337 ಕಿ.ಮೀ. ಸೈಕ್ಲಿಂಗ್‌ ಮೂಲಕಪುದುಚೇರಿಗೆ ತಲುಪಿದ ಸುರೇಶ್‌

| Published : Jan 27 2024, 01:19 AM IST

ಸಾರಾಂಶ

ರಾಜಾಜಿನಗರ ಕ್ಷೇತ್ರದ ಶಾಸಕ ಸುರೇಶ್‌ ಕುಮಾರ್‌ 337 ಕಿ.ಮೀ. ಸೈಕ್ಲಿಂಗ್ ಮೂಲಕ ಪಾಂಡಿಚೇರಿ ತಲುಪಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಶಾಸಕ ಸುರೇಶ್‌ ಕುಮಾರ್‌ ಅವರು ತಮ್ಮ ರಾಜಾಜಿನಗರ ಪೆಡಲ್‌ ಪವರ್‌ ತಂಡದ ಸದಸ್ಯರೊಂದಿಗೆ ಬೆಂಗಳೂರಿನಿಂದ ಪುದುಚೇರಿಗೆ ಸೈಕ್ಲಿಂಗ್‌ ಮೂಲಕ ತಲುಪಿದ್ದಾರೆ.

ಈ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ಬಹಳ ದಿನಗಳ ಯೋಜನೆಯಂತೆ ಅವರ ತಂಡದ ಜತೆ ಒಟ್ಟು 337 ಕಿ.ಮೀ. ಸೈಕ್ಲಿಂಗ್‌ ದೂರ ಕ್ರಮಿಸಿದ್ದಾರೆ. ಗುರುವಾರ ಬೆಳಗ್ಗೆ 4.30ರ ವೇಳೆಗೆ ಬೆಂಗಳೂರಿನ ಬಸವೇಶ್ವರನಗರದಿಂದ ಹೊರಟ ತಂಡವು ಶುಕ್ರವಾರ ಸಂಜೆ 7.30ರ ಹೊತ್ತಿಗೆ ಪುದುಚೇರಿಗೆ ತಲುಪಿದೆ. ಸುಮಾರು 19 ಗಂಟೆಗಳ ಸೈಕ್ಲಿಂಗ್‌ ಅವಧಿಯಲ್ಲಿ ಈ ದೂರು ಕ್ರಮಿಸಲಾಗಿದೆ ಎಂದು ತಿಳಿಸಿದ್ದಾರೆ.

ಯಾತ್ರೆಯಲ್ಲಿ ಸುರೇಶ್‌ ಕುಮಾರ್‌ ಜತೆಗೆ ಹರೀಶ್, ರಾಘವ್, ರಘು, ಅಶ್ವಿನ್, ದಿವಾಕರ್, ಮೋಹನ್ ರಾಜ್, ಮಹೇಶ್, ಅಯ್ಯಪ್ಪ, ಕಿರಣ್, ಗಿರೀಶ್, ಚಂದನ್, ಪ್ರಸನ್ನ, ಸಾಗರ್, ಗೋಪಿನಾಥ್ ಚಕ್ರವರ್ತಿ, ಮಂಜು ಮೈಲಾರ್, ಬಾಲು, ನವೀನ್ ಭಾಗವಹಿಸಿದ್ದರು. ತಂಡದ ಸೈಕ್ಲಿಂಗ್ ಕಾರ್ಯದಲ್ಲಿ ಪೂರ್ಣ ಸಹಕಾರ ನೀಡಿದ ಕಾಮಧೇನು ಸುರೇಶ್, ಧನರಾಜ್ ಮತ್ತು ಪ್ರವೀಣರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.