ಕನ್ನಡಪ್ರಭ ವಾರ್ತೆ ಶಿರಾ ಶಿರಾ ತಾಲೂಕಿನ ಗಡಿ ಭಾಗಕ್ಕೆ ಹೊಂದಿಕೊಂಡ ಬುಕ್ಕಾಪಟ್ಟಣ ಹೋಬಳಿಯ ಕಟ್ಟಕಡೆಯ ಗ್ರಾಮ ಗುಂಗುರುಪೆಂಟೆಯಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಅಡಿಯಲ್ಲಿ ೨.೮೫ ಲಕ್ಷ ರು ಅಂದಾಜು ವೆಚ್ಚದಲ್ಲಿ ಬ್ರಿಡ್ಜ್ ಕಮ್ ಮ್ಯಾರೇಜ್ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಮತ್ತು ೭೪.೪೭ ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿಗಳಿಗೆ ಶಾಸಕ ಸಿ ಬಿ ಸುರೇಶ್ ಬಾಬು ರವರು ಶಂಕುಸ್ಥಾಪನೆ ನೆರವೇರಿಸಿ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮನೆ ಬಾಗಿಲಿಗೆ ಮನೆ ಮಗ ಕಾರ್ಯಕ್ರಮದಲ್ಲಿ ಭೇಟಿ ನೀಡಿದಾಗ ಸಮಸ್ಯೆಗಳ ಬಗ್ಗೆ ಅರಿತು ಇಲ್ಲಿನ ಗ್ರಾಮಸ್ಥರ ಅಳಲನ್ನು ಆಲಿಸಿ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಗ್ರಾಮದಲ್ಲಿ ೭೪.೪೭ ಲಕ್ಷ ರು ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿ ಚಾಲನೆ ನೀಡಲಾಗಿದೆ. ಈ ಭಾಗದ ರೈತರ ಕೊಳವೆಬಾವಿಗಳು ಸುಭದ್ರ ಸ್ಥಿತಿಯಲ್ಲಿರುವ ಉದ್ದೇಶದಿಂದ ಭದ್ರ ಮೇಲ್ದಂಡೆ ಯೋಜನೆ ಅಡಿಯಲ್ಲಿ ೨.೮೫ ಕೋಟಿ ವೆಚ್ಚದಲ್ಲಿ ಸೇತುವೆ ಹಾಗೂ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ್ದು ಇದರಿಂದ ರೈತರು ವಿದ್ಯಾರ್ಥಿಗಳು ಹಾಗೂ ಸಾಮಾನ್ಯ ಜನತೆಗೆ ಸಂಚಾರ ಸೌಲಭ್ಯ ಸುಧಾರಿಸಿ ಹೆಚ್ಚಿನ ಅನುಕೂಲವಾಗಲಿದೆ ಎಂದರು. ಕಾರ್ಯಕ್ರಮದಲ್ಲಿ ಮುಖಂಡರಾದ ಮುದ್ದು ಗಣೇಶ್, ಶಾಂತಕುಮಾರ್, ಗ್ರಾ ಪಂ ಸದಸ್ಯರಾದ ನರಸಿಂಹಮೂರ್ತಿ, ಕರಿಯಣ್ಣ, ನೇರಳಗುಡ್ಡ ಪಿ ಡಿ ಓ ಸತೀಶ್, ಶಿವಕುಮಾರ್ ಆರ್, ಆರ್ ಸಿ ರಾಜಣ್ಣ, ವಿ ಎಸ್ ಎಸ್ ಎನ್ ಉಪಾಧ್ಯಕ್ಷರಾದ ಮಂಜುನಾಥಪ್ಪ ಇತರರಿದ್ದರು.
ಗುಂಗುರುಪೆಂಟೆಯಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕ ಸುರೇಬಾಬು ಚಾಲನೆ
ಗುಂಗುರುಪೆಂಟೆಯಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕ ಸುರೇಬಾಬು ಚಾಲನೆ
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.