ಸಾರಾಂಶ
ಆಹಾರೋದ್ಯಮಿಯಾಗಲು ಸರ್ಕಾರದಿಂದ ನೆರವು ಬಯಸುವವರು ಕರ್ನಾಟಕ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮ (ಕೆಪೆಕ್) ಸಂಪರ್ಕಿಸಬಹುದು.
ಆಹಾರೋದ್ಯಮಿಯಾಗಲು ಸರ್ಕಾರದಿಂದ ನೆರವು ಬಯಸುವವರು ಕರ್ನಾಟಕ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮ (ಕೆಪೆಕ್) ಸಂಪರ್ಕಿಸಬಹುದು. ನಿಗಮದ ಸಹಾಯವಾಣಿ 080 22271192 ಅಥವಾ 22271193 ಅಥವಾ ಆಯಾ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರ ಕಚೇರಿಯನ್ನೂ ಸಂಪರ್ಕಿಸಬಹುದು.
ಈಗಾಗಲೇ ಆಹಾರ ಸಂಸ್ಕರಣೆಯಲ್ಲಿ ತೊಡಗಿರುವವರು ಅಥವಾ ಹೊಸದಾಗಿ ಆರಂಭಿಸುವವರು ಸಂಪರ್ಕಿಸಿದ ತಕ್ಷಣ, ನಿಮಗೆ ಒಬ್ಬರು ಜಿಲ್ಲಾ ಸಂಪನ್ಮೂಲ ವ್ಯಕ್ತಿಯನ್ನು ನಿಯೋಜಿಸುತ್ತಾರೆ. ಆ ಜಿಲ್ಲಾ ಸಂಪನ್ಮೂಲ ವ್ಯಕ್ತಿಯು ನಿಮ್ಮ ಆಸಕ್ತಿ, ಅಗತ್ಯವನ್ನು ತಿಳಿದು ಅಗತ್ಯವಾದ ಸಮಗ್ರ ಯೋಜನಾ ವರದಿ ಸಿದ್ಧಪಡಿಸಿ, ಅರ್ಜಿ ಸಲ್ಲಿಸಲು ಸಹಕರಿಸುತ್ತಾರೆ. ಕಂಪನಿ ಸ್ಥಾಪನೆ, ನೊಂದಣಿ, FSSAI, UDYAM, GST ಸರ್ಟಿಫಿಕೇಟ್ ಪಡೆಯಲು ಕೂಡ ನೆರವಾಗುತ್ತಾರೆ.
ಕೇಂದ್ರ ಸರ್ಕಾರದ ಆಹಾರ ಸಂಸ್ಕರಣಾ ಮಂತ್ರಾಲಯವು ಸ್ಥಾಪಿಸಿರುವ ಆನ್ಲೈನ್ ಪೋರ್ಟಲ್ ನಲ್ಲಿಯೇ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲೂ ಜೊತೆಗಿರುವ ಜಿಲ್ಲಾ ಸಂಪನ್ಮೂಲ ವ್ಯಕ್ತಿಯು, ಫಲಾನುಭವಿ ಅರ್ಜಿ ಸಲ್ಲಿಕೆಯ ನಂತರ ಅರ್ಜಿಯು ಜಿಲ್ಲಾ ಮಟ್ಟದ ಸಮಿತಿಗೆ ರವಾನೆಯಾಗುತ್ತದೆ. ಜಿಲ್ಲಾ ಮಟ್ಟದ ಸಮಿತಿಯ ಅನುಮೋದನೆಯೊಂದಿಗೆ ಅರ್ಜಿಗಳನ್ನು ಬ್ಯಾಂಕ್ ಗಳಿಗೆ ಆನ್ ಲೈನ್ ಮುಖಾಂತರ ರವಾನಿಸಲಾಗುತ್ತದೆ. ಎಲ್ಲಾ ಅವಶ್ಯಕ ಮಾಹಿತಿ/ದಾಖಲಾತಿ ಇದ್ದಲ್ಲಿ ಬ್ಯಾಂಕ್ ಶಾಖಾ ಮುಖ್ಯಸ್ಥರು ಸಾಲ ಮಂಜೂರಾತಿ ಮಾಡಿ ಸಾಲವನ್ನು ಬಿಡುಗಡೆ ಮಾಡುತ್ತಾರೆ.
