ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನ ಕೆ.ಕೋಡಿಹಳ್ಳಿಯಲ್ಲಿ 5 ಕೋಟಿ ರು. ವೆಚ್ಚದ ರಸ್ತೆ ಅಭಿವೃದ್ಧಿ ಹಾಗೂ ನಾಲಾ ಆಧುನೀಕರಣ ಕಾಮಗಾರಿಗೆ ಶಾಸಕ ಕೆ.ಎಂ.ಉದಯ ಚಾಲನೆ ನೀಡಿದರು.ಗ್ರಾಮದಲ್ಲಿ ಸೋಮನಹಳ್ಳಿ ಕೆರೆಯ ನಾಲಾ ವ್ಯಾಪ್ತಿಯ ಅಭಿವೃದ್ಧಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಸೋಮನಹಳ್ಳಿ ಕೆರೆ ಈಗಾಗಲೇ ಅಭಿವೃದ್ಧಿಗೆ ಚಾಲನೆ ದೊರೆತಿದೆ. ಸುಮಾರು 16 ಎಕರೆ ಒತ್ತುವರಿ ತೆರವುಗೊಳಿಸಿ ರೈತರಿಗೆ ಅನುಕೂಲ ಕಲ್ಪಿಸಲು ಆಧುನೀಕರಣಕ್ಕೆ ಮುಂದಾಗಿರುವುದಾಗಿ ಹೇಳಿದರು.
ಕೆ.ಕೋಡಿಹಳ್ಳಿ, ಸೋಮನಹಳ್ಳಿ ಹಾಗೂ ಅಗರಲಿಂಗನದೊಡ್ಡಿ ಮಾರ್ಗದವರೆಗೂ ರಸ್ತೆ ಕಾಮಗಾರಿ ಜೊತೆಗೆ ಅಗತ್ಯ ಸೌಲಭ್ಯ ಕಲ್ಪಿಸುವ ಮೂಲಕ ಕೊನೇ ಭಾಗದ ಜಮೀನುಗಳಿಗೆ ನೀರು ಸರಾಗವಾಗಿ ಹರಿದು ರೈತರು ಬೇಸಾಯ ಮಾಡಲು ಅನುಕೂಲವಾಗಲಿದೆ ಎಂದರು.ಕೆರೆ ಒತ್ತುವರಿ, ಹೂಳು ತೆಗೆದು ಹೆಚ್ಚುನೀರು ಶೇಖರಣೆಯಾಗಲು ಕ್ರಮ ವಹಿಸಲಾಗಿದೆ. ಕೆ.ಕೋಡಿಹಳ್ಳಿ ಗ್ರಾಮವು ನಗರಸಭೆ ವ್ಯಾಪ್ತಿಗೆ ಒಳಪಟ್ಟಿದೆ. ಮಾದರಿ ನಗರವನ್ನಾಗಿಸಲು ಹಲವು ಕಾಮಗಾರಿಗಳು ನೆನೆಗುದಿಗೆ ಬಿದ್ದಿರುವುದನ್ನು ಪೂರ್ಣಗೊಳಿಸಲು ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.
ಈ ವೇಳೆ ಸ್ಥಳೀಯ ಗ್ರಾಪಂ ಮಾಜಿ ಸದಸ್ಯ ಅಪ್ಪೇಗೌಡ, ಪ್ರೀತಮ್‌ಗೌಡ, ಸ್ಥಳೀಯ ಮುಖಂಡರಾದ ಕೆ.ಎಚ್.ಕೃಷ್ಣೇಗೌಡ, ಎಚ್.ವೆಂಕಟೇಶ್, ಹನುಮೇಗೌಡ, ಮಹದೇವು, ತಮ್ಮಣ್ಣ, ಶಂಕರ್, ರವೀಂದ್ರ, ಪುಟ್ಟಪ್ಪ, ಶ್ರೀನಿವಾಸ್, ಬೊಮ್ಮಯ್ಯ, ರಮೇಶ್, ಎ.ಇ.ಇ ನಾಗರಾಜು ಇತರರಿದ್ದರು.
ಭುವನ ವಿಶ್ವಕರ್ಮದಿಂದ ಬಸವ ಮತ್ತು ಅಂಬೇಡ್ಕರ್ ಜಯಂತಿ ಆಚರಣೆಮಂಡ್ಯ: ಸುಭಾಷ್ ನಗರದ ಭುವನ ವಿಶ್ವಕರ್ಮ ಕಚೇರಿ ಸಭಾಂಗಣದಲ್ಲಿ ಜಗಜ್ಯೋತಿ ಬಸವೇಶ್ವರ ಜಯಂತಿ ಮತ್ತು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಿಸಿದರು.
ಸಂಘದ ನೂತನ ಪದಾಧಿಕಾರಿಗಳ ಪ್ರಥಮ ಸಭೆಯಲ್ಲಿ ಮಹನೀಯರ ಜಯಂತಿಗೆ ಸಮಾಜ ಅಧ್ಯಕ್ಷ ಎನ್.ಬಸವರಾಜು ಚಾಲನೆ ನೀಡಿ ಮಾತನಾಡಿ, ಸಾಮಾಜಿಕ ವ್ಯವಸ್ಥೆಯಲ್ಲಿ ಅತ್ಯಂತ ಹಿಂದುಗಳಿದ ವರ್ಗವಾಗಿರುವ ವಿಶ್ವಕರ್ಮ ಸಮಾಜ ಎಲ್ಲಾ ಸಮಾಜಗಳೊಂದಿಗೆ ಉತ್ತಮ ಭಾಂದವ್ಯ ಹೊಂದಿದೆ. ಒಗ್ಗಟ್ಟಿನ ರಾಜಕೀಯ ಶಕ್ತಿಯಾಗಿ ಬೆಳೆದರೆ ಎಲ್ಲವೂ ಲಭ್ಯವಾಗುತ್ತದೆ ಎಂದರು.ಬಸವ, ಅಂಬೇಡ್ಕರ್, ಬುದ್ದ, ಕುವೆಂಪು, ಭಗವಾನ್ ವಿಶ್ವಕರ್ಮ ಅವರ ವಿಚಾರಧಾರೆಗಳು ಸಮಕಾಲೀನ ಸಮಾಜಕ್ಕೆ ಅತ್ಯಂತ ಪ್ರಸ್ತುತ ಎಂದು ಸ್ಮರಿಸಿದರು. ಕಾರ್ಯಕ್ರಮದಲ್ಲಿ ಸಮಾಜದ ಗೌರವಾಧ್ಯಕ್ಷ ಜಿ.ವಿ.ಸೋಮು, ಸಂಘಟನಾ ಕಾರ್ಯದರ್ಶಿ ಗೋವಿಂದರಾಜು, ಖಜಾಂಚಿ ಕೆ.ಸಿ.ಶ್ರೀನಿವಾಸ್, ಪದಾಧಿಕಾರಿಗಳು ಇದ್ದರು.