ಶಾಸಕರಿಗೆ ರಾಷ್ಟ್ರೀಯ ಹೂವಿನ ಪರಿಜ್ಞಾನವಿಲ್ಲ: ಬಿಜೆಪಿ ಮುಖಂಡ

| Published : Jan 31 2024, 02:16 AM IST

ಶಾಸಕರಿಗೆ ರಾಷ್ಟ್ರೀಯ ಹೂವಿನ ಪರಿಜ್ಞಾನವಿಲ್ಲ: ಬಿಜೆಪಿ ಮುಖಂಡ
Share this Article
  • FB
  • TW
  • Linkdin
  • Email

ಸಾರಾಂಶ

ಜನವರಿ 26 ರಂದು ನಡೆದ ಗಣರಾಜ್ಯೋತ್ಸವ ಸಮಾರಂಭದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಲಾಂಛನಗಳ ಪ್ರದರ್ಶನದ ಮೂಲಕ ನೃತ್ಯ ಮಾಡಿಸಿದ ಶಾಲೆಯ ಶಿಕ್ಷಕರು ಕಮಲದ ಹೂವು ಬಳಸಿದ್ದರು. ವೇದಿಕೆಯಲ್ಲಿದ್ದ ಶಾಸಕರು ಅದು ಬಿಜೆಪಿ ಪಕ್ಷದ ಚಿಹ್ನೆಯೆಂದು ಆಕ್ಷೇಪಿಸಿದರು. ಅವರಿಗೆ ರಾಷ್ಟ್ರೀಯ ಹೂವು ಕಮಲದ ಪರಿಜ್ಞಾನವಿಲ್ಲ ಎಂದು ಬಿಜೆಪಿ ಮುಖಂಡ ಜಿ.ವಿ.ಟಿ. ಬಸವರಾಜ್ ಹೇಳಿದ್ದಾರೆ. ಅರಸೀಕೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಜಿ.ವಿ.ಟಿ.ಬಸವರಾಜ್ ಹೇಳಿಕೆ । ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನ

ಕನ್ನಡಪ್ರಭ ವಾರ್ತೆ ಅರಸೀಕೆರೆ

ಜನವರಿ 26 ರಂದು ನಡೆದ ಗಣರಾಜ್ಯೋತ್ಸವ ಸಮಾರಂಭದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಲಾಂಛನಗಳ ಪ್ರದರ್ಶನದ ಮೂಲಕ ನೃತ್ಯ ಮಾಡಿಸಿದ ಶಾಲೆಯ ಶಿಕ್ಷಕರು ಕಮಲದ ಹೂವು ಬಳಸಿದ್ದರು. ವೇದಿಕೆಯಲ್ಲಿದ್ದ ಶಾಸಕರು ಅದು ಬಿಜೆಪಿ ಪಕ್ಷದ ಚಿಹ್ನೆಯೆಂದು ಆಕ್ಷೇಪಿಸಿದರು. ಅವರಿಗೆ ರಾಷ್ಟ್ರೀಯ ಹೂವು ಕಮಲದ ಪರಿಜ್ಞಾನವಿಲ್ಲ ಎಂದು ಬಿಜೆಪಿ ಮುಖಂಡ ಜಿ.ವಿ.ಟಿ. ಬಸವರಾಜ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೊದಲನೇ ಬಹುಮಾನ ಪಡೆದಿದ್ದ ಶಾಲೆಗೆ ನಾಲ್ಕನೇ ಬಹುಮಾನ ಸಿಗುವಂತೆ ಒತ್ತಡ ಹೇರಿ ಕುತಂತ್ರ ಮಾಡಿದ ಶಾಸಕರ ದುರ್ವರ್ತನೆ ಅತ್ಯಂತ ಖಂಡನೀಯ. ನಾಲ್ಕು ಬಾರಿ ಶಾಸಕರಾಗಿ ಸಂವಿಧಾನದ ಬಗ್ಗೆ ಮಾತನಾಡುವ ಶಾಸಕರು. ಗಣರಾಜ್ಯೋತ್ಸವದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲೂ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಎಲ್ಲದ್ದಕ್ಕೂ ಮೂಗು ತೂರಿಸುವ ದುರಹಂಕಾರ ತೋರಿದ್ದಾರೆ. ಶಾಸಕರ ಈ ನಡವಳಿಕೆ ತಾಲೂಕು ಆಡಳಿತಕ್ಕೂ ಮತ್ತು ಅರಸೀಕೆರೆ ಕ್ಷೇತ್ರಕ್ಕೂ ಸಹ ಕಪ್ಪು ಚುಕ್ಕಿ. ಈ ಕೂಡಲೇ ಶಾಸಕರು ಸಂಬಂಧಪಟ್ಟ ಶಾಲೆ ಮತ್ತು ಶಿಕ್ಷಕಿ ಅವರಲ್ಲಿ ಕ್ಷಮೆಯಾಚನೆ ಮಾಡಬೇಕು ಎಂದು ಆಗ್ರಹಿಸಿದರು.

