ಐತಿಹಾಸಿಕ ದಿನ
ಇದೊಂದು ಐತಿಹಾಸಿಕ ದಿನ. ಇಂತಹ ಸ್ಪರ್ಧೆಯನ್ನು ನಮ್ಮ ಸಂಸ್ಥೆಯಲ್ಲಿ ಆಯೋಜಿಸಿದ್ದು ಹೆಮ್ಮೆಯಾಗಿದೆ. ಇದರ ಯಶಸ್ಸಿಗೆ ಹಗಲಿರುಳು ಶ್ರಮಿಸಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು.-ಡಾ। ಅಚ್ಯುತ ಸಮಂತ, ಕಳಿಂಗ ವಿವಿ ಸ್ಥಾಪಕಭುವನೇಶ್ವರ: ಕರ್ನಾಟಕದ ಕಾರವಾರ ಕ್ಷೇತ್ರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರ ಪುತ್ರಿ ಸಾಧ್ವಿ, ಭುವನೇಶ್ವರದ ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ(ಕೆಐಐಟಿ) ಕ್ಯಾಂಪಸ್‌ನಲ್ಲಿ ನಡೆದ 2026ನೇ ಸಾಲಿನ ಫೆಮಿನಾ ಮಿಸ್ ಇಂಡಿಯಾ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಅವರು 2027ರ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
61ನೇ ಆವೃತ್ತಿಯ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಗೋವಾವನ್ನು ಪ್ರತಿನಿಧಿಸಿದ್ದ ಸಾಧ್ವಿ ಏ.18ರಂದು ನಡೆದ ಅಂತಿಮ ಸುತ್ತಿನಲ್ಲಿ ಜಯ ಗಳಿಸಿದ್ದಾರೆ. ಫೈನಲ್‌ನಲ್ಲಿ ಮಹಾರಾಷ್ಟ್ರದ ರಾಜನಂದಿನಿ ಪವಾರ್ ಮತ್ತು ಜಮ್ಮು ಕಾಶ್ಮೀರದ ಶ್ರೀ ಅದ್ವೈತ ಮೊದಲ ಮತ್ತು ದ್ವಿತೀಯ ರನ್ನರ್ ಅಪ್ ಆಗಿದ್ದಾರೆ. ಕರ್ನಾಟಕವನ್ನು ಪ್ರತಿನಿಧಿಸಿದ್ದ ಖುಷಿ ರಮೇಶ್ ಕಲಕೇರಿ ಅವರು ಅಗ್ರ 15ರಲ್ಲಿ ಸ್ಥಾನ ಪಡೆದಿದ್ದರು. ಆದರೆ ಅಂತಿಮ ಹಂತ ಪ್ರವೇಶಿಸುವಲ್ಲಿ ವಿಫಲರಾಗಿದ್ದರು. ಸ್ಪರ್ಧಾ ವಿಜೇತರಿಗೆ ಕೆಐಐಟಿ ಮತ್ತು ಕೆಐಎಸ್‌ಎಸ್‌ನ ಸ್ಥಾಪಕ ಡಾ। ಅಚ್ಯುತ ಸಮಂತಾ ಅವರು ಅಭಿನಂಧಿಸಿದ್ದಾರೆ. ಪ್ರತಿಭಾವಂತಾ ಸಾಧ್ವಿಸಾಧ್ವಿ, ಬ್ರಿಟಿಷ್ ಕೊಲಂಬಿಯಾ ವಿಶ್ವ ವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರ ಮತ್ತು ಅಂತಾರಾಷ್ಟ್ರೀಯ ಸಂಬಂಧ ವಿಷಯಗಳಲ್ಲಿ ಪದವಿ ಪಡೆದಿದ್ದಾರೆ. ವೃತ್ತಿಯಲ್ಲಿ ಮಾಡೆಲ್ ಮತ್ತು ಉದ್ಯಮಿಯಾಗಿದ್ದಾರೆ. ಈಗಾಗಲೇ ಅವರು ಕ್ಯಾಲಿಪೋರ್ನಿಯಾ ಬ್ಯುರಿಟೋನಂತಹ ಪ್ರಮುಖ ಬ್ರ್ಯಾಂಡ್‌ಗಳ ಅಭಿಯಾನಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಈ ಹಿಂದೆ 2022ರಲ್ಲಿ ಮಂಗಳೂರು ಮೂಲದ ಸಿನಿ ಶೆಟ್ಟಿ ಮಿಸ್ ಇಂಡಿಯಾ ಪ್ರಶಸ್ತಿ ಗೆದ್ದಿದ್ದರು. ಅದಕ್ಕೂ ಕರ್ನಾಟಕದ ಮುನ್ನ ರೇಖಾ ಹಂದೆ, ಸಂಧ್ಯಾ ಚಿಬ್, ನಫೀಸಾ ಜೋಸೆಫ್, ಲಿಮರೈನಾ ಡಿಸೋಜಾ, ಸಾರಾ ಜೇನ್ ಡಯಾಸ್ ಪ್ರಶಸ್ತಿ ಗೆದ್ದಿದ್ದರು.
-
ಕಳಿಂಗ ವಿವಿ ಹಿರಿಮೆ
ಪೂರ್ವ ಭಾರತದ ವಿಶ್ವವಿದ್ಯಾನಿಲಯವೊಂದರಲ್ಲಿ ಇಂತಹ ಪ್ರತಿಷ್ಠಿತ ಸ್ಪರ್ಧೆ ನಡೆದಿದ್ದು ಇದೇ ಮೊದಲು. ಫೈನಲ್‌ನಲ್ಲಿ ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್ (ಕೆಐಎಸ್‌ಎಸ್)ನ 25,0000 ಬುಡಕಟ್ಟು ವಿದ್ಯಾರ್ಥಿನಿಯರು ಭಾಗವಹಿಸಿದ್ದು ವಿಶೇಷವಾಗಿತ್ತು.ಶಾಸಕ ಸತೀಶ ಸೈಲ್ ಪ್ರತಿಕ್ರಿಯೆಮಗಳಿಂದ ಅಕ್ಷಯ ತೃತೀಯಾ ಗಿಫ್ಟ್‌ನನ್ನ ಮಗಳು ನನಗೆ ಅಕ್ಷಯ ತೃತೀಯಾದಂದು ನೀಡಿದ ಗಿಫ್ಟ್ ಇದಾಗಿದೆ. ಸ್ವತಃ ನನ್ನ ಮಗಳು ಸಾದ್ವಿಯೇ, ‘ನಾನು ಮಿಸ್ ಇಂಡಿಯಾ’ ಆಗಿದ್ದೇನೆ ಎಂದು ಹೇಳಿದರೂ ನನಗೆ ನಂಬಲೇ ಆಗಲಿಲ್ಲ. ಹತ್ತು ಬಾರಿ ಖಚಿತಪಡಿಸಿಕೊಂಡೆ. ಎಲ್ಲಿಲ್ಲದ ಖುಷಿಯಾಗಿದೆ. ದೇವರು, ಜನರ ಆಶೀರ್ವಾದದಿಂದ ಇದು ಸಾಧ್ಯ ಆಗಿದೆ. ಮೂರು ತಿಂಗಳಿನಿಂದ ಗಂಭೀರವಾಗಿ ಪ್ರಯತ್ನಿಸಿ ಅಂತಿಮವಾಗಿ ಯಶಸ್ವಿಯಾಗಿದ್ದಾಳೆ. ಅವಳು ಮಿಸ್ ವರ್ಲ್ಡ್ ಸ್ಪರ್ಧೆಗೆ ಹೋಗಲಿದ್ದು, ಅಲ್ಲೂ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ.-ಸತೀಶ ಸೈಲ್, ಶಾಸಕ.