ತಾಲೂಕಿನ ಹುತ್ರಿದುರ್ಗ ಹೋಬಳಿಯ ಎಲ್ಲಾ ಕೆರೆಗಳಿಗೂ ಸಂಪೂರ್ಣ ನೀರು ತುಂಬಿಸುವ ಜವಾಬ್ದಾರಿಯನ್ನು ನಾನು ಹೊತ್ತುಕೊಂಡಿದ್ದು ಮುಂ ದಿನ ದಿನಗಳಲ್ಲಿ ಎಲ್ಲಾ ಹೋಬಳಿಗಳಿಗೂ ಕೂಡ ನೀರಾವರಿ ಯೋಜನೆ, ಪೂರ್ಣಗೊಳ್ಳಲಿದೆ ಎಂದು ಕುಣಿಗಲ್ ಶಾಸಕ ಡಾ.ರಂಗನಾಥ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕುಣಿಗಲ್

ತಾಲೂಕಿನ ಹುತ್ರಿದುರ್ಗ ಹೋಬಳಿಯ ಎಲ್ಲಾ ಕೆರೆಗಳಿಗೂ ಸಂಪೂರ್ಣ ನೀರು ತುಂಬಿಸುವ ಜವಾಬ್ದಾರಿಯನ್ನು ನಾನು ಹೊತ್ತುಕೊಂಡಿದ್ದು ಮುಂ ದಿನ ದಿನಗಳಲ್ಲಿ ಎಲ್ಲಾ ಹೋಬಳಿಗಳಿಗೂ ಕೂಡ ನೀರಾವರಿ ಯೋಜನೆ, ಪೂರ್ಣಗೊಳ್ಳಲಿದೆ ಎಂದು ಕುಣಿಗಲ್ ಶಾಸಕ ಡಾ.ರಂಗನಾಥ ತಿಳಿಸಿದರು. ಶ್ರೀರಂಗ ಏತ ನೀರಾವರಿ ಯೋಜನೆಯಡಿ ಈರೆಕೆರೆ ಗ್ರಾಮದಲ್ಲಿ ಅಳವಡಿಸಿರುವ 5 ಬೃಹದಾಕಾರದ ಮೋಟಾರ್ ಗಳಿಗೆ ಚಾಲನೆ ನೀಡಿ ಮಾತನಾಡಿದರು. ಕುಣಿಗಲ್ ತಾಲೂಕಿನ ಪ್ರತಿಯೊಂದು ಕೆರೆಯನ್ನು ತುಂಬಿಸುವ ಹಿನ್ನೆಲೆಯಲ್ಲಿ ಲಿಂಕ್ ಕೆನಾಲ್ ಮುಖಾಂತರ ನೀರನ್ನು ತರುವ ಜವಾಬ್ದಾರಿ ನನ್ನ ಮೇಲಿದೆ. ಕೊತ್ತಗೆರೆ ಹುಲಿಯೂರುದುರ್ಗ ಭಾಗಗಳಿಗೆ ಸಂಪೂರ್ಣ ನೀರಾವರಿ ಯೋಜನೆಯನ್ನು ಮಾಡುತ್ತಾ ನನ್ನ ಋಣ ತೀರಿಸುತ್ತೇನೆ ಎಂದರು. ಈ ವೇಳೆ ಕಾಂಗ್ರೆಸ್ ಮುಖಂಡ ಕೋಘಟ್ಟ ರಾಜಣ್ಣ , ಸೂಳೇಕುಪ್ಪೆ ಪಾಪಣ್ಣ , ಸೇರಿದಂತೆ ಇತರರು ಇದ್ದರು.