ಬಿಸಿಯೂಟ ಸಿಬ್ಬಂದಿ ಬಾಕಿ ವೇತನ ಪಾವತಿಗೆ ಶಾಸಕ ಸೂಚನೆ

| Published : Oct 27 2024, 02:36 AM IST

ಬಿಸಿಯೂಟ ಸಿಬ್ಬಂದಿ ಬಾಕಿ ವೇತನ ಪಾವತಿಗೆ ಶಾಸಕ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಅಕ್ಷರ ದಾಸೋಹ ಸಿಬ್ಬಂದಿಯ ಬಾಕಿ ವೇತನ ಪಾವತಿಸುವಂತೆ ವಿರಾಜಪೇಟೆ ಶಾಸಕ ಎ.ಎಸ್‌. ಪೊನ್ನಣ್ಣ ಸೂಚಿಸಿದರು. ಮಾಧ್ಯಮ ವರದಿ ಗಮನಿಸಿದ ಶಾಸಕ ಪೊನ್ನಣ್ಣ ತಕ್ಷಣ ಸ್ಪಂದಿಸಿದರು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಅಕ್ಷರ ದಾಸೋಹ ಸಿಬ್ಬಂದಿಯ ಬಾಕಿ ವೇತನ ಪಾವತಿಸುವಂತೆ ವಿರಾಜಪೇಟೆ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್‌ ಪೊನ್ನಣ್ಣ ಸೂಚಿಸಿದ್ದಾರೆ.

ಅಕ್ಷರ ದಾಸೋಹ ಸಿಬ್ಬಂದಿಯ ವೇತನ ಬಾಕಿ ಕುರಿತು ಶನಿವಾರ ಪ್ರಕಟವಾದ ಮಾಧ್ಯಮ ವರದಿ ಗಮನಿಸಿದ ಶಾಸಕ, ತಕ್ಷಣ ಸ್ಪಂದಿಸಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿ ಮುಂದಿನ ಬುಧವಾರದೊಳಗೆ ಬಾಕಿ ವೇತನ ಪಾವತಿಸುವಂತೆ ಆದೇಶಿಸಿದ್ದಾರೆ.

ಶಾಸಕರ ಕಾರ್ಯವೈಖರಿಯ ಬಗ್ಗೆ ಅಕ್ಷರ ದಾಸೋಹದ ಬಿಸಿಯೂಟ ನಿರ್ವಹಿಸುವ ಸಿಬ್ಬಂದಿ ಸಂಘದ ತಾಲೂಕು ಮಾಜಿ ಉಪಾಧ್ಯಕ್ಷೆ ಯಶೋದಾ, ಅಕ್ಷರ ದಾಸೋಹ ಸಿಬ್ಬಂದಿ ಖತೀಜಾ, ಶೋಭಾ, ಅಶ್ವಿನಿ ಮತ್ತಿತರರು ಹರ್ಷ ವ್ಯಕ್ತಪಡಿಸಿದ್ದಾರೆ.

ಅಕ್ಷರದಾಸೋಹ ಸಿಬ್ಬಂದಿ ವೇತನ ಬಾಕಿ ಸಮಸ್ಯೆ ಕುರಿತು ‘ಕನ್ನಡಪ್ರಭ’ ಶನಿವಾರ ‘ವೇತನ ನೀಡಲು ವಿಳಂಬ: ಜೀವನ ನಿರ್ವಹಣೆ ಸಂಕಷ್ಟ’ ಶೀರ್ಷಿಕೆಯಲ್ಲಿ ವಿಸ್ತೃತ ವರದಿ ಪ್ರಕಟಿಸಿತ್ತು.