ದುರಾಸೆಯಿಂದ ಹಿಂದೂ ಧಾರ್ಮಿಕ ಆಚರಣೆಗಳ ಟೀಕೆ

| Published : Dec 20 2023, 01:15 AM IST

ಸಾರಾಂಶ

ಕಿಡಿಗೇಡಿಗಳ ಘಾತುಕ ಶಕ್ತಿಯಿಂದ ದೇವಸ್ಥಾನಗಳು ನಶಿಸುವುದಿಲ್ಲ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ದೇವಾಲಯಗಳು ಭಕ್ತರಲ್ಲಿ ಧಾರ್ಮಿಕ ಸ್ಥಿರತೆ ಮೂಡಿಸುವ ಮತ್ತು ಧರ್ಮ ಉಳಿವಿಗಾಗಿ ಆಧಾರ ಸ್ತಂಭವಾಗಿವೆ. ಸಮಾಜದ ಕೆಲ ಕಿಡಿಗೇಡಿಗಳ ಘಾತುಕ ಶಕ್ತಿಯಿಂದ ದೇವಸ್ಥಾನಗಳು ಎಂದಿಗೂ ನಶಿಸುವುದಿಲ್ಲ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.

ಬನಹಟ್ಟಿಯ ಶ್ರೀಕಾಡಸಿದ್ಧೇಶ್ವರ ದೇವಸ್ಥಾನದಲ್ಲಿ ಜರುಗಿದ ಕಳಸಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಧರ್ಮ ಉಳಿವಿಗಾಗಿ ಧಾರ್ಮಿಕ ಆಚರಣೆಗಳು ಅವಶ್ಯಕ. ಆದರೆ, ಕೆಲವರು ದುರಾಸೆಗಾಗಿ ಹಿಂದೂ ಧಾರ್ಮಿಕ ಆಚರಣೆಗಳನ್ನು ಟೀಕಿಸುತ್ತಿದ್ದಾರೆ. ಅಂತಹವರಿಂದ ಸಮಾಜ ಎಂದೂ ಸುಧಾರಣೆಯಾಗದು. ಇಂಥವರು ಟೀಕಿಸಿದ ಮಾತ್ರಕ್ಕೆ ದೈವತ್ವದ ಅಸ್ಮಿತೆಗೆ ಧಕ್ಕೆಯಾಗದು, ಅದು ಚಿರನೂತನವಾಗಿರುತ್ತದೆ ಎಂದರು.

ಸನಾತನ ಧರ್ಮ, ಸಂಸ್ಕೃತಿಗಳು ಇರುವುದು ಜನರ ಒಳಿತಿನೊಂದಿಗೆ ಉಳಿವಿಗಾಗಿ ಹೊರತು ಅಳಿವಿಗಲ್ಲ. ವಿದೇಶಿಗರು ಸಹ ಭಾರತೀಯ ಸಂಸ್ಕೃತಿಯನ್ನು ಮೆಚ್ಚುತ್ತಿದ್ದಾರೆ. ನಿತ್ಯ ಲಕ್ಷಾಂತರ ವಿದೇಶಿಗರು ಭಾರತಕ್ಕೆ ಬಂದು ಇಲ್ಲಿನ ಪರಂಪರೆ ಮೆಚ್ಚಿಕೊಂಡು ಅನುಸರಿಸುತ್ತಿದ್ದಾರೆ. ಹೀಗಿದ್ದಾಗ ವಿದೇಶಿ ಜೀವನ ಶೈಲಿಗೆ ನಮ್ಮ ಇಂದಿನ ಯುವಕರು ಮರುಳಾಗುತ್ತಿರುವುದು ಬೇಸರದ ಸಂಗತಿ. ಸನಾತನ ಧರ್ಮದ ಉಳಿವಿಗಾಗಿ ಎಲ್ಲರೂ ಒಗ್ಗಟ್ಟಿನ ಪ್ರದರ್ಶನ ನಡೆಸಬೇಕಿದೆ ಎಂದು ಹೇಳಿದರು.

