ಹುಬ್ಬೆ ಹುಣಸೆ ಕೆರೆಗೆ ಶಾಸಕ ಮಂಜುನಾಥ್‌ ಭೇಟಿ, ಪರಿಶೀಲನೆ

| Published : Aug 24 2025, 02:00 AM IST

ಸಾರಾಂಶ

ಬಹು ನಿರೀಕ್ಷಿತ ಹುಬ್ಬೆ ಹುಣಸೆ ಕೆರೆ ಒತ್ತುವರಿ ತೆರವು ಕಾರ್ಯ ಪ್ರಾರಂಭಗೊಂಡಿದ್ದು ಶಾಸಕ ಎಂ.ಆರ್.ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ತಾಲೂಕಿನ ಉದ್ದನೂರು ಗ್ರಾಮದ ಬಳಿ ಬರುವ ತಟ್ಟೆ ಹಳ್ಳಕ್ಕೆ ನಿರ್ಮಾಣ ಮಾಡಲಾಗಿರುವ ಹುಬ್ಬೆ ಹುಣಸೆ ಕೆರೆ ವಿಸ್ತೀರ್ಣ132 ಎಕರೆ ಇರುವುದರಿಂದ 900 ಎಕರೆ ನೀರಾವರಿ ಯೋಜನೆಯ ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ 132 ಎಕರೆಯಲ್ಲಿ ಹಲವಾರು ಎಕರೆ ಒತ್ತುವರಿಯಾಗಿರುವ ಜಮೀನನ್ನು ತೆರವುಗೊಳಿಸಲು ಭೂಮಾಪನ ಇಲಾಖೆ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳ ಜಂಟಿ ಸರ್ವೇ ಕಾರ್ಯ ಮುಗಿದಿದೆ. ಒತ್ತುವರಿಯಾಗಿರುವುದನ್ನು ಹಿಟಾಚಿ ಯಂತ್ರದ ಮೂಲಕ ಕೆಲವು ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಸ್ಥಳಕ್ಕೆ ಶಾಸಕ ಎಂ.ಆರ್. ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಹನೂರು

ಬಳಿಕ ಮಾತನಾಡಿದ ಅವರು, ಹುಬ್ಬೆ ಜಲಸಾಯದ ಕೆರೆಗೆ ನದಿಯಿಂದ ನೀರನ್ನು ತುಂಬಿಸುವ ಯೋಜನೆಗೆ ಬೂದು ಬಾಳು ಗ್ರಾಮದ ಬಳಿ ಬರುವ ಪೈಪ್ ಲೈನ್ ಡೆಲಿವರಿ ಪಾಯಿಂಟ್ ಇಂದ ಹುಬ್ಬೆ ಹುಣಸೆ ಕೆರೆ ಸ್ಥಳಕ್ಕೆ 17 ಕಿ.ಮೀ ಪೈಪ್ಲೈನ್ ಕಾಮಗಾರಿಗೆ 18/50 ಪೈಪ್‌ಲೈನ್ ಕಾಮಗಾರಿಗೆ ಎಸ್ಟಿಮೆಂಟ್ ಅಂದಾಜು ಪಟ್ಟಿ ತಯಾರು ಮಾಡಿ ಸರ್ಕಾರಕ್ಕೆ ನೀಡಲಾಗಿತ್ತು. ಕೂಡಲೇ ನೀರಾವರಿ ಯೋಜನೆಗೆ ಚಾಲನೆ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ತಾಲೂಕಿನಲ್ಲಿ ಬರುವ ರಾಮನಗುಡ್ಡ ಕೆರೆ ಹಾಗೂ ಹುಬ್ಬೆ ಹುಣಸೆ ಕೆರೆಗಳಿಗೆ ನೀರಾವರಿ ಯೋಜನೆಯನ್ನು ಅಭಿವೃದ್ಧಿಪಡಿಸಲು ಹಲವಾರು ಬಾರಿ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಈಗಾಗಲೇ ಎರಡು ಕೆರೆಗಳಲ್ಲಿ ಒಂದೂವರೆ ಆಗಿರುವುದನ್ನು ಮನಗಂಡು ಅಧಿಕಾರಿಗಳ ಜೊತೆ ಸಭೆ ನಡೆಸಿ ಸರ್ವೇ ಕಾರ್ಯವು ಮುಗಿದಿದೆ. ಈಗಾಗಲೇ ಎರಡು ತಂಡಗಳ ರಚನೆ ಮಾಡಿ ಭೂಮಾಪನ ಇಲಾಖೆ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳ ತಂಡ ಒತ್ತುವರಿ ತೆರವು ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ.

ಮುಂದಿನ ದಿನಗಳಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಿಂದ ಈ ಭಾಗದ ರೈತರಿಗೆ ಅಚ್ಚುಕಟ್ಟು ಪ್ರದೇಶದ ರೈತರಿಗೆ ಅನುಕೂಲ ಕಲ್ಪಿಸುವ ಸದುದ್ದೇಶದಿಂದ ನೀರಾವರಿ ಯೋಜನೆಗೆ ಆದ್ಯತೆ ನೀಡಲಾಗಿದೆ. ನೀರಾವರಿ ಇಲಾಖೆ ಸಚಿವರು ಹಾಗೂ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಈ ಬಾರಿ ಮುಂಗಾರು ಮಳೆ ಇಲ್ಲದೆ ಕೆರೆಗಳು ಮತ್ತು ಕಾಲುವೆಗಳು ಬರಿದಾಗಿವೆ. ಬಹು ನಿರೀಕ್ಷಿತ ಯೋಜನೆಯ ನೀರಾವರಿಯನ್ನು ರೈತರಿಗೆ ಅನುಕೂಲ ಕಲ್ಪಿಸಲು ಕ್ರಮ ಕೈಗೊಂಡಿರುವುದಾಗಿ ತಿಳಿಸಿದರು.

ಕಾವೇರಿ ನೀರಾವರಿ ನಿಗಮದ ಎ.ಇ ಕರುಣಾಮಯಿ ಹಾಗೂ ಭೂಮಾಪನ ಇಲಾಖೆ ಎ.ಡಿ ಎಲ್ .ಆರ್. ನಟರಾಜ್ ಹಾಗೂ ಅಧಿಕಾರಿ ಸಿಬ್ಬಂದಿ ವರ್ಗ ಮುಖಂಡರು ಉಪಸ್ಥಿತರಿದ್ದರು.