ಸಾರಾಂಶ
ಕನ್ನಡಪ್ರಭ ವಾರ್ತೆ ಗೌರಿಬಿದನೂರು
ಜನರನ್ನು ಅಲೆಸದೆ ಆತ್ಮಸಾಕ್ಷಿಗನುಗುಣವಾಗಿ ಕರ್ತವ್ಯ ನಿರ್ವಹಿಸಿ ಉತ್ತಮ ಅಧಿಕಾರಿಗಳಾಗಿ ಎಂದು ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ ಸೂಚಿಸಿದರು.ನಗರದ ಹೊರವಲಯದಲ್ಲಿರುವ ತಾಲೂಕು ಕಚೇರಿ ಸಭಾಂಗಣದಲ್ಲಿ ಜನಸ್ಪಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ರೈತರ ಬಡಜನರ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹಾರ ಮಾಡಿದ್ದು ಇಂದು ಸುಮಾರು 50 ಹೆಚ್ಚು ದೂರು ಅರ್ಜಿಗಳು ಬಂದಿದೆ, ಇವುಗಳ ಇತ್ಯರ್ಥ ಮಾಡಲಾಗಿದೆ. ಶೇ.90 ರಷ್ಟು ಸಮಸ್ಯೆಗಳಿಗೆ ಇತಿಶ್ರೀ ಹಾಡಲಾಗಿದೆ ಎಂದರು.
ಜನಸ್ಪಂದನ ಕಾರ್ಯಕ್ರಮಪ್ರತಿ ತಿಂಗಳು ತಾಲೂಕು ಆಡಳಿತ ಕಚೇರಿಯಲ್ಲಿ ಜನಸ್ಪಂದನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ, ಕಾನೂನು ತೊಡಕು ಇರುವ ಸಮಸ್ಯೆಗಳನ್ನು ಬಿಟ್ಟು ಉಳಿದ ಶೇ.80 ರಷ್ಟು ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಷ್ಕರಿಸಲಾಗಿದೆ. ಅಧಿಕಾರಿಗಳು ಯಾವುದೇ ಕೆಲಸವನ್ನು ವಿಳಂಬ ಮಾಡಿದ್ದಲ್ಲಿ ನೇರವಾಗಿ ನನ್ನ ಗಮನಕ್ಕೆ ತಂದರೆ, ಬಗೆಹರಿಸಿಕೊಡಲಾಗುವುದು ಎಂದರು.
ಎತ್ತಿನಹೊಳೆ ಕಾಮಗಾರಿ ವೇಗವಾಗಿ ಸಾಗುತ್ತಿದ್ದು, ಇನ್ನು ಎರಡು ವರ್ಷದಲ್ಲಿ ಎತ್ತಿನಹೊಳೆ ನೀರನ್ನು ತಾಲೂಕಿನ ಕೆರೆಗಳಿಗೆ ಹರಿಸಲಾಗುವುದು. ಪ್ರತಿ ತಿಂಗಳು ಹೊಸ ಹೊಸ ಸಮಸ್ಯೆಗಳು ತಾಲೂಕಿನಲ್ಲಿ ಉದ್ಬಸುವುದು ಸಾಮಾನ್ಯ ಅವುಗಳನ್ನು ಅಧಿಕಾರಿಗಳ ತಕ್ಷಣ ಸ್ಪಂದನೆ ಮಾಡಿ ಬಗೆಹರಿಸಬೇಕು ಎಂದು ಅಧಿಕಾರಗಳಿಗೆ ತಾಕೀತು ಮಾಡಿದರು.ಮಿತಿಮೀರಿದ ಅಕ್ರಮ ಮದ್ಯ ಮಾರಾಟ
ಅಕ್ರಮ ಮದ್ಯ ಮಾರಾಟ ರಾಜ್ಯದಲ್ಲಿ ಎಲ್ಲಾಕಡೆ ಮಿತಿ ಮೀರಿದೆ. ಸರ್ಕಾರ ಸಹ ಕೈಚೆಲ್ಲಿ ಕೂತಿದೆ, ಕಾರಣ ಹಣದ ಮೂಲ ಮದ್ಯ ಮಾರಾಟದಿಂದ ಬರುವುದು ಇದೆ. ಇದಕ್ಕೆ ಮೂಲ ಕಾರಣ ಹೆಚ್ಚಿನ ತೆರಿಗೆ ಬರುವುದು ಮದ್ಯ ಮಾರಾಟದಿಂದ ಆದ್ದರಿಂದ ಅಂಗಡಿ ಮತ್ತು ಎಲ್ಲದಂತೆ ಅಲ್ಲಿ ಮದ್ಯ ಮಾರಾಟ ಅಗುತ್ತಿದೆ. ಇದು ನಮ್ಮ ಕೈಮೀರಿದೆ ಆಧಿಕಾರಿಗಳು ಕೈಚೆಲ್ಲಿ ಕುಳಿತ್ತಿದ್ದಾರೆ ಅದರೂ ಆಧಿಕಾರಿಗಳು ನಿಮ್ಮ ವ್ಯಾಪ್ತಿಯಲ್ಲಿ ಅಬಕಾರಿ ಕಾನೂನು ಏನು ಇದೆ ಅದರ ಅನ್ವಯ ಕ್ರಮ ಕೈಗೊಳ್ಳಿ ಎಂದು ತಿಳಿಸಿದರು.ತಹಸೀಲ್ದಾರ್ ಮಹೇಶ್ ಪತ್ರಿ ಮಾತನಾಡಿ, ತಾಲೂಕಿನಲ್ಲಿರುವ, ಕೃಷ್ಣರಾಜಾಪುರ, ಹುಣಸೆನಹಳ್ಳಿ, ಕೋಡಿಹಳ್ಳಿ ಜೋಡಿ ಗ್ರಾಮಗಳ ಸಮಸ್ಯೆಯನ್ನು ಕಾನೂನು ಪ್ರಕಾರ ಇತ್ಯರ್ಥ ಮಾಡಲು ಪ್ರಯತ್ನ ಮಾಡಲಾಗುತ್ತಿದೆ. ಎಲ್ಲಾ ದಾಖಲೆಗಳು ರೈತರ ಹೆಸರಿನಲ್ಲಿ ಇದ್ದರೂ ಅಧಿಕಾರಿಗಳ ವರ್ಗಾವಣೆಯಿಂದ ಜೋಡಿ ಗ್ರಾಮದ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ವಿಳಂಬವಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಕೆ.ಎಚ್.ಪಿ. ಫೌಂಡೇಷನ್ ಮುಖ್ಯಕಾರ್ಯನಿರ್ವಹಕ ಶ್ರೀನಿವಾಸಗೌಡ, ಜೆ, ಕಾಂತರಾಜ್, ರೈತ ಮುಖಂಡ ಮೇಳ್ಯ ರಾಮಚಂದ್ರರೆಡ್ಡಿ, ದಲಿತ ಮುಖಂಡ ಕೆ, ನಂಜುಂಡಪ್ಪ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.ಪೊಟೋ:ಗೌರಿಬಿದನೂರು ತಾಲೂಕು ಕಚೇರಿ ಸಭಾಂಗಣದಲ್ಲಿ ಜನಸ್ಪಂದನಾ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ ಅಹವಾಲು ಆಲಿಸಿದರು.