ರಬಕವಿಯ ಶ್ರೀಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಶ್ರೀಗಳು ಆಶೀರ್ವಚನ ನೀಡಿ, ದೇವ ಮತ್ತು ಧರ್ಮ ತತ್ವದ ಸತ್ಯ ತಿಳಿಯುವ ಕಾರ್ಯವಾಗಬೇಕು. ಸಮಾನ ಅವಕಾಶದೊಂದಿಗೆ ಎಲ್ಲ ಧರ್ಮಗಳನ್ನು ಅಳವಡಿಸಿಕೊಂಡು ಸರ್ವ ಮತ ತತ್ವದೊಂದಿಗೆ ಬದುಕಿನಲ್ಲಿ ನೆಮ್ಮದಿ ಕಾಣಲು ಸಾಧ್ಯ ಎಂದರು.

ದಾನಪ್ಪ ಹುಲಜತ್ತಿ, ಮಲ್ಲಣ್ಣ ಕಕಮರಿ, ಸಂಜಯ ಜವಳಗಿ, ಸಿದ್ದರಾಮ ಹಾವಿನಾಳ, ಶಂಕರ ಜಾಲಿಗಿಡದ, ಬಸವರಾಜ ದಲಾಲ, ಪ್ರಕಾಶ ಮಂಡಿ, ಪ್ರಶಾಂತ ಕೊಳಕಿ, ಕಿರಣ ಆಳಗಿ, ಶಂಕರ ಬಾಡಗಿ, ಬಸವರಾಜ ಜಾಡಗೌಡ, ಮಲ್ಲಪ್ಪ ಹೂಲಿ, ಶೇಖರ ಜವಳಗಿ, ಮಹಾರುದ್ರ ಬರಗಲ್ಲ, ಭೀಮಶಿ ಬಂಡಿವಡ್ಡರ ಸೇರಿದಂತೆ ಅನೇಕರಿದ್ದರು.

-----

ಕೋಟ್

ಧರ್ಮ ಉಳಿವಿಗಾಗಿ ಧಾರ್ಮಿಕ ಆಚರಣೆಗಳು ಅವಶ್ಯ. ಆದರೆ, ಕೆಲವರು ದುರಾಸೆಗಾಗಿ ಹಿಂದೂ ಧಾರ್ಮಿಕ ಆಚರಣೆಗಳನ್ನು ಟೀಕಿಸುತ್ತಿದ್ದಾರೆ. ಅಂತಹವರಿಂದ ಸಮಾಜ ಎಂದೂ ಸುಧಾರಣೆಯಾಗದು. ಇಂಥವರು ಟೀಕಿಸಿದ ಮಾತ್ರಕ್ಕೆ ದೈವತ್ವದ ಅಸ್ಮಿತೆಗೆ ಧಕ್ಕೆಯಾಗದು, ಅದು ಚಿರನೂತನವಾಗಿರುತ್ತದೆ.

ಸಿದ್ದು ಸವದಿ, ತೇರದಾಳ ಕ್ಷೇತ್ರದ ಶಾಸಕ

--

ಬಾಕ್ಸ್ಕಳಸ - ಗೋಪುರ ಕೊಡುಗೆ

ದೇಗುಲದ ಪುನರುತ್ಥಾನ ಮತ್ತು ಕಾಡಸಿದ್ಧೇಶ್ವರ ದೇವಾಲಯದ ಗೋಪುರ ನಿರ್ಮಾಣಕ್ಕೆ ₹2 ಕೋಟಿಗೂ ಹೆಚ್ಚು ಧನ ಸಹಾಯ ಹರಿದು ಬಂದಿದೆ. ಗೋಪುರ ನಿರ್ಮಾಣದಲ್ಲಿ ಶಿವಪೂಜಿ ಹಾಗು ಗೊಂಬಿ ಕುಟುಂಬ, ಬಂಗಾರ ಲೇಪಿತ ಕಳಸವನ್ನು ಮಹಾಂತೇಶ ನಿಂಗಪ್ಪ ಯಾದವಾಡ ಕುಟುಂಬದ ಕೊಡುಗೆಯಿಂದ ಕಾರ್ಯಕ್ರಮ ಸಂಭ್ರಮದಿಂದ ಜರುಗುತ್ತಿದೆ ಎಂದು ಮಂಗಳವಾರಪೇಟ ದೈವ ಮಂಡಳಿ ಧುರೀಣ ಶ್ರೀಶೈಲ ದಭಾಡಿ ಸಭೆಗೆ ವಿವರಿಸಿದರು.

--

ಫೋಟೊ-೧೯ಆರ್‌ಬಿಕೆ೨/