ಮೈದುಂಬಿದ ಕಾವೇರಿ ನದಿಗೆ ಶಾಸಕ ಮಂಜು ಬಾಗಿನ

| Published : Jul 22 2024, 01:19 AM IST

ಸಾರಾಂಶ

ಕೊಡಗಿನ ತಲಕಾವೇರಿಯಿಂದ ಹರಿಯುತ್ತಿರುವ ಪೂರ್ಣ ಕಾವೇರಿಗೆ ರಾಮನಾಥಪುರದ ವಹ್ನಿ ಪುಷ್ಕರಣಿಯಲ್ಲಿ ಮಾಜಿ ಸಚಿವ ಹಾಗೂ ಶಾಸಕ ಎ. ಮಂಜು ಅವರು ಬಾಗಿನ ಅರ್ಪಣೆ ಮಾಡಿ ಪೂಜೆ ಸಲ್ಲಿಸಿದರು. ನೆರೆಯ ಕೊಡಗು ಜಿಲ್ಲೆಯಲ್ಲಿ ಮಳೆ ಪ್ರಮಾಣ ಜಾಸ್ತಿಯಾಗುತ್ತಿದ್ದು, ಕಾವೇರಿ ನದಿಯಲ್ಲಿ ನೀರಿನ ಹರಿವು ಏರಿಕೆ ಆಗುತ್ತಿರುವುದರಿಂದ ತಗ್ಗು ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಕ್ಕೆ ವ್ಯವಸ್ಥೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಜಿ ಸಚಿವ ಹಾಗೂ ಶಾಸಕ ಎ ಮಂಜು ಸೂಚಿಸಿದರು.

ಕನ್ನಡಪ್ರಭ ವಾರ್ತೆ ರಾಮನಾಥಪುರ

ಕೊಡಗಿನ ತಲಕಾವೇರಿಯಿಂದ ಹರಿಯುತ್ತಿರುವ ಪೂರ್ಣ ಕಾವೇರಿಗೆ ರಾಮನಾಥಪುರದ ವಹ್ನಿ ಪುಷ್ಕರಣಿಯಲ್ಲಿ ಮಾಜಿ ಸಚಿವ ಹಾಗೂ ಶಾಸಕ ಎ. ಮಂಜು ಅವರು ಬಾಗಿನ ಅರ್ಪಣೆ ಮಾಡಿ ಪೂಜೆ ಸಲ್ಲಿಸಿದರು.

ನೆರೆಯ ಕೊಡಗು ಜಿಲ್ಲೆಯಲ್ಲಿ ಮಳೆ ಪ್ರಮಾಣ ಜಾಸ್ತಿಯಾಗುತ್ತಿದ್ದು, ಕಾವೇರಿ ನದಿಯಲ್ಲಿ ನೀರಿನ ಹರಿವು ಏರಿಕೆ ಆಗುತ್ತಿರುವುದರಿಂದ ತಗ್ಗು ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಕ್ಕೆ ವ್ಯವಸ್ಥೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಜಿ ಸಚಿವ ಹಾಗೂ ಶಾಸಕ ಎ ಮಂಜು ಸೂಚಿಸಿದರು.

