ಸಾರಾಂಶ
ಮಲೆನಾಡು ಭಾಗದ ದಬ್ಬೆ-ಕನ್ನಾಪುರ ಗ್ರಾಮದ ರು. ೧ ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನಡೆಸಿ ಮಾತನಾಡಿದ ಅವರು ಕಳೆದ ವರ್ಷ ಅತಿವೃಷ್ಟಿಯಿಂದ ಮಲೆನಾಡು ಭಾಗದ ರಸ್ತೆಗಳು ತೀವ್ರವಾಗಿ ಹದಗೆಟ್ಟಿತ್ತು. ಈ ಬಗ್ಗೆ ಖುದ್ದು ಪರಿಶೀಲನೆ ನಡೆಸಿ ಸಂಬಂಧ ಪಟ್ಟ ಲೋಕೋಪಯೋಗಿ ಮಂತ್ರಿಗಳಿಗೆ ಶೀಘ್ರವೇ ರಸ್ತೆ ಹಾಗೂ ಸೇತುವೆ ನಿರ್ಮಿಸಲು ಹೆಚ್ಚಿನ ಅನುದಾನ ನೀಡುವಂತೆ ಮನವಿ ಸಲ್ಲಿಸಲಾಗಿದೆ. ಮಂತ್ರಿಗಳು ಕೂಡ ಸ್ಪಂದಿಸಿದ್ದು ಪಟ್ಟಣ ಹೊಳೆಬೀದಿಯ ಸೇತುವೆಗೆ ರು. ೩೭ ಕೋಟಿ ಅನುದಾನ ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆದಿರುವುದು ತಾವು ಪಟ್ಟ ಶ್ರಮಕ್ಕೆ ಫಲ ದೊರಕಿದೆ ಎಂದರು.
ಕನ್ನಡಪ್ರಭ ವಾರ್ತೆ ಬೇಲೂರು
ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಹಾಳಾಗಿರುವ ರಸ್ತೆ ಮತ್ತು ಸೇತುವೆಗಳಿಗೆ ಕಾಯಕಲ್ಪ ನೀಡುವ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.ಮಲೆನಾಡು ಭಾಗದ ದಬ್ಬೆ-ಕನ್ನಾಪುರ ಗ್ರಾಮದ ರು. ೧ ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನಡೆಸಿ ಮಾತನಾಡಿದ ಅವರು ಕಳೆದ ವರ್ಷ ಅತಿವೃಷ್ಟಿಯಿಂದ ಮಲೆನಾಡು ಭಾಗದ ರಸ್ತೆಗಳು ತೀವ್ರವಾಗಿ ಹದಗೆಟ್ಟಿತ್ತು. ಈ ಬಗ್ಗೆ ಖುದ್ದು ಪರಿಶೀಲನೆ ನಡೆಸಿ ಸಂಬಂಧ ಪಟ್ಟ ಲೋಕೋಪಯೋಗಿ ಮಂತ್ರಿಗಳಿಗೆ ಶೀಘ್ರವೇ ರಸ್ತೆ ಹಾಗೂ ಸೇತುವೆ ನಿರ್ಮಿಸಲು ಹೆಚ್ಚಿನ ಅನುದಾನ ನೀಡುವಂತೆ ಮನವಿ ಸಲ್ಲಿಸಲಾಗಿದೆ. ಮಂತ್ರಿಗಳು ಕೂಡ ಸ್ಪಂದಿಸಿದ್ದು ಪಟ್ಟಣ ಹೊಳೆಬೀದಿಯ ಸೇತುವೆಗೆ ರು. ೩೭ ಕೋಟಿ ಅನುದಾನ ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆದಿರುವುದು ತಾವು ಪಟ್ಟ ಶ್ರಮಕ್ಕೆ ಫಲ ದೊರಕಿದೆ ಎಂದರು.
ಚುನಾವಣೆ ಸಂದರ್ಭದಲ್ಲಿ ರಾಜಕೀಯ ಮಾಡುವುದು ಸಾಮಾನ್ಯ, ಆದರೆ ಚುನಾವಣೆ ಬಳಿಕ ಅಭಿವೃದ್ಧಿ ನಮ್ಮ ಆಶಯವಾಗಿರಬೇಕೇ ಹೊರತು ಅಡ್ಡಗಾಲು ಹಾಕುವ ರಾಜಕೀಯ ಮಾಡಬಾರದು. ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆಗೊಂಡ ಬೇಲೂರಿನ ಅಭಿವೃದ್ಧಿಗೆ ಪಕ್ಷಾತೀತವಾಗಿ ಸಹಕಾರ ನೀಡಬೇಕು. ಪ್ರತಿ ರಸ್ತೆ ಕಾಮಗಾರಿಗಳಲ್ಲಿ ಗುಣಮಟ್ಟಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಈ ವಿಷಯದಲ್ಲಿ ಯಾವುದೇ ತಾವು ರಾಜಿಮಾಡಿಕೊಳ್ಳುವುದಿಲ್ಲ ಎಂದರು.ಸದನದಲ್ಲಿ ಪ್ರತಿಭಟನೆ: ಮಲೆನಾಡು ಭಾಗದಲ್ಲಿ ಕಾಡಾನೆ ಉಪಟಳ ಹೆಚ್ಚಾಗಿದೆ. ಈ ಬಗ್ಗೆ ಹತ್ತಾರು ಬಾರಿ ಅರಣ್ಯ ಮಂತ್ರಿಗಳು ಮತ್ತು ಸರ್ಕಾರವನ್ನು ಒತ್ತಾಯಿಸಿದರೂ ಕೂಡ ಯಾವುದೇ ಪ್ರಯೋಜವಾಗಿಲ್ಲ. ಕಾಡಾನೆ ತುಳಿತಕ್ಕೆ ಬಲಿಯಾದ ಸಂದರ್ಭದಲ್ಲಿ ಸರ್ಕಾರ ನೆಪ ಮಾತ್ರಕ್ಕೆ ಸಾಂತ್ವನ ಹೇಳುವ ಕೆಲಸ ಮಾಡುತ್ತಿದೆಯೇ ಹೊರತು ಇಲ್ಲಿಯತನಕ ಶಾಶ್ವತವಾದ ಪರಿಹಾರ ನೀಡಲು ಮೀನಾಮೇಷ ಎಣಿಸುತ್ತಿದೆ. ಈ ಬಾರಿ ನಡೆಯುವ ಸದನದಲ್ಲಿ ಪ್ರತಿಭಟನೆ ಖಚಿತವೆಂದು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಚೇತನ್, ಗ್ರಾಮದ ರಮೇಶ್, ಸುಂದರೇಶ್, ಯುವರಾಜ್, ಯೋಗೀಶಗೌಡ, ಸಂಪತ್, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಕೃಷ್ಣೇಗೌಡ, ದಬ್ಬೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಾಸು, ರೇವತಿ ಸೇರಿದಂತೆ ಇನ್ನು ಮುಂತಾದವರು ಹಾಜರಿದ್ದರು.