗೆ ವಿದ್ಯುತ್ ಪೂರೈಕೆ ಮಾರ್ಗಗಳಿಗೆ ಶಾಸಕ ಎಚ್.ಟಿ.ಮಂಜು ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಬೇಸಿಗೆ ಪ್ರಾರಂಭವಾದಗಿನಿಂದ ವಿದ್ಯುತ್ ಅಡಚಣೆ ಸಮಸ್ಯೆ ಇತ್ತು. ನೂತನ ವಿದ್ಯುತ್ ವಿತರಣಾ ಘಟಕದಿಂದ ರೈತರಿಗೆ ಗುಣಮಟ್ಟದ ವಿದ್ಯುತ್ ದೊರಕಲಿದೆ. ನಾನು ಶಾಸಕನಾಗಿ ಆಯ್ಕೆಯಾದ ಕೂಡಲೇ ಹೊಸ ಮಾರ್ಗಗಳ ನಿರ್ಮಾಣಕ್ಕೆ ಸೆಸ್ಕ್ ಅಧಿಕಾರಿಗಳಿಗೆ ಸೂಚಿಸಿದ್ದೆ. ರೈತರ ಸಮಸ್ಯೆಗೆ ಪ್ರಾಮಾಣಿಕವಾಗಿ ಪರಿಹಾರ ಮಾಡುವುದಾಗಿ ಭರವಸೆ ನೀಡಿದ್ದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಾಲೂಕಿನ ಸಂತೇಬಾಚಹಳ್ಳಿ ಬಳಿಯ ಹರಿಯಾಲದಮ್ಮ ದೇವಾಲಯದ ಬಳಿ ನಿರ್ಮಿಸಿರುವ ನೂತನ ಘಟಕದ ಮೂಲಕ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಸುವ 11 ಕೆವಿ ವಿದ್ಯುತ್ ಕೇಂದ್ರದ ಮಾರ್ಗಗಳಿಗೆ ಶಾಸಕ ಎಚ್.ಟಿ.ಮಂಜು ಚಾಲನೆ ನೀಡಿದರು.

ನಂತರ ಮಾತನಾಡಿದ ಶಾಸಕ ಎಚ್.ಟಿ.ಮಂಜು. ಹೊಸ ವಿದ್ಯುತ್ ಮಾರ್ಗಗಳಿಂದ ಸಂತೇಬಾಚಹಳ್ಳಿ ಹೋಬಳಿ ಸಾವಿರಾರು ರೈತರಿಗೆ ಅನುಕೂಲವಾಗಲಿದೆ ಎಂದರು.

ಬೇಸಿಗೆ ಪ್ರಾರಂಭವಾದಗಿನಿಂದ ವಿದ್ಯುತ್ ಅಡಚಣೆ ಸಮಸ್ಯೆ ಇತ್ತು. ನೂತನ ವಿದ್ಯುತ್ ವಿತರಣಾ ಘಟಕದಿಂದ ರೈತರಿಗೆ ಗುಣಮಟ್ಟದ ವಿದ್ಯುತ್ ದೊರಕಲಿದೆ. ನಾನು ಶಾಸಕನಾಗಿ ಆಯ್ಕೆಯಾದ ಕೂಡಲೇ ಹೊಸ ಮಾರ್ಗಗಳ ನಿರ್ಮಾಣಕ್ಕೆ ಸೆಸ್ಕ್ ಅಧಿಕಾರಿಗಳಿಗೆ ಸೂಚಿಸಿದ್ದೆ. ರೈತರ ಸಮಸ್ಯೆಗೆ ಪ್ರಾಮಾಣಿಕವಾಗಿ ಪರಿಹಾರ ಮಾಡುವುದಾಗಿ ಭರವಸೆ ನೀಡಿದ್ದೆ ಎಂದರು.

