ಬಸವಾಪಟ್ಟಣದ ಗತವೈಭವ ಮರುಕಳಿಸಲು ಪ್ರಯತ್ನಿಸುವೆ ಶಾಸಕ ಮಂಜು

| Published : Aug 03 2025, 11:45 PM IST

ಬಸವಾಪಟ್ಟಣದ ಗತವೈಭವ ಮರುಕಳಿಸಲು ಪ್ರಯತ್ನಿಸುವೆ ಶಾಸಕ ಮಂಜು
Share this Article
  • FB
  • TW
  • Linkdin
  • Email

ಸಾರಾಂಶ

ಸಂಸ್ಕಾರವಿದ್ದಾಗ ಮಾತ್ರ ವಿದ್ಯೆಗೆ ಬೆಲೆ ಮತ್ತು ಎಲ್ಲರೂ ಗುರುಹಿರಿಯರಲ್ಲಿ ಗೌರವ ಭಾವನೆ ಹೊಂದಿರುವಂತಹ ಬಸವಾಪಟ್ಟಣ ಗ್ರಾಮವು ಬಹಳ ಹಿಂದಿನಿಂದಲೂ ವಿದ್ಯಾಕೇಂದ್ರವಾಗಿದೆ. ವಾಣಿಜ್ಯ ಬೇಸಾಯದಲ್ಲಿ ಬಹಳ ಪ್ರಗತಿಯನ್ನು ಸಾಧಿಸಿತ್ತು. ಹಿಂದಿನ ವೈಭವದ ಬಸವಾಪಟ್ಟಣ ಸ್ಥಾಪನೆಗೆ ಶ್ರಮಿಸುವುದಾಗಿ ಅರಕಲಗೂಡು ಶಾಸಕ ಎ.ಮಂಜು ತಿಳಿಸಿದರು. ಬಸವಾಪಟ್ಟಣ ಗ್ರಾಮದ ಶ್ರೀ ತೋಂಟದಾರ್ಯ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಜರುಗಿದ ಮುನೇಶ್ವರ ಸ್ವಾಮಿ ಪೂಜಾ ಕೈಂಕರ್ಯ ರುದ್ರಾಭಿಷೇಕ ಮತ್ತು ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ೨೪-೨೫ನೇ ಸಾಲಿನಲ್ಲಿ ಶೇ. ೮೦ ಹೆಚ್ಚು ಅಂಕ ಪಡೆದ ವೀರಶೈವ ಲಿಂಗಾಯಿತ ಸಮಾಜದ ಪ್ರತಿಭಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೇರವೇರಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬಸವಾಪಟ್ಟಣ

ಸಂಸ್ಕಾರವಿದ್ದಾಗ ಮಾತ್ರ ವಿದ್ಯೆಗೆ ಬೆಲೆ ಮತ್ತು ಎಲ್ಲರೂ ಗುರುಹಿರಿಯರಲ್ಲಿ ಗೌರವ ಭಾವನೆ ಹೊಂದಿರುವಂತಹ ಬಸವಾಪಟ್ಟಣ ಗ್ರಾಮವು ಬಹಳ ಹಿಂದಿನಿಂದಲೂ ವಿದ್ಯಾಕೇಂದ್ರವಾಗಿದೆ. ವಾಣಿಜ್ಯ ಬೇಸಾಯದಲ್ಲಿ ಬಹಳ ಪ್ರಗತಿಯನ್ನು ಸಾಧಿಸಿತ್ತು. ಹಿಂದಿನ ವೈಭವದ ಬಸವಾಪಟ್ಟಣ ಸ್ಥಾಪನೆಗೆ ಶ್ರಮಿಸುವುದಾಗಿ ಅರಕಲಗೂಡು ಶಾಸಕ ಎ.ಮಂಜು ತಿಳಿಸಿದರು.

ಇವರು ಬಸವಾಪಟ್ಟಣ ಗ್ರಾಮದ ಶ್ರೀ ತೋಂಟದಾರ್ಯ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಜರುಗಿದ ಮುನೇಶ್ವರ ಸ್ವಾಮಿ ಪೂಜಾ ಕೈಂಕರ್ಯ ರುದ್ರಾಭಿಷೇಕ ಮತ್ತು ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ೨೪-೨೫ನೇ ಸಾಲಿನಲ್ಲಿ ಶೇ. ೮೦ ಹೆಚ್ಚು ಅಂಕ ಪಡೆದ ವೀರಶೈವ ಲಿಂಗಾಯಿತ ಸಮಾಜದ ಪ್ರತಿಭಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೇರವೇರಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀತೋಂಟದಾರ್ಯ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಟಿ.ಸಿ ಅಂಬರೀಶ್, ನಿವೃತ್ತ ಉಪನ್ಯಾಸಕರಾದ ಚಂದ್ರಶೇಖರ್‌, ಸಂಘದ ಪದಾಧಿಕಾರಿಗಳಾದ ವಾಗೀಶ್, ದಿನೇಶ್, ಬಸವಣ್ಣ, ವಾಣಿಜ್ಯೋದಮಿಗಳಾದ ಮಹದೇವ, ಶ್ರೀಕಂಠ, ನಂಜುಂಡಶೆಟ್ಟಿ, ಈಶ್ವರಪ್ಪ, ವಕೀಲರಾದ ಪ್ರಶಾಂತ್, ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಮಧುಕರ್‌, ಗ್ರಾಮಪಂಚಾಯ್ತಿ ಮಾಜಿ ಅಧ್ಯಕ್ಷರಾದ ಮಹೇಂದ್ರ ಕುಮಾರ್‌, ಹಿರಿಯರಾದ ಸೋಮಣ್ಣ ಇತರರು ಹಾಜರಿದ್ದರು.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಾಲು ಹೊದಿಸಿ ಕಾಲೇಜು ಬ್ಯಾಗ್‌ಗಳನ್ನು ನೀಡಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.