ಪ್ರಜಾಪ್ರಭುತ್ವದ ದೊಡ್ಡ ಹಬ್ಬದ ದಿನದಂದು ರಾಷ್ಟ್ರೀಯ ಲಾಂಛನದ ಬಗ್ಗೆ ಆಗೌರವ ತೋರಿ ಸಂವಿಧಾನ ವಿರೋಧಿ ನಡೆಯ ಕಾರಣಕ್ಕೆ ಇವರನ್ನು ಶಾಸಕ ಸ್ಥಾನದಿಂದ ವಜಾ ಮಾಡಬೇಕೆಂದು ರಾಜ್ಯಪಾಲರಿಗೆ ಮತ್ತು ವಿಧಾನಸಭಾಧ್ಯಕ್ಷರಿಗೆ ತಾವು ತಾಲೂಕು ದಂಡಾಧಿಕಾರಿಗಳ ಮೂಲಕ ಮನವಿ ಮಾಡಿದ್ದೇವೆ. ದೇಶದ ಅನೇಕ ರಾಷ್ಟ್ರೀಯ ಪಕ್ಷಗಳು ಹೊಂದಿರುವಂತ ಚಿನ್ಹೆಗಳು ಸಾರ್ವಜನಿಕವಾಗಿ ಮತ್ತು ಅನೇಕ ಕಾರ್ಯಕ್ರಮಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಆದರೆ ರಾಷ್ಟ್ರೀಯ ಹೂ ಕಮಲದ ಮೇಲೆ ಮಾತ್ರ ಏಕೆ ಶಾಸಕರ ವಕ್ರದೃಷ್ಟಿ ಬಿತ್ತು? ಇತರ ಪಕ್ಷಗಳ ಚಿಹ್ನೆಗಳಾದ ಹಸ್ತ, ಸೈಕಲ್, ಎಲೆ, ಸೂರ್ಯ, ಕುಡುಗೋಲು, ಬತ್ತದ ಹೊರೆ, ಬಾಣ ಇತ್ಯಾದಿ ಕಾಣಲಿಲ್ಲವೇ? ಇಂಥ ದುರ್ಬುದ್ಧಿಯ ಯೋಚನೆಗಳನ್ನು ಬಿಟ್ಟು ಈ ರೀತಿ ಕ್ಷುಲ್ಲಕವಾಗಿ ವರ್ತನೆ ಮಾಡಿ ಕ್ಷೇತ್ರದ ಗೌರವ ಮಣ್ಣು ಪಾಲು ಮಾಡಬೇಡಿ ಎಂದು ಸಲಹೆ ನೀಡಿದರು.

ಈ ದುರ್ಗುಣ ಬಿಡದಿದ್ದರೆ ತಾಲೂಕಿನಾದ್ಯಂತ ನಿಮ್ಮ ವಿರುದ್ಧ ಪ್ರತಿಭಟನೆಯ ಎಚ್ಚರಿಕೆಯನ್ನು ಕೊಡಬೇಕಾಗುತ್ತದೆ ಎಂದು ಬಸವರಾಜ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಜಿ.ವಿ.ಟಿ. ಬಸವರಾಜ್ ಮಾತನಾಡಿದರು.