ಸಾರಾಂಶ
ಶಾಸಕ ಕೆ.ಎಸ್.ಆನಂದ್ ಅವರ 45 ನೇ ಹುಟ್ಟುಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳು ಮತ್ತು ಕಾರ್ಯಕರ್ತರಿಂದ ಕಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣುಗಳ ವಿತರಿಸಿದರು.
ಕನ್ನಡಪ್ರಭ ವಾರ್ತೆ, ಕಡೂರು
ಶಾಸಕ ಕೆ.ಎಸ್.ಆನಂದ್ ಅವರ 45 ನೇ ಹುಟ್ಟುಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳು ಮತ್ತು ಕಾರ್ಯಕರ್ತರಿಂದ ಕಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣುಗಳ ವಿತರಿಸಿದರು.ಗುರುವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಣ್ಣು ವಿತರಣೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್ ಮುಖಂಡ ಶ್ರೀಕಂಠ ಒಡೆಯರ್ ಮಾತನಾಡಿ, ನಮ್ಮ ನಾಯಕ ಹಾಗು ಶಾಸಕ ಕೆ.ಎಸ್. ಆನಂದ್ ರವರು ಒಬ್ಬ ಸಾಮಾನ್ಯ ರೈತನ ಮಗನಾಗಿ ರೈತರ ಮತ್ತು ಬಡಜನರ ಸಂಕಷ್ಟಗಳನ್ನು ಹತ್ತಿರದಿಂದ ಕಾಣುವ ಮೂಲಕ ಜನಸೇವೆಯಿಂದ ಹಂತ ಹಂತವಾಗಿ ರಾಜಕೀಯದಲ್ಲಿ ಮೇಲೆ ಬಂದಿದ್ದಾರೆ. ಕಡೂರು ಪುರಸಭೆ ಸದಸ್ಯರಾಗಿ, ಪಿಕಾರ್ಡ್ ಬ್ಯಾಂಕಿನ ನಿದೇಶಕರಾಗಿಯೂ ದುಡಿದಿದ್ದಾರೆ.
ಈ ನಿಟ್ಟಿನಲ್ಲಿ ಕ್ಷೇತ್ರದಲ್ಲಿರುವ ಸಾವಿರಾರು ಅಭಿಮಾನಿಗಳು ಮತ್ತು ಕಾರ್ಯಕರ್ತರು ಶಾಸಕ ಕೆ.ಎಸ್.ಆನಂದ್ ಹುಟ್ಟುಹಬ್ಬವನ್ನು ಅವರ ಸಡಗರ ಸಂಭ್ರಮದಿಂದ ಆಚರಿಸುತಿದ್ದಾರೆ. ಶಾಸಕರಿಗೆ ದೇವರು ಕ್ಷೇತ್ರದ ಜನತೆಯ ಕೆಲಸ ಕಾರ್ಯಗಳನ್ನು ಮಾಡಲು ಇನ್ನು ಹೆಚ್ಚಿನ ಆಯಸ್ಸು ಮತ್ತು ಆರೋಗ್ಯ ನೀಡಲಿ ಅಲ್ಲದೆ ಮುಂದಿನ ದಿನಗಳಲ್ಲಿ ಅವರಿಗೆ ಉನ್ನತ ಹುದ್ದೆ ಸಿಗಲಿ ಎಂದು ಶುಭ ಹಾರೈಸಿದರು.ಇದೇ ಸಂದರ್ಭದಲ್ಲಿ ಕಡೂರು ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಉಮೇಶ್, ಭೋವಿ ಸಮಾಜದ ತಾಲೂಕು ಅಧ್ಯಕ್ಷ ನಾಗರಾಜ್, ಕೊನೆಮನೆ ರವಿ, ಯಶವಂತ್, ಕುಮಾರ್, ಶಿವು,ಕನಕರಾಜು, ಹುಚ್ಚಪ್ಪ, ಜಿಮ್ ಶ್ರೀನಿವಾಸ್, ರವಿಕುಮಾರ್, ಲ್ಯಾಬ್ ಸುರೇಶ್, ಆತಿಕ್, ಮನು ಸೇರಿದಂತೆ ನೂರಾರು ಅಭಿಮಾನಿಗಳು ಇದ್ದರು.4ಕೆಕೆಡಿಯು1.
ಶಾಸಕ ಕೆ.ಎಸ್.ಆನಂದ್ ಅವರ ಹುಟ್ಟುಹಬ್ಬದ ಪ್ರಯುಕ್ತ ಕಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ವಿತರಿಸಲಾಯಿತು.