ರಾಮನಾಥಪುರ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ವತಿಯಿಂದ 12 ವರ್ಷಗಳಿಂದ ಪ್ರತಿ ಹುಣ್ಣಿಮೆ ದಿನ 129ನೇ ಹುಣ್ಣಿಮೆಯ ಮಹಾ ಅರತಿ ಹಾಗೂ ಶ್ರೀ ರಾಮೇಶ್ವರ ದೇವಸ್ಥಾನ ಪಕ್ಕದಲ್ಲಿರುವ ಪುಷ್ಕರಣಿ ಕಾವೇರಿ ನದಿಗೆ ಪೂರ್ಣ ಕಾವೇರಿಗೆ ಶಾಸಕರು ಎ. ಮಂಜು ಅವರು ಬಾಗಿನ ಅರ್ಪಿಸಿ ಪೂಜಾ ಕಾರ್ಯಕ್ರಮ ನೆರವೇರಿಸಿದ ನಂತರ ಮಾತನಾಡಿದ ಅವರು, ಇಲ್ಲಿಯ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯವರು 12 ವರ್ಷಗಳಿಂದ ಕಾವೇರಿ ನದಿ ನದಿ ಸ್ವಚ್ಛತೆ ಹಾಗೂ ನದಿ ಸಂರಕ್ಷಣೆ ಮಾಡಲು ಅಭಿಯಾನ ಮಾಡಿಕೊಂಡು ಬರುತ್ತಿರುವುದಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ ಅವರು, ಈಗಾಗಲೇ ಸಂಬಂಧಪಟ್ಟ ಇಲಾಖೆಯವರು ತಗ್ಗು ಸ್ಥಳ ಪರಿಶೀಲನೆ ಮಾಡಿ ಮುಳುಗಡೆಯಾಗಿರುವ ತೋಟಗಳು, ಗದ್ದೆಗಳು ಹಾಗೂ ಮನೆಗಳು ಸ್ಥಳ ಪರಿಶೀಲನೆ ಮಾಡಿ ಅವರಿಗೆ ಆಗಿರುವ ನಷ್ಟವನ್ನು ಭರಿಸುವಂತೆ ಸರ್ಕಾರದಿಂದ ಕೊಡಿಸಿಕೊಡುವುದಾಗಿ ಭರವಸೆ ನೀಡಿದ ಅವರು, ಮುನ್ನೆಚ್ಚರಿಕೆಯಾಗಿ ಎಲ್ಲರೂ ಜಾಗೃತರಾಗಿ ನದಿ ಪಾತ್ರದ ಜನರು ಎಚ್ಚರಿಕೆ ಇರಲಿ ಎಂದು ಶಾಸಕ ಎ ಮಂಜು ಸೂಚಿಸಿದರು.

ಈ ಸಂದರ್ಭದಲ್ಲಿ ಹಿರಿಯ ಮುಖಂಡರು ಮುತ್ತಿಗೆ ರಾಜೇಗೌಡರು, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಮುಖ್ಯಸ್ಥರು ಆರ್. ನರಸಿಂಹಮೂರ್ತಿ, ಸ್ವಚ್ಚತಾ ಆಂದೋಲನ ಸಮಿತಿ ತಾಲೂಕು ಅಧ್ಯಕ್ಷರು ಸಿದ್ದರಾಜು, ತಹಸೀಲ್ದಾರ್ ಬಸವ ರೆಡ್ಡಪ್ಪ ರೋಣ, ಉಪ ತಹಸೀಲ್ದಾರ್ ರವಿ, ಮುಖ್ಯ ಅರ್ಚಕರಾದ ಉಮೇಶ ಶ್ರೀನಿವಾಸ್ ರಘು, ಗ್ರಾಮ ಪಂಚಾಯತಿ ಅಧ್ಯಕ್ಷರು ಪವನ ಕುಮಾರಿ ಕುಮಾರ್, ಸದಸ್ಯರಾದ ಪುಷ್ಪ , ಬಿ.ಎಚ್. ಮಾದೇಶ್, ಕೋಟವಾಳು ಸುನೀಲ್, ಸಹಕಾರ ಸಂಘಗಳ ಬ್ಯಾಂಕ್ ಮಾಜಿ ಅಧ್ಯಕ್ಷ ಗಂಗೂರು ಭರತ್, ಎಲ್.ಐ.ಸಿ. ರಮೇಶ್, ಹೋಟೆಲ್ ವಿನೋದ್, ಜನಾರ್ದನ, ಶಾಸಕರ ಆಪ್ತ ಸಹಾಯಕರಾದ ಸುನಿಲ್ ಹಾಗೂ ಸುಹಾಸ್, ಪ್ರವೀಣ್ , ಗ್ರಾಮ ಪಂಚಾಯತಿ ಕಾರ್ಯದರ್ಶಿ ರೇವಣ್ಣ. ಅರ್.ಐ. ರವಿ, ವಿ.ಎ. ಧರ್ಮೇಶ್ ಮುಂತಾದ ರೈತ ಮುಖಂಡರು ಭಾಗವಹಿಸಿದ್ದರು.