ರಾಮನಗರ: ತಾಲೂಕಿನ ಸುಗ್ಗನಹಳ್ಳಿ ಗ್ರಾಪಂ ವ್ಯಾಪ್ತಿಯ ಕುಂಬಾರದೊಡ್ಡಿ ಕಾಲೋನಿ ಬಳಿ 7 ಕೋಟಿ ರುಪಾಯಿ ವೆಚ್ಚದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ಮೆಟ್ರಿಕ್ ಪೂರ್ವ ವಿದ್ಯಾರ್ಥಿ‌ ನಿಲಯ ನೂತನ‌ ಕಟ್ಟಡ ನಿರ್ಮಾಣಕ್ಕೆ ಶಾಸಕ ಇಕ್ಬಾಲ್ ಹುಸೇನ್ ಶನಿವಾರ ಭೂಮಿಪೂಜೆ ನೆರವೇರಿಸಿದರು.

ಈ ವೇಳೆ ಸ್ಥಳ ಪರಿಶೀಲನೆ ನಡೆಸಿದ ಶಾಸಕರು, ಸಮಾಜ‌ ಕಲ್ಯಾಣ ಇಲಾಖೆ ಮೂಲಕ ಸುಸಜ್ಜಿತ ಹಾಸ್ಟೆಲ್ ನಿರ್ಮಿಸಲು ಸರ್ಕಾರ ಮತ್ತು ಸಂಬಂಧಿಸಿದ ಸಚಿವರಲ್ಲಿ ಮನವಿ ಮಾಡಿ 7 ಕೋಟಿ ರು. ಅನುದಾನ ತಂದಿದ್ದೇನೆ. ಸುಗ್ಗನಹಳ್ಳಿ ಭಾಗದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಕೊಟ್ಟು, ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಶಿಕ್ಷಣ ಕೊಡಲು ಶ್ರಮಿಸಿದ್ದೇನೆ ಎಂದರು.

ಹಾಸ್ಟೆಲ್ ನಿರ್ಮಿಸಲು ಗುರುತಿಸಿರುವ 1.30 ಗುಂಟೆ ಹದ್ದು ಬಸ್ತ್ ಜಾಗವನ್ನು ಗುರುತಿಸಿಕೊಂಡು ನಂತರ ಹಾಸ್ಟೆಲ್ ನಿರ್ಮಿಸಲು ಮುಂದಾಗಿ ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ಕುಮಾರಸ್ವಾಮಿ ಅವರಿಗೆ ಸೂಚನೆ ನೀಡಿದರು. ಅಲ್ಲದೆ, ಸ್ಥಳದಲ್ಲಿಯೇ ತಹಸೀಲ್ದಾರ್ ಅವರಿಗೆ ಪೋನ್ ಕರೆ ಮಾಡಿ ಸಮಾಜ ಕಲ್ಯಾಣ ಇಲಾಖೆಗೆ ನೀಡಿರುವ ಭೂಮಿಯ ಹದ್ದಬಸ್ತು ಮಾಡಿಸಿ, ಹಾಸ್ಟೆಲ್ ನಿರ್ಮಿಸಲು ಅನುಕೂಲ ಮಾಡಿಕೊಡಿ ಎಂದು ಇಕ್ಬಾಲ್ ಹುಸೇನ್ ಸೂಚನೆ ನೀಡಿದರು.

ಈ ವೇಳೆ ಜಿಪಂ‌ ಕೆಡಿಪಿ ಸದಸ್ಯ ಮುಕುಂದ, ಸುಗ್ಗನಹಳ್ಳಿ ಗ್ರಾಪಂ ಮಾಜಿ ಉಪಾಧ್ಯಕ್ಷ ಚಿಕ್ಕಸ್ವಾಮಿ, ಮುಖಂಡರಾದ ವಾಸು, ರೈಡ್ ನಾಗರಾಜು, ಲೋಕೇಶ್, ವಸಂತ, ಬೋಜ, ಲಕ್ಕಸಂದ್ರ ಶಿವಣ್ಣ, ಪಿಡಿಓ ಕೇಶವಮೂರ್ತಿ ಮತ್ತಿತರರು ಹಾಜರಿದ್ದರು.

4ಕೆಆರ್ ಎಂಎನ್ 2.ಜೆಪಿಜಿ


ರಾಮನಗರ ತಾಲೂಕಿನ ಕುಂಬಾರದೊಡ್ಡಿ ಕಾಲೋನಿ ಬಳಿ ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ಮೆಟ್ರಿಕ್ ಪೂರ್ವ ವಿದ್ಯಾರ್ಥಿ‌ ನಿಲಯ ನೂತನ‌ ಕಟ್ಟಡ ನಿರ್ಮಾಣಕ್ಕೆ ಶಾಸಕ ಇಕ್ಬಾಲ್ ಹುಸೇನ್ ಶನಿವಾರ ಭೂಮಿಪೂಜೆ ನೆರವೇರಿಸಿದರು.

--------------------------