ಸಾಲ ನೀಡುವ ಬ್ಯಾಂಕು ಏನೇನು ಕೇಳುತ್ತದೆ? ಗ್ಯಾರಂಟಿ ಕೊಡಬೇಕಾ?
ಸಾಲ ನೀಡುವ ಬ್ಯಾಂಕು ನಿಮ್ಮ ಆಹಾರ ಸಂಸ್ಕರಣೆ ಮತ್ತು ಮಾರಾಟ ಕುರಿತ ಸಮಗ್ರ ಯೋಜನಾ ವರದಿ ಕೇಳುತ್ತದೆ. 10 ಲಕ್ಷದ ಒಳಗಿನ
ಸಾಲ ಇದ್ದರೆ ಯಾವುದೇ ಗ್ಯಾರಂಟಿ ಕೇಳದೇ ಸಾಲ ನೀಡುತ್ತದೆ. ಆದರೆ,10 ಲಕ್ಷ ಮೇಲ್ಪಟ್ಟ ಸಾಲಕ್ಕೆ ಬೇಡಿಕೆ ಇದ್ದಲ್ಲಿ ಕನಿಷ್ಠ
ದಾಖಲಾತಿಗಳೊಂದಿಗೆ ಉತ್ಪಾದನಾ ಘಟಕವನ್ನೇ ಗ್ಯಾರಂಟಿಯಾಗಿ ಇರಿಸಿಕೊಂಡು ಸಾಲ ನೀಡುತ್ತದೆ. ಅಗತ್ಯ ಬಿದ್ದಲ್ಲಿ ಸಣ್ಣ
ಉದ್ದಿಮೆದಾರರಿಗೆ ಕೇಂದ್ರ ಸರ್ಕಾರದ ವಿಮಾ ಸೌಲಭ್ಯವಾದ Credit Guarantee Trust for Medium and Small
Enterprises (CGTMSE) ಮೂಲಕ 2 ಕೋಟಿ ರೂಪಾಯಿವರೆಗೂ ಯಾವುದೇ ಅಡಮಾನ ಇಲ್ಲದೆ ಸಾಲ ಪಡೆಯಬಹುದು.
ಯೋಜನೆಯಲ್ಲಿ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲಾತಿಗಳು
ಆಧಾರ್ ಕಾರ್ಡ್
ಪ್ಯಾನ್ ಕಾರ್ಡ್
ರೇಷನ್ ಕಾರ್ಡ್/ವಿದ್ಯುತ್ ಬಿಲ್ಲ್
ಉದ್ದಿಮೆದಾರರ ಫೋಟೋಗಳು
ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ - ಕಳೆದ 6 ತಿಂಗಳು
ಯಂತ್ರೋಪಕರಣಗಳ ವಿವರಗಳು ಮತ್ತು ಕೊಟೇಷನ್
ಬಾಡಿಗೆ/ಲೀಸ್ ಕರಾರು ಪತ್ರ
ಸ್ಥಾಪಿಸಬೇಕಿರುವ ಉದ್ದಿಮೆಯ ವಿವರಗಳು
ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಲು ಯಾರು ಅರ್ಹರಿರುತ್ತಾರೆ?
18 ವರ್ಷ ಮೇಲ್ಪಟ್ಟವರಾಗಿರಬೇಕು
ಕನಿಷ್ಟ ವಿದ್ಯಾರ್ಹತೆಯ ಅವಶ್ಯಕತೆ ಇಲ್ಲ
ಅರ್ಜಿದಾರರು ಉದ್ದಿಮೆಯ ಮಾಲೀಕತ್ವದ ಹಕ್ಕನ್ನು ಹೊಂದಿರಬೇಕು
ಯಾರು ಎಷ್ಟು ಕೊಡುತ್ತಾರೆ..?
