ತಾಲೂಕಿನ ಗೋಣಿತುಮಕೂರಿನಲ್ಲಿ ಜಲಜೀವನ್ ಯೋಜನೆ ಕಾಮಗಾರಿಗೆ ಶಾಸಕ ಎಂ.ಟಿ.ಕೃಷ್ಣಪ್ಪ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ತುರುವೇಕೆರೆ
ತಾಲೂಕಿನ ಗೋಣಿತುಮಕೂರಿನಲ್ಲಿ ಜಲಜೀವನ್ ಯೋಜನೆ ಕಾಮಗಾರಿಗೆ ಶಾಸಕ ಎಂ.ಟಿ.ಕೃಷ್ಣಪ್ಪ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.ಗೋಣಿತುಮಕೂರಿನಲ್ಲಿ ಸುಮಾರು 629 ಮನೆಗಳಿಗೆ ಮನೆ ಮನೆಗೆ ಕುಡಿಯುವ ನೀರನ್ನು ಸರಬರಾಜು ಮಾಡುವ ಸಲುವಾಗಿ ಸುಮಾರು 95 ಲಕ್ಷ ರು.ಗಳ ವೆಚ್ಚದಲ್ಲಿ ಕಾಮಗಾರಿ ಮಾಡಲಾಗುತ್ತಿದೆ. ಇಂದಿನಿಂದಲೇ ಕಾಮಗಾರಿ ಆರಂಭಿಸಿ ಮಳೆಗಾಲ ಪ್ರಾರಂಭವಾಗುವ ಮುನ್ನವೇ ಕಾಮಗಾರಿಯನ್ನು ಮುಗಿಸಬೇಕೆಂದು ಶಾಸಕ ಎಂ.ಟಿ.ಕೃಷ್ಣಪ್ಪ ಗುತ್ತಿಗೆದಾರರು ಮತ್ತು ಅಧಿಕಾರಿಗಳಿಗೆ ಸೂಚಿಸಿದರು. ಈ ವೇಳೆ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಎಇಇ ಡಿ.ಎಫ್.ಅಬ್ದುಲ್ ಆಶಂ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗರತ್ನ ರಂಗಸ್ವಾಮಿ, ಸದಸ್ಯರಾದ ನಾಗೇಂದ್ರ, ಅಶೋಕ್, ಜಿ.ಸಿ.ಶಿವಣ್ಣ, ಪುಟ್ಟರಂಗಯ್ಯ, ಗುತ್ತಿಗೆದಾರರಾದ ಬಡಗರಹಳಳಿ ತ್ಯಾಗರಾಜು, ಶಿವಶಂಕರ್ ಮುರುಡಿ, ಮುಖಂಡರಾದ ಶ್ರೀನಿವಾಸ್, ರಾಜಣ್ಣ, ಚಂದ್ರಣ್ಣ, ಕುಮಾರ್, ತ್ಯಾಗರಾಜು, ವೇಣುಗೋಪಾಲ್, ಶಶಿಯಮ್ಮ,ವನಜಾಕ್ಷಿ, ಬಿಲ್ ಕಲೆಕ್ಟರ್ ಪ್ರಕಾಶ್, ವಾಟರ್ ಮ್ಯಾನ್ ಸಣ್ಣನಿಂಗಪ್ಪ ಸೇರಿದಂತೆ ಹಲವರು ಇದ್ದರು.