ಕಬ್ಬಹಳ್ಳಿ-ಸಂಪಿಗೆಪುರ ರಸ್ತೆ ದುರಸ್ತಿಗೆ ಶಾಸಕರ ಸೂಚನೆ

| Published : Feb 23 2025, 12:35 AM IST

ಸಾರಾಂಶ

ತಾಲೂಕಿನ ಕಬ್ಬಹಳ್ಳಿ-ಸಂಪಿಗೆಪುರ ರಸ್ತೆಯ ಪ್ಯಾಚ್‌ ವರ್ಕ್‌ ಮಾಡಲು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಸೂಚನೆ ನೀಡಿದ್ದಾರೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಕಬ್ಬಹಳ್ಳಿ ದೀಪು ಹೇಳಿದ್ದಾರೆ.ಕನ್ನಡಪ್ರಭ ಪತ್ರಿಕೆಯಲ್ಲಿ ಫೆ.೨೧ ರಂದು ಸಂಪಿಗೆಪುರ ಗ್ರಾಮಸ್ಥರೇ ಚಂದಾ ಹಾಕಿ ರಸ್ತೆ ದುರಸ್ತಿ ಎಂಬ ವರದಿ ಸಂಬಂಧ ಪ್ರತಿಕ್ರಿಯಿಸಿದ್ದು, ಮಾಜಿ ಸಚಿವೆ ಡಾ.ಗೀತಾ ಮಹದೇವಪ್ರಸಾದ್‌ ಕಾಲದಲ್ಲಿ ಕಬ್ಬಹಳ್ಳಿ-ಸಂಪಿಗೆಪುರ ರಸ್ತೆಗೆ ಅನುದಾನ ಬಿಡುಗಡೆ ಮಾಡಿದ್ದರು ಎಂದರು.ಮಾಜಿ ಶಾಸಕ ಸಿ.ಎಸ್.ನಿರಂಜನ್‌ ಕುಮಾರ್‌ ಕಾಲದಲ್ಲಿ ಕಬ್ಬಹಳ್ಳಿ-ಸಂಪಿಗೆಪುರ ರಸ್ತೆ ಡಾಂಬರೀಕರಣ ನಡೆದ ವರ್ಷದೊಳಗೆ ಹಳ್ಳಗಳು ಬಿದ್ದಿವೆ. ಬಿಜೆಪಿಗರ ಕಾಲದಲ್ಲಾದ ಕಳಪೆ ಕಾಮಗಾರಿ ಎಂದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತಾಲೂಕಿನ ಕಬ್ಬಹಳ್ಳಿ-ಸಂಪಿಗೆಪುರ ರಸ್ತೆಯ ಪ್ಯಾಚ್‌ ವರ್ಕ್‌ ಮಾಡಲು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಸೂಚನೆ ನೀಡಿದ್ದಾರೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಕಬ್ಬಹಳ್ಳಿ ದೀಪು ಹೇಳಿದ್ದಾರೆ.

ಕನ್ನಡಪ್ರಭ ಪತ್ರಿಕೆಯಲ್ಲಿ ಫೆ.೨೧ ರಂದು ಸಂಪಿಗೆಪುರ ಗ್ರಾಮಸ್ಥರೇ ಚಂದಾ ಹಾಕಿ ರಸ್ತೆ ದುರಸ್ತಿ ಎಂಬ ವರದಿ ಸಂಬಂಧ ಪ್ರತಿಕ್ರಿಯಿಸಿದ್ದು, ಮಾಜಿ ಸಚಿವೆ ಡಾ.ಗೀತಾ ಮಹದೇವಪ್ರಸಾದ್‌ ಕಾಲದಲ್ಲಿ ಕಬ್ಬಹಳ್ಳಿ-ಸಂಪಿಗೆಪುರ ರಸ್ತೆಗೆ ಅನುದಾನ ಬಿಡುಗಡೆ ಮಾಡಿದ್ದರು ಎಂದರು.

ಮಾಜಿ ಶಾಸಕ ಸಿ.ಎಸ್.ನಿರಂಜನ್‌ ಕುಮಾರ್‌ ಕಾಲದಲ್ಲಿ ಕಬ್ಬಹಳ್ಳಿ-ಸಂಪಿಗೆಪುರ ರಸ್ತೆ ಡಾಂಬರೀಕರಣ ನಡೆದ ವರ್ಷದೊಳಗೆ ಹಳ್ಳಗಳು ಬಿದ್ದಿವೆ. ಬಿಜೆಪಿಗರ ಕಾಲದಲ್ಲಾದ ಕಳಪೆ ಕಾಮಗಾರಿ ಎಂದರು.

ಕಳೆದ ವರ್ಷ ಶಾಸಕರ ಸೂಚನೆಯಂತೆ ಕಬ್ಬಹಳ್ಳಿ -ಸಂಪಿಗೆಪುರ ರಸ್ತೆ ಜಂಗಲ್‌ ಕಟಿಂಗ್‌ ಮಾಡಿಸಲಾಗಿತ್ತು. ಇತ್ತೀಚೆಗೂ ಹಳ್ಳಕ್ಕೆ ಒಂದು ಟಿಪ್ಪರ್‌ ಮಣ್ಣು ಹಾಕಿಸಿದ್ದೇ ಎಂದರು.

ಈಗ ಶಾಸಕರ ಗಮನಕ್ಕೆ ಬಂದಿದ್ದು, ಕಬ್ಬಹಳ್ಳಿ ಸಂಪಿಗೆಪುರ ರಸ್ತೆ ಪ್ಯಾಚ್‌ ಹಾಗೂ ಮೇಂಟೇನ್‌ ಮಾಡಲು ಸೂಚನೆ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.