ಪ್ರಧಾನ ಮಂತ್ರಿ ಕಿರು ಆಹಾರ ಉದ್ದಿಮೆ ನಿಯಮಬದ್ದಗೊಳಿಸುವಿಕೆ (ಪಿಎಂಎಫ್ಎಂಇ) ಯೋಜನೆಯು ಕೇಂದ್ರ ಪುರಸ್ಕೃತ
ಯೋಜನೆಯಾದರೂ ಸಹ ರಾಜ್ಯ ಸರ್ಕಾರವು ರಾಜ್ಯದ ಉದ್ದಿಮೆದಾರರಿಗೆ ಸಹಾಯ ಹಸ್ತ ಚಾಚುತ್ತಿದೆ. ಯೋಜನೆಯ
ಅನುಷ್ಠಾನದಲ್ಲಿಶೇ. 15 ರಷ್ಟು ಹೆಚ್ಚುವರಿ ಸಹಾಯ ಧನ ಒದಗಿಸುತ್ತಿದೆ. ಯೋಜನೆಯಡಿಯಲ್ಲಿ ಶೇ.35 ರಷ್ಟು ಸಹಾಯ ಧನ
(ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುಪಾತ 60:40) ಹಾಗೂ ರಾಜ್ಯ ಸರ್ಕಾರದ ಹೆಚ್ಚುವರಿ ಸಹಾಯ ಧನ ಶೇ.15 ರಷ್ಟು ಸೇರಿ
ಒಟ್ಟಾರೆಯಾಗಿ ಶೇ.50 ರಷ್ಟು ಸಹಾಯ ಧನವನ್ನು ಫಲಾನುಭವಿಗಳಿಗೆ ಒದಗಿಸಲಾಗುತ್ತಿದೆ. ಸಹಾಯ ಧನದ ಗರಿಷ್ಠ ಮಿತಿ
ರೂ.15.00 ಲಕ್ಷ ರೂಪಾಯಿ. ಇದರಲ್ಲಿ ರಾಜ್ಯ ಸರ್ಕಾರದ ಸಹಾಯಧನ ರೂ.9.00 ಲಕ್ಷ ರೂ. ಹಾಗೂ ಕೇಂದ್ರ ಸರ್ಕಾರದ ಸಹಾಯ
ಧನ 6.00 ಲಕ್ಷ ರೂಪಾಯಿ ಆಗಿರುತ್ತದೆ.
ಕರ್ನಾಟಕ ಕೃಷಿ ಉತ್ಪನ್ನ ನಿಗಮದಿಂದ ದೊರೆಯುವ ಸಹಾಯಗಳು
1) ವೈಯಕ್ತಿಕ ಉದ್ದಿಮೆದಾರರು ಮತ್ತು ರೈತರ ಗುಂಪುಗಳಿಗೆ ಶೇ.50 ರಷ್ಟು ಸಹಾಯ ಧನ
2) ಪ್ರಾಥಮಿಕ ಬಂಡವಾಳ (Seed Capital) - ಸ್ವಸಹಾಯ ಸಂಘಗಳ ಸದಸ್ಯರಿಗೆ ಗರಿಷ್ಟ ರೂ.40,000/- ಕಡಿಮೆ ಬಡ್ಡಿ
ದರದ ಸಾಲ
3) ಸಾಮಾನ್ಯ ಮೂಲ ಸೌಕರ್ಯ ಸ್ಥಾಪನೆಗೆ ಶೇ.35 ರಷ್ಟು ಸಾಲ ಸಂಪರ್ಕಿತ ಸಹಾಯ ಧನ, ಗರಿಷ್ಟ ಸಹಾಯಧನ ರೂ 3.00
ಕೋಟಿ ರೂಪಾಯಿ.
4) ಬ್ರಾಂಡಿಂಗ್ ಮತ್ತು ಮಾರುಕಟ್ಟೆಗೆ ಶೇ.50 ರಷ್ಟು ಸಹಾಯಧನ
5) ಫಲಾನುಭವಿಗಳಿಗೆ ಉಚಿತ ತರಬೇತಿ