ಕೃಷಿಯಿಂದ ನಿರುದ್ಯೋಗ ಸಮಸ್ಯೆ ನಿವಾರಿಸಿ ಆರ್ಥಿಕ ಮಟ್ಟವನ್ನು ವೃದ್ಧಿಸಿ ಕೊಳ್ಳಬಹುದು. ಸರ್ಕಾರದಿಂದ ಸಿಗುವ ಸಹಾಯಧನ ಪಡೆದು ಆರ್ಥಿಕ ಪ್ರಗತಿ ಸಾಧಿಸಬಹುದು.

ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ

ಸ್ವಾವಲಂಬಿ ಬದುಕಿಗೆ ಕೃಷಿ ಚಟುವಟಿಕೆ ಪೂರಕ. ಇತ್ತೀಚಿನ ದಿನಗಳಲ್ಲಿ ಕೃಷಿಕರ ಸಂಖ್ಯೆ ಕಡಿಮೆಯಾಗುತ್ತಿದೆ. ದೇಶಿಯ ಸಂತತಿ ವೃದ್ಧಿಸಿ ಜಾತ್ರೆಯಲ್ಲಿ ಹೆಚ್ಚಾಗಿ ಭಾಗವಹಿಸಬೇಕು ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.

ತ್ಯಾಮಗೊಂಡ್ಲು ಹೋಬಳಿಯ ಮಹಿಮಾಪುರದ ಶ್ರೀ ಮಹಿಮರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವ ಪ್ರಯುಕ್ತ ಪಶುಸಂಗೋಪನಾ ಇಲಾಖೆ ಏರ್ಪಡಿಸಿದ್ದ ದನಗಳ ಜಾತ್ರೆಯಲ್ಲಿ ಆಯ್ಕೆಯಾದ ಉತ್ತಮ ರಾಸುಗಳಿಗೆ ಬಹುಮಾನ ವಿತರಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕೃಷಿಯಿಂದ ನಿರುದ್ಯೋಗ ಸಮಸ್ಯೆ ನಿವಾರಿಸಿ ಆರ್ಥಿಕ ಮಟ್ಟವನ್ನು ವೃದ್ಧಿಸಿ ಕೊಳ್ಳಬಹುದು. ಸರ್ಕಾರದಿಂದ ಸಿಗುವ ಸಹಾಯಧನ ಪಡೆದು ಆರ್ಥಿಕ ಪ್ರಗತಿ ಸಾಧಿಸಬಹುದು. ರೈತರು ಪಶುಗಳನ್ನು ಸಾಕುವ ಮೂಲಕ ಆದಾಯ ಪಡೆಯಬಹುದು. ಕೃಷಿಯ ಜೊತೆಗೆ ಇತರೆ ಬೆಳೆಗಳಿಗೂ ಮನ್ನಣೆ ನೀಡಿ ಲಾಭದಾಯಕ ಬೆಳೆಗಳನ್ನು ಬೆಳೆಯುವ ಜೊತೆಗೆ ಪಶು ಸಂಗೋಪನೆ ಬಗ್ಗೆಯೂ ಹೆಚ್ಚು ಗಮನ ಹರಿಸಬೇಕು ಎಂದು ಹೇಳಿದರು.

ಬಹುಮಾನ ವಿತರಣೆ:

ಹಾಲು ಹಲ್ಲಿನ ಹೋರಿಗಳಲ್ಲಿ ಮಾವಿನಕುಂಟೆ ರಾಮಮೂರ್ತಿ ಪ್ರಥಮ, ಮಹಿಮಾಪುರದ ಚಿಕ್ಕನರಸಿಂಹಯ್ಯ ದ್ವಿತೀಯ, ಎರಡು ಹಲ್ಲಿನ ಹೋರಿಗಳಲ್ಲಿ ಹೊಸಪಾಳ್ಯದ ಸಂತೋಷಕುಮಾರ್ ಪ್ರಥಮ, ಲಕ್ಕೇನಹಳ್ಳಿ ಸಿದ್ದೇಗೌಡ ದ್ವಿತೀಯ, ನಾಲ್ಕು ಹಲ್ಲಿನ ಹೋರಿಗಳಲ್ಲಿ ವೀರನಾಯ್ಕನಹಳ್ಳಿಯ ಅನಂತಕುಮಾರ್ ಪ್ರಥಮ, ಹಂದಿಗುಟ್ಟೆ ರಮೇಶ್ ದ್ವಿತೀಯ, ಆರು ಹಲ್ಲಿನ ಹೋರಿಗಳಲ್ಲಿ ಮೂಡ್ಲಪಾಳ್ಯದ ಶ್ರೀಧರ್ ಪ್ರಥಮ, ಬಾಯಿಕೂಡಿದ ಹೋರಿಗಳಲ್ಲಿ ವೀರನಾಯ್ಕನಹಳ್ಳಿಯ ಅನಂತಕುಮಾರ್ ಪ್ರಥಮ, ದೊಂಬರಹಳ್ಳಿ ರಮೇಶ್ ದ್ವಿತೀಯ, ಎರಡು ಹಲ್ಲು ಹೋರಿಗಳಲ್ಲಿ ಕುಲುವನಹಳ್ಳಿ ರಮೇಶ್, ಮದಲಕೋಟೆ ರಾಜು ಪ್ರಥಮ, ಕುಲುವನಹಳ್ಳಿ ಪ್ರಭು ದ್ವಿತೀಯ ಬಹುಮಾನ ಸೇರಿ 5 ರೈತರು ತೃತೀಯ, 28 ರೈತರು ಸಮಾಧಾನಕರ ಬಹುಮಾನ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಎನ್.ಪಿಎ ಅಧ್ಯಕ್ಷ ಎಂ.ಕೆ.ನಾಗರಾಜು, ಗ್ರಾಪಂ ಅಧ್ಯಕ್ಷೆ ಸುನಂದಮ್ಮ, ಮುಖಂಡ ಅಗಳಕುಪ್ಪೆ ಗೋವಿಂದರಾಜು, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಜಗದೀಶ್, ಗ್ರಾಪಂ ಮಾಜಿ ಅಧ್ಯಕ್ಷ ಶೈಲೇಂದ್ರ, ಬಿ.ಟಿ.ರಾಮಚಂದ್ರ, ಶ್ರೀನಿವಾಸ್, ಧಾರ್ಮಿಕದತ್ತಿ ಇಲಾಖೆಯ ಇಒ ಬೃಂದಾ, ಪಿಡಿಒ ಮೋಹನಕುಮಾರ್, ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಶಿವರಾಮು, ಡಾ.ಮಸೂದ್ ಖಾನ್, ಪಶುವೈದ್ಯರಾದ ಡಾ.ಬಾಲಸುಬ್ರಹ್ಮಣ್ಯ. ಡಾ.ಚಂದ್ರಶೇಖರ್, ಡಾ.ಪವಿತ್ರಾ, ಡಾ.ಅರುಣ್, ಮಲ್ಲೇಶ್, ನಾಗರಾಜು, ವೀರಭದ್ರಯ್ಯ, ಅಶೋಕ್, ಮುಖಂಡರಾದ ಭೂಸಿರಿ ಮಂಮಜುನಾಥ್ ಬಿ.ಟಿ.ರಾಮಚಂದ್ರ, ಶ್ರೀನಿವಾಸ್, ಕಾಚನಹಳ್ಳಿ ಮನು ಮೊದಲಾದವರು ಹಾಜರಿದ್ದರು.