ಗುಣಮಟ್ಟದ ವಿದ್ಯುತ್ ರೈತರಿಗೆ ಪೂರೈಕೆಯಾದಾಗ ಮಾತ್ರ ರೈತರು ಸುಗಮ ಬೇಸಾಯ ಮಾಡಲು ಸಾಧ್ಯ. ನಾನು ರೈತ ಕುಟುಂಬಕ್ಕೆ ಸೇರಿದವನು. ರೈತರ ಸಮಸ್ಯೆಗಳ ಅರಿವು ನನಗಿದೆ. ತಾಲೂಕಿನಾದ್ಯಂತ ವಿದ್ಯುತ್ ಸಮಸ್ಯೆ ಆಗದಂತೆ ಕ್ರಮವಹಿಸುತ್ತೇನೆ. ಬೇಸಿಗೆಯಲ್ಲಿ ರೈತರ ಕೃಷಿ ಪಂಪ್‌ಸೆಟ್‌ಗೆ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ವೇಳೆ ಸೆಸ್ಕ್ ಇಇ ಎಚ್.ಕೆ.ರಮೇಶ್, ಎಇಇ ಪುಟ್ಟಸ್ವಾಮಿ, ಜೆಇ ರವೀಂದ್ರ, ಕೆಪಿಟಿಸಿಎಲ್ ಎಇ ನವೀನಕುಮಾರ್ ಸೇರಿ ಭಾರತಿಪುರ, ಕುಂದೂರು, ಹರಿಯಲದಮ್ಮ, ಮಾರೇನಹಳ್ಳಿ ಗ್ರಾಮ ಸೇರಿ ಸುತ್ತಮುತ್ತಲಿನ ಗ್ರಾಮದ ರೈತರು ಹಾಜರಿದ್ದರು.

ಗಂಜಾಂ ನಿಮಿಷಾಂಬ ದೇವಾಲಯ ವ್ಯವಸ್ಥಾಪನಾ ಸಮಿತಿ ರಚನೆ

ಕನ್ನಡಪ್ರಭ ವಾರ್ತೆ, ಬೆಂಗಳೂರು

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಗಂಜಾಂ ನಿಮಿಷಾಂಬ ದೇವಾಲಯಕ್ಕೆ ಒಂಬತ್ತು ಮಂದಿ ಸದಸ್ಯರನ್ನು ಒಳಗೊಂಡ ವ್ಯವಸ್ಥಾಪನಾ ಸಮಿತಿ ರಚಿಸಿ ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್‌ ಆದೇಶ ಹೊರಡಿಸಿದೆ.

ಪ್ರಧಾನ ಅರ್ಚಕರು ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿರುತ್ತಾರೆ. ಇವರ ಜತೆಗೆ ಆರ್‌. ರಂಗಸ್ವಾಮಿ, ಎಸ್‌. ಭಾಗ್ಯಲಕ್ಷ್ಮೀ, ಬಿ. ಸುಮಲತ, ಜಿ.ಎನ್‌. ಪೂರ್ಣಪ್ರಜ್ಞ, ಟಿ. ಕೃಷ್ಣ, ಎಸ್‌.ಎನ್‌. ದಯಾನಂದ, ಪಿ. ಬಾಲಸುಬ್ರಮಣ್ಯ, ಎಸ್. ಕೃಷ್ಣ ಅವರನ್ನು ಸದಸ್ಯರನ್ನು ನೇಮಿಸಲಾಗಿದೆ.

ಈ ಸದಸ್ಯರು ಪ್ರಥಮ ಸಭೆಯಲ್ಲಿ ತಮ್ಮಲ್ಲಿ ಒಬ್ಬರನ್ನು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ನಡಾವಳಿಯನ್ನು ಕಳುಹಿಸಬೇಕು. ಸದಸ್ಯರು ಯಾವುದೇ ರಾಜಕೀಯ ಪಕ್ಷದ ಪದಾಧಿಕಾರಿ ಆಗಿರುವುದು ಕಂಡು ಬಂದರೆ ಅಂತಹವರ ಸದಸ್ಯತ್ವ ಸಹಜವಾಗಿಯೇ ರದ್ದಾಗಲಿದೆ ಎಂದು ರಾಜ್ಯ ಧಾರ್ಮಿಕ ಪರಿಷತ್ತು ಸದಸ್ಯ ಕಾರ್ಯದರ್ಶಿ ಹಾಗೂ ಹಿಂದೂ ಧಾರ್ಮಿಕ ಸಂಸ್ಥೆ, ಧರ್ಮದಾಯ ದತ್ತಿಗಳ ಇಲಾಖೆಯ ಆಯುಕ್ತರಾದ ಡಾ.ಎಂ.ವಿ. ವೆಂಕಟೇಶ್‌ ಆದೇಶದಲ್ಲಿ ತಿಳಿಸಿದ್ದಾರೆ.