ಸಾರಾಂಶ
ಕಾರ್ಕಳ ತಾಲೂಕಿನ ಬೈಲೂರು ಗ್ರಾಮದ ಧೃತಿ ಶ್ರೀಯಾನ್ ಎಂಬ ಪುಟ್ಟ ಹೆಣ್ಣು ಮಗುವಿಗೆ ಶ್ರವಣ ಸಮಸ್ಯೆಯಿಂದಾಗಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ತೊಂದರೆ ಎದುರಾಗುತ್ತಿತ್ತು. ಈ ಪರಿಸ್ಥಿತಿಯನ್ನು ತಿಳಿದ ಶಾಸಕ ವಿ. ಸುನಿಲ್ ಕುಮಾರ್ ಅವರು ಮಾನವೀಯ ಸ್ಪಂದನೆಯೊಂದಿಗೆ 6.50 ಲಕ್ಷ ರು. ವೆಚ್ಚದ ಕಾಕ್ಲಿಯರ್ ಇಂಪ್ಲಾಂಟ್ ಸಾಧನವನ್ನು ಮಗುಗೆ ವಿತರಿಸಿದರು.
ಕನ್ನಡಪ್ರಭ ವಾರ್ತೆ ಕಾರ್ಕಳ
ಶ್ರವಣ ಸಮಸ್ಯೆಯಿದ್ದ ಮಗುವಿಗೆ ಶಾಸಕ ವಿ. ಸುನಿಲ್ ಕುಮಾರ್, ಕಾಕ್ಲಿಯರ್ ಇಂಪ್ಲಾಂಟ್ ಸಾಧನ ವಿತರಿಸಿದರು.ಕಾರ್ಕಳ ತಾಲೂಕಿನ ಬೈಲೂರು ಗ್ರಾಮದ ಧೃತಿ ಶ್ರೀಯಾನ್ ಎಂಬ ಪುಟ್ಟ ಹೆಣ್ಣು ಮಗುವಿಗೆ ಶ್ರವಣ ಸಮಸ್ಯೆಯಿಂದಾಗಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ತೊಂದರೆ ಎದುರಾಗುತ್ತಿತ್ತು. ಈ ಪರಿಸ್ಥಿತಿಯನ್ನು ತಿಳಿದ ಶಾಸಕ ವಿ. ಸುನಿಲ್ ಕುಮಾರ್ ಅವರು ಮಾನವೀಯ ಸ್ಪಂದನೆಯೊಂದಿಗೆ 6.50 ಲಕ್ಷ ರು. ವೆಚ್ಚದ ಕಾಕ್ಲಿಯರ್ ಇಂಪ್ಲಾಂಟ್ ಸಾಧನವನ್ನು ಮಗುಗೆ ವಿತರಿಸಿದರು.ಶ್ರವಣದೋಷ ಹೊಂದಿರುವ ಮಕ್ಕಳಲ್ಲಿ ಶ್ರವಣ ಸಾಮರ್ಥ್ಯವನ್ನು ಪುನಃ ಸ್ಥಾಪಿಸಲು ನೆರವಾಗುವ ಈ ಅತ್ಯಾಧುನಿಕ ಎಲೆಕ್ಟ್ರಾನಿಕ್ ಸಾಧನದ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಬೆಂಗಳೂರಿನಲ್ಲಿ ನಡೆಯಲಿದೆ. ಮುಂದಿನ ಚಿಕಿತ್ಸಾ ವೆಚ್ಚಕ್ಕೂ ಸಹಾಯ ಮಾಡಲು ತಾವಿರುವುದಾಗಿ ಶಾಸಕರು ಕುಟುಂಬಕ್ಕೆ ಭರವಸೆ ನೀಡಿದ್ದು, ಈ ಮಾತು ಧೃತಿ ಶ್ರೀಯಾನ್ ಕುಟುಂಬಕ್ಕೆ ದೊಡ್ಡ ಆತ್ಮಸ್ಥೈರ್ಯ ನೀಡಿದೆ.
ಮಗುವಿನ ಆರೋಗ್ಯ ಸುಧಾರಣೆಗೆ ಅಗತ್ಯ ನೆರವು ದೊರೆತಿರುವ ಹಿನ್ನೆಲೆಯಲ್ಲಿ ಕುಟುಂಬದವರು ಶಾಸಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಮಾನವೀಯತೆಗೂ, ಸಾಮಾಜಿಕ ನಿರ್ವಹಣೆಯೊಗೂ ಆದರ್ಶವಾಗಿರುವ ಈ ನೆರವು ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ.;Resize=(128,128))
;Resize=(128,128))
;Resize=(128,128))