ಸಾರಾಂಶ
ಕರ್ನಾಟಕ ವಿಧಾನ ಮಂಡಲದ ಸಾರ್ವಜನಿಕ ಲೆಕ್ಕ ಪತ್ರ ಸಮಿತಿಯು ಲಡಾಖ್‌ನಲ್ಲಿ ಅಧ್ಯಯನ ಪ್ರವಾಸ ಕೈಗೊಂಡಿದ್ದು, ಅದರ ಅಂಗವಾಗಿ ಶುಕ್ರವಾರ ಲಡಾಖ್ ಕೇಂದ್ರಾಡಳಿತ ಪ್ರದೇಶದ ಲೆಫ್ಟಿನೆಂಟ್ ಗೌರ್ನರ್ ಬ್ರಿಗೇಡಿಯರ್ ಡಾ.ಬಿ.ಡಿ ಶರ್ಮ ಅವರನ್ನು ಸಮಿತಿ ಸದಸ್ಯರು ರಾಜಭವನದಲ್ಲಿ ಭೇಟಿ ಮಾಡಿ ಚರ್ಚಿಸಲಾಯಿತು ಎಂದು ಶಾಸಕ ಬಿ.ಸುರೇಶ್ ಗೌಡ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ತುಮಕೂರುಕರ್ನಾಟಕ ವಿಧಾನ ಮಂಡಲದ ಸಾರ್ವಜನಿಕ ಲೆಕ್ಕ ಪತ್ರ ಸಮಿತಿಯು ಲಡಾಖ್‌ನಲ್ಲಿ ಅಧ್ಯಯನ ಪ್ರವಾಸ ಕೈಗೊಂಡಿದ್ದು, ಅದರ ಅಂಗವಾಗಿ ಶುಕ್ರವಾರ ಲಡಾಖ್ ಕೇಂದ್ರಾಡಳಿತ ಪ್ರದೇಶದ ಲೆಫ್ಟಿನೆಂಟ್ ಗೌರ್ನರ್ ಬ್ರಿಗೇಡಿಯರ್ ಡಾ.ಬಿ.ಡಿ ಶರ್ಮ ಅವರನ್ನು ಸಮಿತಿ ಸದಸ್ಯರು ರಾಜಭವನದಲ್ಲಿ ಭೇಟಿ ಮಾಡಿ ಚರ್ಚಿಸಲಾಯಿತು ಎಂದು ಶಾಸಕ ಬಿ.ಸುರೇಶ್ ಗೌಡ ತಿಳಿಸಿದ್ದಾರೆ.ಲೆಫ್ಟಿಂನೆಂಟ್ ಗೌರ್ನರ್ ಸಲಹೆಗಾರ ಡಾ. ಪವನ್ ಕೊತ್ವಾಲ್ ಮಾತನಾಡಿ, ಲಡಾಖ್ ಕೇಂದ್ರಾಡಳಿತ ಪ್ರದೇಶದ ಕಾರ್ಯ ಚಟುವಟಿಕೆ, ಆರ್ಥಿಕ ಪರಿಸ್ಥಿತಿ, ಆರೋಗ್ಯ, ಶಿಕ್ಷಣ ಕ್ಷೇತ್ರಕ್ಕೆ ನೀಡುತ್ತಿರುವ ಪ್ರೋತ್ಸಾಹದ ಬಗ್ಗೆ ವಿವರಿಸಿದರು.
ಅಲ್ಲಿನ ಪೊಲೀಸ್ ಮಹಾ ನಿರ್ದೇಶಕ ಡಾ.ಎಸ್.ಡಿ. ಸಿಂಗ್ ಜಂವಾಲ್ ಮಾತನಾಡಿ, ಲಡಾಖ್‌ನ ಕಾನೂನು ಸುವ್ಯವಸ್ಥೆ ಬಗ್ಗೆ ವಿವರಿಸಿದರು.ಸಾರ್ವಜನಿಕ ಲೆಕ್ಕ ಪತ್ರ ಸಮಿತಿಯ ಸದಸ್ಯರಾದ ಲಕ್ಷ್ಮಣ ಸಂಗಪ್ಪ ಸವದಿ, ಜಿ.ಟಿ.ದೇವೇಗೌಡರ, ಗುಬ್ಬಿ ಶ್ರೀನಿವಾಸ್, ಎಚ್.ಸಿ.ಬಾಲಕೃಷ್ಣ, ಎಸ್.ಆರ್.ವಿಶ್ವನಾಥ್. ಬಿ.ಕೆ.ಹರಿಪ್ರಸಾದ್, ರಾಘವೇಂದ್ರ ಹಿಟ್ನಾಳ್, ಶಶಿಲ್ ನಮೋಶಿ, ಶರವಣ, ಪ್ರತಾಪ್ ಸಿಂಹ ನಾಯಕ್, ಸಮಿತಿಯ ಉಪ ಕಾರ್ಯದರ್ಶಿ ಶ್ರೀನಿಧಿ, ಅಧೀನ ಕಾರ್ಯದರ್ಶಿ ಬಾಲ ಸುಬ್ರಮಣ್ಯ, ಶಾಖಾಧಿಕಾರಿ ಶ್ರೀ ಗಂಗಾಧರ್ ಹಾಜರಿದ್ದರು.