ಬಾಗಲಕೋಟೆ ಶಾಸಕರಾಗಿ ಪ್ರಮಾಣವಚನ ಸ್ವೀಕಾರದ ನಂತರ ಉಮೇಶ ಮೇಟಿ ಅವರು ಬಾಗಲಕೋಟೆಯ ನವನಗರದ ಪಿಡಬ್ಲೂಡಿ ಕ್ವಾಟ್ರರ್ಸ್‌ನಲ್ಲಿ ನೂತನ ಕಚೇರಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಾಗಲಕೋಟೆ ಶಾಸಕರಾಗಿ ಪ್ರಮಾಣವಚನ ಸ್ವೀಕಾರದ ನಂತರ ಉಮೇಶ ಮೇಟಿ ಅವರು ಬಾಗಲಕೋಟೆಯ ನವನಗರದ ಪಿಡಬ್ಲೂಡಿ ಕ್ವಾಟ್ರರ್ಸ್‌ನಲ್ಲಿ ನೂತನ ಕಚೇರಿ ಉದ್ಘಾಟಿಸಿದರು.

ಈ ವೇಳೆ ವಿವಿಧ ಮುಖಂಡರು, ಅಭಿಮಾನಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿ ಶುಭಾಶಯ ಕೋರಿದರು. ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕಚೇರಿ ಕಾರ್ಯನಿರ್ವಹಿಸಲಿದೆ ಎಂದು ಶಾಸಕ ಉಮೇಶ ಮೇಟಿ ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ಎಸ್.ಎನ್. ರಾಂಪುರ, ಹಿರಿಯ ಮುಖಂಡರಾದ ಶಶಿಕಾಂತ ಪೂಜಾರಿ, ಧರ್ಮಣ್ಣ ಸುನಗದ, ರಾಜು ಎಸ್. ಮನಿಕೇರಿ, ಸುರೇಶ ಜಿಂಗಾಡೆ, ಶಬ್ಬೀರ, ಇಬ್ರಾಹಿಂ ಕಲಾದಗಿ, ಅಡಿವೆಪ್ಪ ಸರೂರ, ಆನಂದ ರಾಥೋಡ, ಮಂಜುಳಾ ಭೂಸಾರಿ, ಅಮೀನ್ ಸಾಬ್ ನದಾಫ್, ಸಿದ್ದಲಿಂಗಪ್ಪ ಗುಳೇದ, ಮಾದೇವಿ ಮೇಟಿ, ಈರಣ್ಣ ಹುಂಡೆಕರ, ರೇಣುಕ ನಾರಾಯಣಕರ, ತೌಶಿಕ್ ಬಾಗೇವಾಡ, ಬರ್ಮು ಪೂಜಾರಿ, ಉಮೇಶ ಲಮಾಣಿ, ಗುಣವಂತಿ ನಿಡೋಣಿ, ನಾಗಮಲ್ಲೇಶ್ವರಿ, ಅನ್ನಪೂರ್ಣ ಜುಮ್ಮನಾಳ, ಗೋಡೆ ಸವಾರ ಹಾಗೂ ಯಲ್ಲಪ್ಪ ಕಲಗೋಡಿ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.